ಮಂಚಿಯಲ್ಲಿಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ

Contributed bymambadynews@gmail.com|Vijaya Karnataka

ಮಂಚಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಯಶಸ್ವಿಯಾಗಿ ನಡೆಯಿತು. ಐದು ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ಮಕ್ಕಳಿಗೆ ಕಥೆ, ಕವನ, ಚಿತ್ರಕಲೆ, ಯೋಗ, ಪದಬಂಧ, ಒಗಟು ರಚನೆ, ಮೊಬೈಲ್ ದುಷ್ಪರಿಣಾಮಗಳ ಬಗ್ಗೆ ತಿಳಿಸಲಾಯಿತು. ವಿವಿಧ ಚಟುವಟಿಕೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಯಿತು.

rural childrens summer camp in manchiyal engaging activities and inspiring queries

ವಿಕ ಸುದ್ದಿಲೋಕ ಬಂಟ್ವಾಳ

ಮಂಚಿಯ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಗ್ರಂಥಾಲಯ ಅರಿವು ಕೇಂದ್ರ ಮತ್ತು ಗ್ರಾಮ ಪಂಚಾಯಿತಿ ಸಹಯೋಗದಲ್ಲಿನಡೆಯಿತು.

5 ದಿನಗಳ ಕಾಲ ಗ್ರಂಥಾಲಯ ಅರಿವು ಕೇಂದ್ರ ಮತ್ತು ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿರ್ಮಲಾ ಉದ್ಘಾಟಿಸಿದರು. ಅರಿವು ಕೇಂದ್ರದ ಮೇಲ್ವಿಚಾರಕಿ ಚಂದ್ರಾವತಿ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಶೈಲಜಾ, ಎಸ್ , ಮಂಜುಳಾ, ದೇವಕಿ ಎಚ್ , ಬಾಲಕೃಷ್ಣ ಖಂಡಿಗ, ಮಕ್ಕಳಿಗೆ ನಾನಾ ಚಟುವಟಿಕೆಗಳನ್ನು ನಡೆಸಿಕೊಟ್ಟರು. ಮೊದಲನೆ ದಿನ ಕಥೆ, ಕವನ ವಾಚನ ಬರೆಯುವುದು, ಚಿತ್ರ ನೋಡಿ ಪದ ರಚಿಸಿ ಕವನ ಬರೆಯವುದು, ಮಕ್ಕಳಿಗೆ ಬೌದ್ದಿಕ ಚಟುವಟಿಕೆಗಳಿಗೆ ಬೇಕಾದ ವಿಷಯಗಳನ್ನು ತಿಳಿಸಲಾಯಿತು. ಎರಡನೇ ದಿನ ಮಕ್ಕಳಿಗೆ ಯೋಗಾಭ್ಯಾಸವನ್ನು ಕಲಿಸಿಕೊಡಲಾಯಿತು.

ಮೂರನೇ ದಿನ ಪದಬಂಧ, ಒಗಟು ರಚನೆಗಳ ವಿಧಾನವನ್ನು ತಿಳಿಸಿಕೊಡಲಾಯಿತು. ಮತ್ತು ಮೊಬೈಲ್ ಬಳಕೆ ಯಿಂದ ಆಗುವ ದುಷ್ಪರಿಣಾಮಗಳು ಮತ್ತು ಸೈಬರ್ ಅಪರಾಧಗಳ ಕುರಿತು ಸುಷ್ಮ ಮಾಹಿತಿ ನೀಡಿದರು. ವಿವಿಧ ಗುಂಪು ಚಟುವಟಿಕೆ ಮತ್ತು ವಿವಿಧ ಆಟೋಟ ಸ್ಪರ್ಧೆಗಳಲ್ಲಿವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ, ಮತ್ತು ಶಿಬಿರದಲ್ಲಿಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರನ್ನು ನೀಡ ಲಾಯಿತು.

ಚಿತ್ರ: 25ಬಿಎಚ್ ಅರಿವು

ಮಂಚಿ ಗ್ರಾಪಂನಲ್ಲಿಗ್ರಾಮೀಣ ಮಕ್ಕಳ ಬೇಸಗೆ ಶಿಬಿರ ಕಾರ್ಯಕ್ರಮ ನಡೆಯಿತು.