ವಿಕ ಸುದ್ದಿ ಲೋಕ ಚಿಕ್ಕಬಳ್ಳಾಪುರ
ಜಿಲ್ಲಾಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ನಡೆದ ಚುನಾವಣೆಯಲ್ಲಿಎ. ಅಶೋಕ್ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮಂಜುಳಾ ಘೋಷಿಸಿದರು.
ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಶೋಕ್ 38 ಮತ ಪಡೆದು ಜಯ ಗಳಿಸಿದರೆ, ಪ್ರತಿಸ್ಪರ್ಧಿ ಡಿ.ಎಂ. ಶ್ರೀರಾಮ್ 19 ಮತ ಪಡೆದು ಪರಭಾವಗೊಂಡರು.
ಜಿಲ್ಲಾಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ನಾಗರಾಜಪ್ಪ 37 ಮತ ಪಡೆದು ವಿಜಯಶಾಲಿಯಾದರೆ, ಪ್ರತಿಸ್ಪರ್ಧಿ ವಸಂತ್ ರೆಡ್ಡಿ 20 ಮತ ಪಡೆದು ಸೋಲು ಕಂಡರು.
ಜಿಲ್ಲಾಉಪಾಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸಿದ್ದ ಚಂದ್ರಮ್ಮ 39 ಮತ ಪಡೆದು ಆಯ್ಕೆಯಾದರೆ, ಪ್ರತಿಸ್ಪರ್ಧಿ ಪ್ರೇಮ 18 ಮತ ಗಳಿಸಿ ಸೋತರು. ಖಜಾಂಚಿ ಸ್ಥಾನ ಅಭ್ಯರ್ಥಿ ರವಿಕುಮಾರ್ ಅವಿರೋಧ ಆಯ್ಕೆಯಾದರು.
ಜಿಲ್ಲಾಪ್ರಾಥಮಿಕ ಶಾಲಾ ಶಿಕ್ಷಕರ ಜಿಲ್ಲಾಸಂಘದ ನೂತನ ಅಧ್ಯಕ್ಷ ಎ. ಅಶೋಕ್ ಮಾತನಾಡಿ, ಮಕ್ಕಳ ಹಾಗೂ ಪೋಷಕರ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆಯನ್ನು ಉತ್ತುಂಗಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿಚುನಾವಣೆಯಲ್ಲಿಸಮಾನ ಮನಸ್ಕರು ಆಯ್ಕೆಯಾಗಿದ್ದೇವೆ. ಆಯ್ಕೆಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದರು.
ಇದೊಂದು ಲಾಭದಾಯಕ ಹುದ್ದೆಯಲ್ಲ, ಒಂದು ಜವಾಬ್ದಾರಿ. ಸೇವಾ ಮನೋಭಾವದ ದೃಷ್ಟಿಕೋನ ಇಟ್ಟುಕೊಂಡು ಕೆಲಸ ಮಾಡಬೇಕಿದೆ. ಜಿಲ್ಲೆಯ ಸಮಸ್ತ ಶಿಕ್ಷಕರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಪೂರಕ ಯೋಜನೆಗಳನ್ನು ಹಾಕಿಕೊಂಡು ಶಿಕ್ಷಕರ ಧ್ವನಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿಬಾಗೇಪಲ್ಲಿತಾಲೂಕಿನ ಹನುಮಂತರೆಡ್ಡಿ, ಚಿಕ್ಕಬಳ್ಳಾಪುರ ತಾಲೂಕಿನ ಎಂ.ಆರ್ . ಸುಬ್ಬಾರೆಡ್ಡಿ, ಸಿ.ವಿ. ವೆಂಕಟರಾಯಪ್ಪ, ಸುನಿಲ್ ಕುಮಾರ್ , ಶಿಡ್ಲಘಟ್ಟ ನೌಕರ ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ, ಗುಡಿಬಂಡೆ ಮತ್ತು ಗೌರಿಬಿದನೂರು ತಾಲೂಕಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದರು.
24 ಸಿಬಿಪಿ ಪೋಟೋ 2
ಜಿಲ್ಲಾಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳು.

