ಮನೆಮನೆಗೆ ಶಿಕ್ಷಕರ ಸಂಚಾರ

Contributed bymudholvk@gmail.com|Vijaya Karnataka

ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಸರಕಾರಿ ಶಾಲೆಗಳ ಉಳಿವಿಗೆ ಶಿಕ್ಷಣ ಇಲಾಖೆ ಆಂದೋಲನ ಆರಂಭಿಸಿದೆ. ಶಿಕ್ಷಕರು ಮನೆಮನೆಗೆ ತೆರಳಿ ಪಾಲಕರಿಗೆ ಸರಕಾರಿ ಶಾಲೆಯ ಸೌಲಭ್ಯಗಳ ಬಗ್ಗೆ ತಿಳಿಹೇಳುತ್ತಿದ್ದಾರೆ. ಉಚಿತ ಪಠ್ಯಪುಸ್ತಕ, ಬಟ್ಟೆ, ಊಟ ಸೇರಿದಂತೆ ಹಲವು ಸೌಲಭ್ಯಗಳು ಸರಕಾರಿ ಶಾಲೆಯಲ್ಲಿ ಲಭ್ಯವಿವೆ. ಖಾಸಗಿ ಶಾಲೆಗಳ ಪೈಪೋಟಿಯ ನಡುವೆಯೂ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಶಿಕ್ಷಕರು ಶ್ರಮಿಸುತ್ತಿದ್ದಾರೆ. ಇದು ಸರಕಾರಿ ಶಾಲೆಗಳ ದಾಖಲಾತಿ ಹೆಚ್ಚಿಸುವ ಪ್ರಯತ್ನವಾಗಿದೆ.

teachers door to door outreach new initiative for increasing government school enrollment

ಸರಕಾರಿ ಶಾಲೆ ಉಳಿಸಲು ಆಂದೋಲನ |

ಶೈಕ್ಷಣಿಕ ವರ್ಷ ಆರಂಭಕ್ಕೂ ಮುಂಚೆ ಚಾಲನೆ

ಮನೆಮನೆಗೆ ಶಿಕ್ಷಕರ ಸಂಚಾರ

ಎಂ.ಎಚ್ .ನದಾಫ್ ಮುಧೋಳ

ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭಕ್ಕೂ ಮುನ್ನವೇ ದಾಖಲಾತಿ ಆಂದೋಲನಕ್ಕೆ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಚಾಲನೆ ನೀಡಿದೆ.

ಜೂ.1 ರಂದು ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಅದಕ್ಕೂ ಮುಂಚೆಯೇ ಎಲ್ಲೆಡೆ ದಾಖಲಾತಿ ಆಂದೋಲನದ ಮೂಲಕ ಪಾಲಕರು, ಮಕ್ಕಳಲ್ಲಿಜಾಗೃತಿ ಮೂಡಿಸುವ ಕಾರ್ಯ ನಡೆದಿದೆ.

ಸರಕಾರಿ ಶಾಲೆಯಲ್ಲಿಎಲ್ ಕೆಜಿ, ಯುಕೆಜಿ ಶಿಕ್ಷಣ ಜತೆಗೆ ಕನ್ನಡ, ಆಂಗ್ಲಮಾಧ್ಯಮದಲ್ಲೂಪಾಠ ಬೋಧನೆ ಮಾಡಲಾಗುತ್ತಿದೆ. ಉಚಿತ ಪಠ್ಯಪುಸ್ತಕ, ಬಟ್ಟೆ, ಶಿಷ್ಯವೇತನ, ಬ್ಯಾಗ್ , ಶೂ ವಿತರಣೆ ಜತೆಗೆ ಅಕ್ಷರ ದಾಸೋಹ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತಿದೆ. ಪಾಲಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸಿ ಎಂದು ಶಿಕ್ಷಕರು, ಅಧಿಕಾರಿಗಳು ನಗರ, ಪಟ್ಟಣ ಹಾಗೂ ಗ್ರಾಮಗಳಲ್ಲಿಆಂದೋಲನ ನಡೆಸುತ್ತಿದ್ದಾರೆ.

ಖಾಸಗಿ ಶಾಲೆಗಳ ಜತೆ ಪೈಪೋಟಿ

ಮಕ್ಕಳ ಶಾಲೆ ಪ್ರವೇಶಕ್ಕೆ ಸಂಬಂಧಿಸಿದಂತೆ ಖಾಸಗಿ ಶಾಲೆಗಳ ಬ್ಯಾನರ್ , ಜಾಹೀರಾತುಗಳೇ ರಾರಾಜಿಸುತ್ತಿದ್ದವು. ಈಗ ಸರಕಾರಿ ಶಾಲೆಗಳ ಮುಖ್ಯಗುರು, ಶಿಕ್ಷಣ ಪ್ರೇಮಿಗಳು, ಶಿಕ್ಷಕರು ಮಕ್ಕಳ ಪ್ರವೇಶಕ್ಕೆ ಮನವಿ ಮಾಡಿಕೊಳ್ಳುವ ಬ್ಯಾನರ್ ಕೂಡ ಕಾಣಿಸಿಕೊಳ್ಳುತ್ತಿರುವುದು ಹೊಸ ಬೆಳವಣಿಗೆಯಾಗಿದೆ. ಮನೆ-ಮನೆಗೆ ಸಂಚರಿಸಿ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಶಿಕ್ಷಕರು ಮನವಿ ಮಾಡುತ್ತಿದ್ದಾರೆ.

----

ಶಿಕ್ಷಕರು ಅಲರ್ಟ್

ವರ್ಷದಿಂದ ವರ್ಷಕ್ಕೆ ಸರಕಾರಿ ಶಾಲೆಗಳಲ್ಲಿಹಾಜರಾತಿ ಕಡಿಮೆಯಾಗುತ್ತಿದೆ. ಹಾಜರಾತಿ ಕಡಿಮೆ ಹೊಂದಿರುವ ಶಾಲೆಗಳ ಶಿಕ್ಷಕರನ್ನು ಬೇರೆ ಶಾಲೆಗೆ ನಿಯೋಜನೆ ಮಾಡುತ್ತಿದ್ದು, ಇದರಿಂದ ಎಚ್ಚೆತ್ತಿರುವ ಶಿಕ್ಷಕರು ತಾವು ಸೇವೆ ಸಲ್ಲಿಸುತ್ತಿರುವ ಶಾಲೆಯಲ್ಲಿಮಕ್ಕಳ ಸಂಖ್ಯೆ ಹೆಚ್ಚಿಸಲು ಶ್ರಮ ವಹಿಸುತ್ತಿದ್ದಾರೆ.

----

ನಾನಾ ವಿಧಾನ ಅನುಸರಣೆ

ಸರಕಾರಿ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿಈಗಿರುವ ಮಕ್ಕಳ ಸಂಖ್ಯೆ ಉಳಿಸುವುದು, ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿಶಿಕ್ಷಕರು ದೃಢ ನಿರ್ಧಾರ ತೆಗೆದುಕೊಂಡಿದ್ದಾರೆ. ಮುಖ್ಯಗುರು, ಸಿಆರ್ ಪಿ, ಶಿಕ್ಷಕರು, ಎಸ್ಡಿಎಂಸಿ ಅಧ್ಯಕ್ಷರು, ಹಳೇ ವಿದ್ಯಾರ್ಥಿಗಳು ಸಹ ಭಾಗಿಯಾಗಿ ಆಂದೋಲನ ಆರಂಭಿಸಿದ್ದಾರೆ. ಪಾಲಕರಿಗೆ ನಂಬಿಕೆ ಬರುವ ನಿಟ್ಟಿನಲ್ಲಿಹಳೇ ವಿದ್ಯಾರ್ಥಿಗಳಿಂದಲೂ ದೂರವಾಣಿ ಕರೆ ಮಾಡಿಸಿ ಮಕ್ಕಳನ್ನು ಶಾಲೆಗೆ ಸೇರ್ಪಡಿಸುವ ವಿನೂತನ ವಿಧಾನವನ್ನೂ ಸರಕಾರಿ ಶಾಲೆ ಶಿಕ್ಷಕರು ಅನುಸರಿಸುತ್ತಿದ್ದಾರೆ.

-----

ಇಲಾಖೆಯ ಆದೇಶ ಅನ್ವಯ ಸರಕಾರಿ ಶಾಲೆಗಳಲ್ಲಿಹಾಜರಾತಿ ಹೆಚ್ಚಿಸುವ ಪ್ರಯತ್ನ ನಡೆದಿದೆ. ನಮ್ಮ ಶಿಕ್ಷಕರು ಆಯಾ ಗ್ರಾಮದ ಮನೆಮನೆಗೂ ಭೇಟಿ ನೀಡಿ ಸರಕಾರಿ ಶಾಲೆಗಳಲ್ಲಿದೊರೆಯುವ ಸೌಲಭ್ಯಗಳ ಕುರಿತು ಮನವರಿಕೆ ಮಾಡಿ ಮಕ್ಕಳನ್ನು ಶಾಲೆಗೆ ಸೇರಿಸುವುದಕ್ಕೆ ಪ್ರಯತ್ನ ನಡೆಸಿದ್ದಾರೆ.

ಎಸ್ .ಎಂ.ಮುಲ್ಲಾ ಬಿಇಒ ಮುಧೋಳ

----

ಸರಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿನಾನಾ ಪ್ರಯತ್ನಗಳು ನಡೆದಿವೆ. ರೈತರು, ಕೃಷಿ ಕಾರ್ಮಿಕರ ಮಕ್ಕಳು ಸರಕಾರಿ ಶಾಲೆಗೆ ಸೇರ್ಪಡೆಯಾಗಬೇಕು.

ಬಸವಂತಪ್ಪ ಕಾಂಬಳೆ ಜಿಲ್ಲಾಧ್ಯಕ್ಷರು, ರೈತ ಸಂಘ, ಶಿರೋಳ

-

ಫೋಟೊ 22 ಎಂಡಿಎಲ್ 1

ಮುಧೋಳ ತಾಲೂಕಿನ ಶಿರೋಳದಲ್ಲಿಸರಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಪಾಲಕರಲ್ಲಿಜಾಗೃತಿ ಮೂಡಿಸುವ ಅಭಿಯಾನಕ್ಕೆ ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ ಚಾಲನೆ ನೀಡಿದರು.