ಮಕ್ಕಳನ್ನು ರಂಜಿಸಿದ ಚಿಣ್ಣರ ಚಿತ್ತಾರ

Contributed byaravindahebbar1971@gmail.com|Vijaya Karnataka

ಬೆಳ್ತಂಗಡಿ ಕಣಿಯೂರು ಗ್ರಾಮದ ಪದ್ಮುಂಜ ಅಂಬೇಡ್ಕರ್‌ ಭವನದಲ್ಲಿ ಚಿಣ್ಣರ ಚಿತ್ತಾರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ಹಾಡು, ನೃತ್ಯ, ಚಿತ್ರಕಲೆ, ಕಾಗದದ ಕ್ರಾಫ್ಟ್‌, ಮಕ್ಕಳ ಕತೆಗಳ ಮೂಲಕ ಅವರ ಪ್ರತಿಭೆಯನ್ನು ಹೊರತಂದರು. ಡಿವೈಎಫ್‌ ಐ, ಎಸ್ಸೆಫ್‌ ಐ ಮತ್ತು ಬಾಲಸಂಘದ ವತಿಯಿಂದ ಪುಸ್ತಕ, ಪೆನ್‌ ವಿತರಿಸಲಾಯಿತು. ಸುಮತಿ ಮತ್ತು ಸತೀಶ್‌ ರಾವ್‌ ಊಟದ ವ್ಯವಸ್ಥೆ ಮಾಡಿದರು.

a platform to unleash childrens talent through child art

ಬೆಳ್ತಂಗಡಿ: ಕಣಿಯೂರು ಗ್ರಾಮದ ಪದ್ಮುಂಜ ಅಂಬೇಡ್ಕರ್ ಭವನದಲ್ಲಿನಡೆದ ಎರಡು ದಿನಗಳ ಚಿಣ್ಣರ ಚಿತ್ತಾರ ಸಮಾರೋಪಗೊಂಡಿತು.

ಸಂಪನ್ಮೂಲ ವ್ಯಕ್ತಿಗಳಾದ ಮುಖೇಶ್ ಸುಳ್ಯ, ವಿಪಿನ್ ಕುಮಾರ್ ಸುಳ್ಯ, ಮನೋಜ್ ವಾಮಂಜೂರು ಮಕ್ಕಳಿಗೆ ಹಾಡು, ನೃತ್ಯ, ಚಿತ್ರಕಲೆ, ಕಾಗದದ ಕ್ರಾಫ್ಟ್ , ಮಕ್ಕಳ ಕತೆಗಳು ಇತ್ಯಾದಿಗಳ ಮೂಲಕ ಮಕ್ಕಳಲ್ಲಿಅಡಗಿರುವ ಪ್ರತಿಭೆ ಹೊರ ತಂದರು.

ಸಮಾರೋಪ ಕಾರ್ಯಕ್ರಮದಲ್ಲಿರೇವತಿ, ಈಶ್ವರಿ, ಸುಮತಿ, ಕಾಸಿಂ, ಅನಂತ ಕೃಷ್ಣ, ಡಿ.ವೈ.ಎಫ್ .ಐ. ತಾಲೂಕು ಕಾರ್ಯದರ್ಶಿ ಅಭಿಷೇಕ್ , ಭಾರತ ವಿದ್ಯಾರ್ಥಿ ಫೆಡರೇಶನ್ ಜಿಲ್ಲಾಕಾರ್ಯದರ್ಶಿ ವಿನುಶರಮಣ ಉಪಸ್ಥಿತರಿದ್ದರು. ಚಿಣ್ಣರ ಚಿತ್ತಾರ ಪ್ರಾಯೋಜಕರಾದ ಡಿವೈಎಫ್ ಐ ,ಎಸ್ಸೆಫ್ ಐ ಮತ್ತು ಬಾಲಸಂಘದ ವತಿಯಿಂದ ಪುಸ್ತಕ, ಪೆನ್ ವಿತರಿಸಲಾಯಿತು. ಸುಮತಿ ಮತ್ತು ಸತೀಶ್ ರಾವ್ ಮಕ್ಕಳಿಗೆ ಊಟದ ವ್ಯವಸ್ಥೆ ನೀಡಿದರು. ಇಂತಿಯಾಸ್ ಸಹಕರಿಸಿದರು.

25ಎಂಜೆ ಚಿಣ್ಣರ ಚಿತ್ತಾರ.