ಬಳ್ಳಾರಿ: ಲೋಕಕಲ್ಯಾಣ ಹಾಗೂ ಶ್ರೀ ಸಿದ್ಧಲಿಂಗೇಶ್ವರ ವೇದ ಜ್ಯೋತಿಷ ಸಂಸ್ಕೃತ ಪಾಠಶಾಲೆಯ ಕಟ್ಟಡ ನಿರ್ಮಾಣಾರ್ಥವಾಗಿ, ಪಾಲ್ತೂರು ಕಳಹೊಳ್ಳಿ ಮಠದ ಶ್ರೀ ಷ.ಬ್ರ.ಚೆನ್ನವೀರ ಶಿವಾಚಾರ್ಯ ಸ್ವಾಮೀಜಿ ಮೇ 17ರಿಂದ ಮಂಡಲ ಪರಿಯಂತರ ಮೌನಾನುಷ್ಠಾನ ಹಾಗೂ ತ್ರಿಕಾಲ ಇಷ್ಟಲಿಂಗ ಮಹಾಪೂಜೆ ಕೈಗೊಂಡಿದ್ದು, ಜುಲೈ 5ರವರೆಗೆ 48 ದಿನಗಳ ಕಾಲ ನಡೆಸಲಿದ್ದಾರೆ.
ಅನುಷ್ಠಾನದ ಅಂಗವಾಗಿ ಗ್ರಾಮದ ಶ್ರೀಕಲ್ಲೇಶ್ವರ ದೇವಸ್ಥಾನದಲ್ಲಿಸ್ವಾಮೀಜಿಗಳ ನೇತೃತ್ವದಲ್ಲಿಭಾನುವಾರ ವಿಶೇಷ ರುದ್ರಾಭೀಷೇಕ ನೆರವೇರಿಸಲಾಯಿತು. ಬಳಿಕ ದೇವಸ್ಥಾನದಿಂದ ಸ್ವಾಮೀಜಿ ತಪಸ್ಸು ಕೈಗೊಳ್ಳುವ ತಪೋನಿಧಿ ಸ್ಥಳದವರೆಗೆ ಭವ್ಯ ಮೆರವಣಿಗೆ ನಡೆಯಿತು. ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಜಂಗಮರ ಹೊಸಳ್ಳಿಯ ಶ್ರೀಅಜಾತ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ರೌಡಕುಂದ ಮಠದ ಶ್ರೀಶಿವಯೋಗಿ ಶಿವಾಚಾರ್ಯ ಸ್ವಾಮಿಜಿ ಇದ್ದರು.
---
17 ಬಿಎಲ್ ವೈ ಪೀರಾಸಾಬ್ 04
ಪಾಲ್ತೂರು ಕಳಹೊಳ್ಳಿ ಮಠದ ಶ್ರೀ ಷ.ಬ್ರ.ಚೆನ್ನವೀರ ಶಿವಾಚಾರ್ಯ ಸ್ವಾಮೀಜಿ

