ವಿಕ ಸುದ್ದಿಲೋಕ ಉಡುಪಿ
ಚಿಕ್ಕದಾದರೂ ಎಲ್ಲಮನಸುಗಳ ಮೇಲೆ ಪ್ರಭಾವ ಬೀರುವ ಚುಟುಕು ಸಾಹಿತ್ಯ ವಿಶ್ವಮಟ್ಟದಲ್ಲಿಹಬ್ಬಿ ಹರಡಲಿ ಎಂದು ಪರ್ಯಾಯ ಶಿರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದರು ಹೇಳಿದ್ದಾರೆ.
ಅವರು ಶ್ರೀಕೃಷ್ಣಮಠದ ಸಿಂಹಾಸನದಲ್ಲಿಭಾನುವಾರ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು (ಕಚುಸಾಪ) ನೀಡಿದ ಗೌರವ ಪುರಸ್ಕಾರ ಸ್ವೀಕರಿಸಿ ಆಶೀರ್ವಚನ ನೀಡಿದರು.
ಕಚುಸಾಪ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಉಡುಪಿ ಜಿಲ್ಲಾಘಟಕದ ಪದಾಧಿಕಾರಿಗಳಾದ ಜಿ.ಯು.ನಾಯಕ, ರಾಜು ಎನ್ . ಆಚಾರ್ಯ, ಕೆ.ವಿ. ಶ್ರೀಕಾಂತ್ , ಶೇಖರಗೌಡ ಪಾಟೀಲ, ತನೀಯಾ ಸನಂ ಉಪಸ್ಥಿತರಿದ್ದರು.
ಇದಕ್ಕೂ ಮೊದಲು ರಾಜಾಂಗಣದಲ್ಲಿಪುಸ್ತಕದಾನ, ಚುಟುಕು ಸಂಭ್ರಮ ಕಾರ್ಯಕ್ರಮವನ್ನು ಪರ್ಯಾಯ ಶಿರೂರು ಮಠದ ದಿವಾನ ಡಾ. ಉದಯ ಕುಮಾರ್ ಸರಳತ್ತಾಯ ಉದ್ಘಾಟಿಸಿದರು. ಸಾವಿತ್ರಿ ಮನೋಹರ್ ಕಾರ್ಕಳ, ರಾಜು ಎನ್ . ಆಚಾರ್ಯ ಉಪಸ್ಥಿತರಿದ್ದರು.
ಫೊಟೊ ಕ್ಯಾಪ್ಸನ್ : 25ಯು ಚುಟುಕು: ಪುಸ್ತಕದಾನ, ಚುಟುಕು ಸಂಭ್ರಮ ಕಾರ್ಯಕ್ರಮವನ್ನು ಡಾ. ಉದಯ ಕುಮಾರ್ ಸರಳತ್ತಾಯ ಭಾನುವಾರ ರಾಜಾಂಗಣದಲ್ಲಿಉದ್ಘಾಟಿಸಿದರು.

