22 ಎನ್ ಆರ್ ಡಿ-1
ಯೋಜನೆ ಸದುಪಯೋಗ ಪಡಿಸಿಕೊಳ್ಳಿ
ವಿಕ ಸುದ್ದಿಲೋಕ ನರಗುಂದ
ಎಸ್ ಸಿ, ಎಸ್ ಟಿ ಸಮುದಾಯದವರು ನರೇಗಾ ಯೋಜನೆ ಸದುಪಯೋಗ ಪಡಿಸಿಕೊಳ್ಳಿ, ಬರುವ ದಿನಗಳಲ್ಲಿಮಳೆ ಆರಂಭವಾಗುವವರೆಗೂ ನರೇಗಾದಡಿ ಕೆಲಸ ನೀಡಲು ಪ್ರಥಮ ಆಧ್ಯತೆ ನೀಡಲಾಗುವುದು ಎಂದು ತಾಲೂಕಿನ ಬನಹಟ್ಟಿ ಗ್ರಾಪಂ ಪಿಡಿಒ ಮಂಜುನಾಥ ಗಣಿ ತಿಳಿಸಿದರು.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ನರೇಗಾ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸುವ ಮೂಲಕ ಎಲ್ಲಸೌಲಭ್ಯ ಪಡೆದುಕೊಳ್ಳಬೇಕು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಯೋಜನೆಯಡಿ ಖಾತರಿ ಯೋಜನೆಯ ಗ್ರಾಮೀಣ ಪ್ರದೇಶದ ವಿವಿಧ ಕಾಮಗಾರಿಗಳು ಬಹಳಷ್ಟು ಉಪಯುಕ್ತವಾಗಿವೆ. ಎನ್ ಆರ್ ಇಜಿಎ ಯೋಜನೆಯಡಿ ಗ್ರಾಮೀಣ ಪದೇಶದ ಪ್ರತಿ ಕುಟುಂಬಕ್ಕೆ 100 ದಿನಗಳಿಗೆ ಕಡಿಮೆಯಿಲ್ಲದಂತೆ ಅಕುಶಲ ಕೂಲಿ ಒದಗಿಸಲು ಯೋಜನೆ ರೂಪಿತಗೊಂಡಿದೆ ಎಂದರು.
ಬನಹಟ್ಟಿ ಗ್ರಾಮದಲ್ಲಿನರೇಗಾ ಯೋಜನೆಯಡಿ ನಡೆಯುತ್ತಿರುವ ಸಮುದಾಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ನರೇಗಾ ಕಾರ್ಮಿಕರಿಗೆ ಯೋಜನೆಯ ಮಾಹಿತಿ ನೀಡಿದರು. ನರೇಗಾ ಯೋಜನೆಯಡಿ ಬೇಸಿಗೆ ಅವಧಿಯಲ್ಲಿಹೊಲಗಳಿಗೆ ಬದು ನಿರ್ಮಾಣ ಕಾರ್ಯಕೈಗೊಳ್ಳಲಾಗುತ್ತಿದೆ. ಎಸ್ ಸಿ,ಎಸ್ಟಿ ಸಮುದಾಯದ ನರೇಗಾ ಕಾರ್ಮಿಕರು ಕೂಡ ತಮ್ಮ ಹೊಲಗಳಿಗೆ ಬದು ನಿರ್ಮಿಸಿಕೊಳ್ಳಲು ಮುಂದಾಗಬೇಕು, ಮಳೆ ಆರಂಭವಾಗುವವರೆಗೂ ಕೆಲಸ ನೀಡಲು ಗ್ರಾಪಂ ಎಲ್ಲಸಿದ್ದತೆ ಮಾಡಿಕೊಂಡಿದೆ ಎಂದರು.
ನರೇಗಾ ಜಾಬ್ ಕಾರ್ಡ್ ನ್ನು ಗ್ರಾಪಂನಿಂದ ಉಚಿತವಾಗಿ ನೀಡಲಾಗುತ್ತದೆ. ಕೆಲಸಕ್ಕೆ ಬರಲು ನರೇಗಾದ ಚೀಟಿ ಜತೆ ನರೇಗಾ ಕಾರ್ಮಿಕರು ಇ-ಕೆವೈಸಿ ಕಡ್ಡಾಯವಾಗಿ ಮಾಡಿಸಿರಬೇಕು. ದಿನಕ್ಕೆ 370 ರೂ. ಪುರುಷ ಹಾಗೂ ಮಹಿಳೆಗೆ ಸಮಾನವಾಗಿ ಕೂಲಿ ನೀಡಲಾಗುವುದು ಎಂದರು.
ನರೇಗಾ ಐಇಸಿ ಚಟುವಟಿಕೆಗಳ ಮೂಲಕ ಬನಹಟ್ಟಿ ಗ್ರಾಮದ ಎಸ್ ಸಿ, ಎಸ್ ಟಿ ಕಾಲೋನಿಯಲ್ಲಿಕೈಗೊಂಡ ವಿಶೇಷ ಅಭಿಯಾನದ ಪರಿಣಾಮ ಎಸ್ ಸಿ,ಎಸ್ ಟಿ ಸಮುದಾಯದ 60 ಕ್ಕೂ ಹೆಚ್ಚು ನರೇಗಾ ಕಾರ್ಮಿಕರು ಯೋಜನೆಯಡಿ ಕೆಲಸಕ್ಕೆ ಹಾಜರಾದರು.
ಬನಹಟ್ಟಿ ಗ್ರಾಪಂ ಕಾರ್ಯದರ್ಶಿ ಮಾಳಪ್ಪ ಪೂಜಾರ, ಶಿವನಪ್ಪ ಕಲ್ಲಾಪೂರ, ಸುನೀಲ್ ಶಿರೋಳ, ಮಂಜುನಾಥ ನಾಡಗೌಡ, ತಳವಾರ ಇನ್ನಿತರರು ಉಪಸ್ಥಿತರಿದ್ದರು.
ನರಗುಂದ: ಫೋಟೋ ಶೀರ್ಷಿಕೆ) 22 ಎನ್ ಆರ್ ಡಿ-1 :
ನರಗುಂದ ತಾಲೂಕಿನ ಬನಹಟ್ಟಿಯಲ್ಲಿನರೇಗಾ ಯೋಜನೆಯಡಿ ನಡೆಯುತ್ತಿರುವ ಸಮುದಾಯ ಕಾಮಗಾರಿ ಸ್ಥಳಕ್ಕೆ ಗ್ರಾಪಂ ಪಿಡಿಒ ಮಂಜುನಾಥ ಗಣಿ ಭೇಟಿ ನೀಡಿ ನರೇಗಾ ಕಾರ್ಮಿಕರಿಗೆ ಯೋಜನೆಯ ಮಾಹಿತಿ ನೀಡಿದರು.

