ನರಿಕೊಂಬು ಸರಕಾರಿ ಶಾಲೆಯಲ್ಲಿಕ್ಷಯರೋಗ ತಪಾಸಣೆ

Contributed bymambadynews@gmail.com|Vijaya Karnataka

ಬಂಟ್ವಾಳ ತಾಲೂಕಿನ ನರಿಕೊಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷಯರೋಗ ತಪಾಸಣೆ ಮತ್ತು ಹೃದಯ ಎಕ್ಸ್‌ ರೇ ಶಿಬಿರ ಯಶಸ್ವಿಯಾಗಿ ನಡೆಯಿತು. ಕಲ್ಲಡ್ಕ-ಬಾಳ್ತಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಈ ಶಿಬಿರವನ್ನು ಆಯೋಜಿಸಲಾಗಿತ್ತು. ಒಟ್ಟು 102 ಮಂದಿ ಈ ತಪಾಸಣೆಯಲ್ಲಿ ಭಾಗವಹಿಸಿದ್ದರು. ಗ್ರಾಮವನ್ನು ಹೈ ರಿಸ್ಕ್‌ ವಿಲೇಜ್‌ ಎಂದು ಗುರುತಿಸಿದ್ದರಿಂದ ಈ ವಿಶೇಷ ತಪಾಸಣೆ ನಡೆಸಲಾಯಿತು.

tuberculosis screening camp at narikombu government school

ಬಂಟ್ವಾಳ : ಕಲ್ಲಡ್ಕ ಸಮೀಪ ಬಾಳ್ತಿಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನರಿಕೊಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷಯರೋಗ ತಪಾಸಣೆ ಮತ್ತು ಹೃದಯ ಎಕ್ಸ್ ರೇ ಶಿಬಿರ ನಡೆಯಿತು.

ಕೇಂದ್ರ ಟಿಬಿ ವಿಭಾಗ ನರಿಕೊಂಬು ಗ್ರಾಮವನ್ನು ಹೈ ರಿಸ್ಕ್ ವಿಲೇಜ್ ಎಂದು ಗುರುತಿಸಿದ್ದ ಹಿನ್ನೆಲೆಯಲ್ಲಿಪಿಎಚ್ ಸಿ ಕಲ್ಲಡ್ಕ ಬಾಳ್ತಿಲ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ಶಿಬಿರ ಆಯೋಜಿಸಿದರು. ಒಟ್ಟು 102 ಜನರ ತಪಾಸಣೆ ನಡೆಸಲಾಯಿತು.

ಕಲ್ಲಡ್ಕ-ಬಾಳ್ತಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಎಚ್ ಒಗಳು, ತಾಲೂಕು ಆರೋಗ್ಯ ಕಚೇರಿಯ ಟಿಬಿ ಮೇಲ್ವಿಚಾರಕರು, ಜಿಲ್ಲಾತಂಡದ ರೇಡಿಯೋಗ್ರಫಿ ಇಮೇಜಿಂಗ್ ಅಧಿಕಾರಿಗಳು, ಗ್ರಾಮ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು ಭಾಗವಹಿಸಿ ಶಿಬಿರ ನಡೆಸಿಕೊಟ್ಟರು.

ಚಿತ್ರ: 25ಬಿಎಚ್ ನರಿಕೊಂಬು

ನರಿಕೊಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಕ್ಷಯರೋಗ ತಪಾಸಣೆ ನಡೆಯಿತು.