ವಿಕ ಸುದ್ದಿಲೋಕ,ಮುದೇನೂರು ಕೆಪಿಎಲ್ 25ಎಮಡಿಆರ್ 1 ಕಾ

Contributed bytirupati8886@gmail.com|Vijaya Karnataka

ಬಳೂಟಗಿ ಗ್ರಾಮದಲ್ಲಿ ಶ್ರೀ ಅಮರೇಶ್ವರ ಭಕ್ತರಿಗೆ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಶ್ರೀ ಅಭಿನವ ಗಜದಂಡ ಸ್ವಾಮೀಜಿ ಅವರು ಮಠದ ಕಾರ್ಯಕ್ರಮಗಳ ಯಶಸ್ಸಿಗೆ ಭಕ್ತರ ಸಹಕಾರ ಅತ್ಯಗತ್ಯ ಎಂದರು. ಜುಲೈ 4 ರಿಂದ 7 ರವರೆಗೆ ಶ್ರೀ ಗುರುಗುಂಟ ಅಮರೇಶ್ವರ ಗುರು ಗಜದಂಡ ಶಿವಾಚಾರ್ಯರ 21ನೇ ಪುಣ್ಯಸ್ಮರಣೋತ್ಸವ, ಗುರುಪಟ್ಟಾಧಿಕಾರ ಮಹೋತ್ಸವ, ವೇದಾಂತ ಸಮ್ಮೇಳನ, ಯಜ್ಞ, ರೈತ ಜನಪದೋತ್ಸವ, ಆರೋಗ್ಯ ಶಿಬಿರ, ಸೈನಿಕರ ಸನ್ಮಾನ ಸೇರಿ ಹಲವು ಕಾರ್ಯಕ್ರಮಗಳು ಜರುಗಲಿವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು.

release of invitation letter for religious program led by shri abhinava gajadanda swamiji

ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ

ಮುದೇನೂರು

‘‘ಮಠ ಹಾಗೂ ಮಠಾಧೀಶರ ಬೆಳವಣಿಗೆಯಲ್ಲಿಹಾಗೂ ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಲು ಭಕ್ತರ ಸಹಾಯ ಮತ್ತು ಸಹಕಾರ ಅವಶ್ಯ,’’ ಎಂದು ಶ್ರೀ ಅಭಿನವ ಗಜದಂಡ ಸ್ವಾಮೀಜಿ ಹೇಳಿದರು.

ಸಮೀಪದ ಬಳೂಟಗಿ ಗ್ರಾಮದಲ್ಲಿನಡೆದ ಶ್ರೀ ಅಮರೇಶ್ವರ ಭಕ್ತರಿಗೆ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಭಾನುವಾರ ಮಾತನಾಡಿದರು.

ಲಿಂಗಸೂರ ತಾಲೂಕಿನ ದೇವರಭೂಪುರ ಅಮರಗುಂಡ ತೋಪಿನಕಟ್ಟಿ ಸಂಸ್ಥಾನ ಬೃಹನ್ಮಠದಲ್ಲಿಜುಲೈ 4ರಂದು ಶ್ರೀ ಗುರುಗುಂಟ ಅಮರೇಶ್ವರ ಗುರು ಗಜದಂಡ ಶಿವಾಚಾರ್ಯರ 21ನೇ ಪುಣ್ಯಸ್ಮರಣೋತ್ಸವ ಹಾಗೂ ಅಭಿನವ ಶ್ರೀ ಗಜದಂಡ ಸ್ವಾಮೀಜಿ ಅವರ 21ನೇ ಗುರುಪಟ್ಟಾಧಿಕಾರ ಮಹೋತ್ಸವ ಹಾಗೂ ವೇದಾಂತ ಸಮ್ಮೇಳನ, ಕಾಶಿ ಜಗದ್ಗುರುಗಳಿಂದ ಧರ್ಮ ಸಂದೇಶ, ಮಹಾರುದ್ರ ಯಜ್ಞ, ರೈತ ಜನಪದೋತ್ಸವ, ಆಯುರ್ವೇದ ಆರೋಗ್ಯ ಶಿಬಿರ, ಯುವ ಜನೋತ್ಸವ, ಸೈನಿಕರ ಹಾಗೂ ಆದರ್ಶ ನೌಕರರಿಗೆ ಸನ್ಮಾನ, ಮಾತೃ ನಮನ, ಆರೋಗ್ಯ ಶಿಬಿರ, ನೇತ್ರ ತಪಾಸಣಾ ಶಿಬಿರ, ಶ್ರೀ ಸದ್ಗುರು ಸಿದ್ದಾರೂಢರ ಮೂರ್ತಿ ಪ್ರತಿಷ್ಠಾಪನೆ, ಶ್ರೀಗಳಿಗೆ ತುಲಾಭಾರ, ಶ್ರೀಮಠದ ನೂತನ ರಥೋತ್ಸವ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜುಲೈ 7ರ ವರೆಗೆ ನಡೆಯಲಿವೆ. ಭಕ್ತರು ಭಾಗವಹಿಸಿ ಯಶಸ್ವಿಗೆ ಸಹಕರಿಸಬೇಕು,’’ ಎಂದರು.

ಮುಖಂಡರಾದ ಬಸಲಿಂಗಯ್ಯ ಹಿರೇಮಠ, ಪಂಪಣ್ಣ ಮದ್ನಾಳ, ರಾಮನಗೌಡ ಪಾಟೀಲ್ , ಶೇಖರಗೌಡ ಪಾಟೀಲ್ , ರಮೇಶ ಎಲಿಗಾರ, ಅಮರೇಗೌಡ ಪಾಟೀಲ್ , ಬಸವರಾಜ ಮೇಟಿ, ದೊಡ್ಡಪ್ಪ ತಳವಗೇರಿ, ಸಿದ್ದನಗೌಡ, ರಮೇಶ ಮದ್ನಾಳ, ಲಕ್ಷತ್ರ್ಮಣ್ಣ ವಡ್ಡರ, ಮಹಾಂತಗೌಡ, ಸೋಮಣ್ಣ, ರವಿಕುಮಾರ ಮಾನಭಾವಿ, ದೊಡ್ಡಪ್ಪ ಮೇಟಿ, ಮಲ್ಲನಗೌಡ, ಶರಣಗೌಡ ಸೇರಿ ಇತರರು ಇದ್ದರು.

ಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿ-

ಪೋಟೊ ಶಿರ್ಷಿಕೆ

ಕೆಪಿಎಲ್ 25ಎಮಡಿಆರ್ 1-ಮುದೇನೂರು ಸಮೀಪದ ಬಳೂಟಗಿ ಗ್ರಾಮದಲ್ಲಿ ಶ್ರೀ ಅಭಿನವ ಗಜದಂಡ ಸ್ವಾಮೀಜಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.