//ಎರಡೂ ಫೋಟೊ ಬಳಸಿ//
ಅಲಬನೂರು ಗ್ರಾಮದಲ್ಲಿಸಮೃದ್ಧಿ ಪಾಠಶಾಲೆ ಕಾರ್ಯಾಗಾರ
ರೈತರ ಆರ್ಥಿಕ ಅಭಿವೃದ್ಧಿ ಗುರಿ
ವಿಕ ಸುದ್ದಿಲೋಕ ಸಿಂಧನೂರು
‘‘ತುಂಗಭದ್ರಾ ಎಡದಂಡೆ ಉಪ ಕಾಲುವೆ ಮೂಲಕ ರೈತಾಪಿ ವರ್ಗದ ಜಮೀನಿಗೆ ನೀರೊದಗಿಸುವ ನಿಟ್ಟಿನಲ್ಲಿಕೇಂದ್ರ ಸರಕಾರದ ಸಮೃದ್ಧಿ ಎಂಕ್ಯಾಡ್ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ,’’ ಎಂದು ಕೇಂದ್ರ ಸರಕಾರದ ಜಲಶಕ್ತಿ ಸಚಿವಾಲಯದ ಹಿರಿಯ ಜಂಟಿ ನಿರ್ದೇಶಕ ಅಂಬಲಿ ಜಿ.ಕೆ. ಹೇಳಿದರು.
ತಾಲೂಕಿನ ಅಲಬನೂರು ಗ್ರಾಮದ ಸರಕಾರಿ ಪ್ರೌಢಶಾಲೆ ಮೈದಾನದಲ್ಲಿಶ್ರೀ ಚನ್ನಬಸವೇಶ್ವರ ಏತ ನೀರಾವರಿ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ, ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಆಧುನೀಕರಣ ಮತ್ತು ಜಲ ನಿರ್ವಹಣೆ ಯೋಜನೆಯಡಿ ರೈತರಿಗೆ ‘ಸಮೃದ್ಧಿ ಪಾಠಶಾಲೆ’ ಒಂದು ದಿನದ ಜಾಗೃತಿ ಕಾರ್ಯಕ್ರಮ ಶನಿವಾರ ಉದ್ಘಾಟಿಸಿ ಮಾತನಾಡಿದರು.
‘‘ನೀರಾವರಿ ವಂಚಿತ ತುಂಗಭದ್ರಾ ಎಡದಂಡೆ ಕಾಲುವೆ 549 ಆರ್ ರಲ್ಲಿಬರುವ ಗ್ರಾಮಗಳ ರೈತರಿಗೆ ಈ ಯೋಜನೆ ಆಶಾಕಿರಣವಾಗಿರಲಿದೆ. ಆರ್ ಎಚ್ 5, ಹರೇಟನೂರು, ಬಾದರ್ಲಿ, ಗಿಣಿವಾರ, ವೆಂಗಳಾಪುರ ಡಿ ಗ್ರಾಮಗಳ ಕೃಷಿ ಭೂಮಿಗೆ ಸಮತೋಲನ ನೀರು ಪೂರೈಸುವ ಎಂಕ್ಯಾಡ್ ಯೋಜನೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪಾಲುದಾರಿಕೆಯಲ್ಲಿಈ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಕೇಂದ್ರ ಸರಕಾರ ಶೇ.60 ಹಾಗೂ ರಾಜ್ಯ ಸರಕಾರ ಶೇ.40ರಷು ಅನುದಾನ ನೀಡಲಿದೆ. ಒಟ್ಟು 49 ಕೋಟಿ ರೂ. ವೆಚ್ಚದ ಈ ಯೋಜನೆಯಿಂದ 2,600 ಹೆಕ್ಟೇರ್ ಭೂಮಿಗೆ ನೀರು ಒದಗಲಿದೆ. ಕೊನೆಭಾಗದ ರೈತರ ಹೊಲಗಳಿಗೆ ನೀರು ತಲುಪಲಿದೆ. ರೈತರು ವೈವಿಧ್ಯಮಯ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸಬಲರಾಗಬಹುದು,’’ ಎಂದು ಹೇಳಿದರು.
ಐದು ವರ್ಷ ನಿರ್ವಹಣೆ:
‘‘ಯೋಜನೆ ಅನುಷ್ಠಾನಗೊಂಡ ನಂತರ ನೀರು ಬಳಕೆದಾರರ ಸಂಘಗಳು ಯೋಜನೆಯನ್ನು 5 ವರ್ಷ ನಿರ್ವಹಣೆಯ ನಂತರ ಮುಂದುವರೆಸಿಕೊಂಡು ಹೋಗಲು ಬೇಕಾಗುವ ಎಲ್ಲತರಬೇತಿ ನೀಡಲಾಗುತ್ತಿದೆ. ಯೋಜನೆ ಯಶಸ್ವಿಗೆ ರೈತರು ಸಹಕರಿಸಬೇಕು,’’ ಎಂದು ಮನವಿ ಮಾಡಿದರು.
ಜಲಶಕ್ತಿ ಸಚಿವಾಲಯದ ಸಹಾಯಕ ನಿರ್ದೇಶಕ ಡಾ.ಅಂಕಿತ್ ಪಾಂಡೆ, ಕೇಂದ್ರ ಜಲ ಆಯೋಗದ ಉಪ ನಿರ್ದೇಶಕ ಮಣಿಮಾರನ್ , ಕಾಡಾ ಮುನಿರಾಬಾದ್ ನ ಆಡಳಿತಾಧಿಕಾರಿ ಸೈಯದ್ ಇಸಾಕ್ ಅಪ್ಸರ್ , ಜಂಟಿ ನಿರ್ದೇಶಕ ನಾಗೇಶ್ವರರಾವ್ ರಂಗಾಪುರ, ಸಿಂಧನೂರು ಕಾಡಾ ಎಇಇ ಬಸವರಾಜ ಸೂಗೂರು, ಪ್ರಾಂಶುಪಾಲ ಡಾ.ಎಸ್ .ಶಿವರಾಜ್ , ತೋಟಗಾರಿಕೆ ಇಲಾಖೆ ಅಧಿಕಾರಿ ಚಂದ್ರಶೇಖರ ಕುರಿ, ಕಾಡಾ ಅಧಿಕಾರಿಗಳು, ವಾಲ್ಮಿ ಧಾರವಾಡ ಅಧಿಕಾರಿಗಳು, ನೀರು ಬಳಕೆದಾರರು ಸಂಘದವರು, ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ರೈತರು ಪಾಲ್ಗೊಂಡಿದ್ದರು.
---
ಆರ್ ಸಿಎಚ್ 23ಎಸ್ ಎನ್ ಡಿ1:
ಸಿಂಧನೂರು ತಾಲೂಕಿನ ಅಲಬನೂರು ಗ್ರಾಮದ ಸರಕಾರಿ ಪ್ರೌಢಶಾಲೆ ಮೈದಾನದಲ್ಲಿನಡೆದ ಸಮೃದ್ಧಿ ಪಾಠಶಾಲಾ ರೈತರ ಜಾಗೃತಿ ಕಾರ್ಯಾಗಾರವನ್ನು ಕೇಂದ್ರ ಸರಕಾರದ ಜಲಶಕ್ತಿ ಸಚಿವಾಲಯದ ಹಿರಿಯ ಜಂಟಿ ನಿರ್ದೇಶಕ ಅಂಬಲಿ ಜಿ.ಕೆ. ಉದ್ಘಾಟಿಸಿದರು.
---
ಆರ್ ಸಿಎಚ್ 23ಎಸ್ ಎನ್ ಡಿ2:
ಸಿಂಧನೂರು ತಾಲೂಕಿನ ಅಲಬನೂರು ಗ್ರಾಮದ ಸರಕಾರಿ ಪ್ರೌಢಶಾಲೆ ಮೈದಾನದಲ್ಲಿನಡೆದ ಸಮೃದ್ಧಿ ಪಾಠಶಾಲಾ ರೈತರ ಜಾಗೃತಿ ಕಾರ್ಯಾಗಾರದಲ್ಲಿರೈತರು ಪಾಲ್ಗೊಂಡಿದ್ದರು.

