ಜೈನ್ ಐಟಿಗೆ 50 ಲಕ್ಷ ರೂ. ಅನುದಾನ
ದಾವಣಗೆರೆ: ನಗರದ ಜೈನ್ ತಂತ್ರಜ್ಞಾನ ಸಂಸ್ಥೆಯ ನೈನ್ 2.0 ತಂಡವು, ಕರ್ನಾಟಕ ಸರಕಾರದ 2026-27ನೇ ಸಾಲಿನ ನ್ಯೂಏಜ್ ಇನ್ನೋವೇಶನ್ ನೆಟ್ವರ್ಕ್(ನೈನ್ 2.0) ಸ್ಪರ್ಧಾತ್ಮಕ ಆಯ್ಕೆ ಪ್ರಕ್ರಿಯೆಯಲ್ಲಿಸಾಧನೆ ಮಾಡಿದೆ. ಜೈನ್ ಮಹಾವಿದ್ಯಾಲಯದ 10 ವಿದ್ಯಾರ್ಥಿ ಪ್ರಾಜೆಕ್ಟ್ಗಳು ಕಾರ್ಯಕ್ರಮದ ಅಂತಿಮ ಪಟ್ಟಿಯಲ್ಲಿಸ್ಥಾನ ಪಡೆಯುವ ಮೂಲಕ 50 ಲಕ್ಷ ರೂ. ಮೌಲ್ಯದ ಅನುದಾನಕ್ಕೆ ಆಯ್ಕೆಯಾಗಿವೆ.
ಧಾರವಾಡದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ(ಐಐಐಟಿ)ಆವರಣದಲ್ಲಿಮೇ 12ರಂದು 2026-27ನೇ ಸಾಲಿನ ‘ನೈನ್ 2.0 ಕೊಹಾರ್ಟ್ ಕಿಕ್ ಆಫ್ ’ ಕಾರ್ಯಕ್ರಮದಲ್ಲಿಜೈನ್ ಮಹಾವಿದ್ಯಾಲಯದ ತಂಡವು ಭಾಗವಹಿಸಿತ್ತು. ನ್ಯೂಏಜ್ ಇನ್ನೋವೇಶನ್ ನೆಟ್ವರ್ಕ್ ಯೋಜನೆಯಡಿ ಆಯೋಜಿಸಿದ್ದ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿನಾವಿನ್ಯತೆ ಹಾಗೂ ಉದ್ಯಮಶೀಲತೆ ಉತ್ತೇಜಿಸುವ ಉದ್ದೇಶ ಹೊಂದಿತ್ತು. ತಂತ್ರಜ್ಞಾನ ಆಧಾರಿತ ಹೊಸ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಪ್ರೇರಣೆ ನೀಡುವ ಕಾರ್ಯ ಮಾಡುತ್ತಿದೆ.
ಜೈನ್ ತಂತ್ರಜ್ಞಾನ ಸಂಸ್ಥೆಯಿಂದ ಒಟ್ಟು 47 ವಿದ್ಯಾರ್ಥಿಗಳು ಹಾಗೂ 10 ಮಾರ್ಗದರ್ಶಕರು ಕಾರ್ಯಕ್ರಮದಲ್ಲಿಭಾಗವಹಿಸಿದ್ದರು. ಈ ವೇಳೆ ವಿದ್ಯಾರ್ಥಿಗಳಲ್ಲಿಸ್ಟಾರ್ಟ್ ಅಪ್ ಚಟುವಟಿಕೆಗಳನ್ನು ಉತ್ತೇಜಿಸುವಲ್ಲಿಸಂಸ್ಥೆಯ ಸಕ್ರಿಯ ಪಾತ್ರವನ್ನು ಗುರುತಿಸಿ, ಜೈನ್ ತಂತ್ರಜ್ಞಾನ ಸಂಸ್ಥೆಗೆ ‘ನೈನ್ ಹೋಸ್ಟ್ ಇನ್ ಸ್ಟಿಟ್ಯೂಟ್ ಪಾಲುದಾರ’ ಎಂಬ ಗೌರವದೊಂದಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳು ಮತ್ತು ಮಾರ್ಗದರ್ಶಕರು ನಾನಾ ವಲಯಗಳ ತಜ್ಞರೊಂದಿಗೆ ಸಂವಾದ ನಡೆಸಲು, ರಾಜ್ಯ ಸರಕಾರದ ನೈನ್ 2.0 ಯೋಜನೆಯ ಉದ್ದೇಶಗಳನ್ನು ತಿಳಿದುಕೊಳ್ಳಲು ಹಾಗೂ ಸಂಶೋಧನೆ, ನಾವಿನ್ಯತೆ ಮತ್ತು ಉದ್ಯಮಶೀಲತೆ ಕ್ಷೇತ್ರಗಳಲ್ಲಿನ ಹೊಸ ಹೊಸ ಅವಕಾಶಗಳನ್ನು ಅರಿಯಲು ಕಾರ್ಯಕ್ರಮ ಉತ್ತಮ ವೇದಿಕೆಯಾಯಿತು.
--
25 ಡಿವಿಜಿ ಜೆಐಟಿ
ಧಾರವಾಡದ ಐಐಐಟಿ ಆವರಣದಲ್ಲಿಇದೇ ಮೇ 12ರಂದು ನಡೆದ 2026-27ನೇ ಸಾಲಿನ ‘ನೈನ್ 2.0’ ಕಾರ್ಯಕ್ರಮದಲ್ಲಿಭಾಗವಹಿಸಿದ್ದ ದಾವಣಗೆರೆಯ ಜೈನ್ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಮಾರ್ಗದರ್ಶಕರ ತಂಡ.

