ಶಾಡಲಗೇರಿ ಗ್ರಾಮದಲ್ಲಿಅಸಾಂಕ್ರಾಮಿಕ ರೋಗ ತಪಾಸಣೆ ಶಿ

Contributed byraja.bandihal@gmail.com|Vijaya Karnataka

ಹನುಮಸಾಗರ ಸಮೀಪದ ಶಾಡಲಗೇರಿ ಗ್ರಾಮದಲ್ಲಿಅಸಾಂಕ್ರಾಮಿಕ ರೋಗಗಳ ತಪಾಸಣೆ ಶಿಬಿರ ನಡೆಯಿತು. ಸಮುದಾಯ ಆರೋಗ್ಯ ಅಧಿಕಾರಿ ಮಂಜುಳಾ ಶಿವಪ್ಪ ಇಲಾಳ ಅವರು ಮಾತನಾಡಿ, ಅಸಾಂಕ್ರಾಮಿಕ ರೋಗಗಳನ್ನು ಆರಂಭದಲ್ಲಿ ಪತ್ತೆ ಹಚ್ಚಿ ನಿಯಂತ್ರಿಸಬೇಕು ಎಂದರು. ಸಾರ್ವಜನಿಕರು ನಿಯಮಿತವಾಗಿ ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಸೇರಿದಂತೆ ವಿವಿಧ ರೋಗಗಳ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

non communicable disease screening camp a step toward health improvement in shadalgeri village

ಅಸಾಂಕ್ರಾಮಿಕ ರೋಗ ತಪಾಸಣೆ ಶಿಬಿರ

ವಿಕ ಸುದ್ದಿಲೋಕ ಹನುಮಸಾಗರ

‘‘ ಅಸಾಂಕ್ರಾಮಿಕ ರೋಗಗಳು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ. ಆದರೆ, ಆರಂಭದಲ್ಲಿಪತ್ತೆ ಹಚ್ಚಿ ನಿಯಂತ್ರಿಸಬೇಕು,’’ ಎಂದು ಸಮುದಾಯ ಆರೋಗ್ಯ ಅಧಿಕಾರಿ ಮಂಜುಳಾ ಶಿವಪ್ಪ ಇಲಾಳ ಹೇಳಿದರು.

ಸಮೀಪದ ಶಾಡಲಗೇರಿ ಗ್ರಾಮದಲ್ಲಿತುಗ್ಗಲದೋಣಿ ಗ್ರಾಮದ ಆಯುಷ್ಮಾನ ಆರೋಗ್ಯ ಕೇಂದ್ರದಿಂದ ನಡೆದ ಅಸಾಂಕ್ರಮಿಕ ರೋಗಗಳ ತಪಾಸಣೆ ಶಿಬಿರದಲ್ಲಿಸೋಮವಾರ ಮಾತನಾಡಿದರು. ‘‘ ಕಾಲಕಾಲಕ್ಕೆ ಸಾರ್ವಜನಿಕರು ಮಧುಮೇಹ, ರಕ್ತದೊತ್ತಡ, ಹೃದಯ ಬಡಿತ, ಪ್ರಾಥಮಿಕ ಕ್ಯಾನ್ಸರ್ ತಪಾಸಣೆ, ಅತಿಯಾದ ದೇಹಭಾರ, ಮೂತ್ರಪಿಂಡ ಸಮಸ್ಯೆಗಳನ್ನು ನಿಯಮಿತ ತಪಾಸಣೆ ಮಾಡಿಸಿಕೊಳ್ಳಬೇಕು. ಸಮತೋಲನ ಆಹಾರ ಸೇವಿಸಬೇಕು, ಪ್ರತಿದಿನ ವ್ಯಾಯಾಮ ಮಾಡಬೇಕು, ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಬೇಕು, ಒತ್ತಡ ನಿಯಂತ್ರಣಕ್ಕೆ ಯೋಗ ಮತ್ತು ಧ್ಯಾನ ಮಾಡಬೇಕು,’’ ಎಂದರು.

ಆರೋಗ್ಯ ನಿರೀಕ್ಷಣಾಧಿಕಾರಿ ಡಿ.ಎಸ್ .ರಾಠೋಡ್ , ಮೆಡಿಕಲ್ ತಾಂತ್ರಿಕ ಸಹಾಯಕ ರವಿಕುಮಾರ ಪೂಜಾರ, ಆಶಾ ಕಾರ್ಯಕರ್ತೆ ವಿಜಯಲಕ್ಷ್ಮಿ ಹಿರೇಮಠ ಸೇರಿ ಇತರರು ಇದ್ದರು.

ಕೆಪಿಎಲ್ 25ಎಚ್ ಎಸ್ ಆರ್ ಫೋಟೊ2:ಹನುಮಸಾಗರ ಸಮೀಪದ ಶಾಡಲಗೇರಿ ಗ್ರಾಮದಲ್ಲಿಅಸಾಂಕ್ರಾಮಿಕ ರೋಗ ತಪಾಸಣೆ ಶಿಬಿರ ಇತ್ತೀಚೆಗೆ ನಡೆಯಿತು.