ಮಳೆ ಹಾನಿ: ಸಹಾಯವಾಣಿ ಕೇಂದ್ರ ಆರಂಭ

Contributed bynasirmnkodagu@gmail.com|Vijaya Karnataka

ಕೊಡಗು ಜಿಲ್ಲೆಯಲ್ಲಿ ಮಳೆ ಹಾನಿ ಹಿನ್ನೆಲೆಯಲ್ಲಿ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ. ಕುಶಾಲನಗರದಲ್ಲಿ ಒಳಚರಂಡಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಸ್ವೀಕರಿಸಲಾಗುತ್ತಿದೆ. ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಅರ್ಜಿ ಆಹ್ವಾನಿಸಲಾಗಿದೆ. ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಂಗಡಣೆ ಕಡ್ಡಾಯಗೊಳಿಸಲಾಗಿದೆ.

flood damage in kodagu district 24x7 helpline center started

ಮಡಿಕೇರಿ:

ಕೊಡಗು ಜಿಲ್ಲೆಯಾದ್ಯಂತ ಮುಂಗಾರು ಮಳೆ-ಗಾಳಿ ಪ್ರಾರಂಭವಾಗಿದ್ದು, ಮಳೆ ಹಾನಿಯಿಂದಾಗಿ ವಿದ್ಯುತ್ ಸರಬರಾಜಿನಲ್ಲಿಹೆಚ್ಚಿನ ಪ್ರಮಾಣದ ಅಡಚಣೆಗಳು ಉಂಟಾಗುತ್ತಿದ್ದು, ವಿದ್ಯುತ್ ಅವಘಡಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸಾರ್ವಜನಿಕರು ಯಾವುದೇ ರೀತಿಯ ವಿದ್ಯುತ್ ಜಾಲದ ವ್ಯತ್ಯಯಗಳನ್ನು (ವಿದ್ಯುತ್ ಮಾರ್ಗದ ತಂತಿ ಹಾಗೂ ಕಂಬಗಳು ತುಂಡಾಗುವುದು) ಗಮನಿಸಿದಲ್ಲಿ, ಸ್ವತಃ ಕ್ರಮಕೈಗೊಳ್ಳದೇ (ವಿದ್ಯುತ್ ತಂತಿಗಳನ್ನು ಸ್ಪರ್ಶಿಸದೇ) ತಕ್ಷಣ ಸೆಸ್ಕ್ ಈ ಕೆಳಗಿನ ದೂರವಾಣಿ ಸಂಖ್ಯೆಗಳಲ್ಲಿತಮ್ಮ ದೂರುಗಳನ್ನು ದಾಖಲಿಸುವಂತೆ ಕೋರಿದೆ. ಗ್ರಾಹಕರು ಸಂಪರ್ಕಿಸಲು ಸಾಧ್ಯವಾಗದಿದ್ದಲ್ಲಿಪರ್ಯಾಯವಾಗಿ ವಾಟ್ಸ್ ಅಪ್ ಮೂಲಕ ಪೋಟೋ ಸಂದೇಶವನ್ನು ನೀಡಬಹುದಾಗಿದೆ.

ಕೊಡಗು ಜಿಲ್ಲೆಯ (24*7) ಸಹಾಯವಾಣಿ ಸಂಖ್ಯೆ ಸವೀರ್ ಸ್ ಸೆಂಟರ್ ನ ದೂರವಾಣಿ ಸಂಖ್ಯೆ 1912, ಗ್ರಾಹಕರ ಸೇವಾ ಕೇಂದ್ರ ಸಂಖ್ಯೆ 18005990061.

ಮಡಿಕೇರಿ ತಾಲೂಕಿನ ಮಡಿಕೇರಿ, ತಾಳತ್ ಮನೆ, ಮೂರ್ನಾಡು, ಸಂಪಾಜೆ, ಭಾಗಮಂಡಲ, ನಾಪೋಕ್ಲುಹಾಗೂ ಗ್ರಾಹಕರ ಸೇವಾ ಕೇಂದ್ರಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿನಯ ಕುಮಾರ್ 9449598602, ಸಹಾಯಕ/ ಜೂನಿಯರ್ ಎಂಜಿನಿಯರ್ ಗಳು ಮಡಿಕೇರಿಗೆ ತೇಜ 9449598603, ತಾಳತ್ ಮನೆ ಹೇಮಂತ್ ರಾಜ್ 9449598604, ಮೂರ್ನಾಡು ಶಾಖೆಗೆ ಚೈತ್ರೇಶ್ 9449598605, ಸಂಪಾಜೆಗೆ ಅನಿಲ್ ಕುಮಾರ್ 9448994851, ಭಾಗಮಂಡಲ ಹರಿಣಾಕ್ಷಿ 9480810344, ನಾಪೋಕ್ಲುಶಾಖೆಗೆ ಹರೀಶ್ 9449598606 ಹಾಗೂ ಗ್ರಾಹಕರ ಸೇವಾ ಕೇಂದ್ರ ಮಡಿಕೇರಿ ಉಪ ವಿಭಾಗ ದೂ.ಸಂ. 08272-248454 ಮತ್ತು 9449598665.

ಕುಶಾಲನಗರ ತಾಲೂಕಿನ ಸುಂಟಿಕೊಪ್ಪ, ಕುಶಾಲನಗರ, ಕೂಡಿಗೆ, ಮಾದಾಪುರ, ಚೆಟ್ಟಳ್ಳಿ, ಗ್ರಾಹಕರ ಸೇವಾ ಕೇಂದ್ರಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ 9449598538, ಸಹಾಯಕ/ಜೂನಿಯರ್ ಎಂಜಿನಿಯರ್ ಗಳು ಸುಂಟಿಕೊಪ್ಪ ಶಾಖೆಗೆ ಲವಕುಮಾರ್ ಕೆ.ಎ. 9449598615, ಕುಶಾಲನಗರ ಯೋಗಾಚಾರಿ 9449598589, ಕೂಡಿಗೆ ಶಾಖೆಗೆ ರಾಣಿ 9449598613, ಮಾದಾಪುರ ನಿರಂಜನ್ ಎಸ್ .ಜಿ. 9449598588, ಚೆಟ್ಟಳ್ಳಿ ಮಂಜುನಾಥ ಜಿ.ಆರ್ .9448499965 ಹಾಗೂ ಗ್ರಾಹಕರ ಸೇವಾ ಕೇಂದ್ರ ಕುಶಾಲನಗರ ಉಪ ವಿಭಾಗ 08276-271046.

ಸೋಮವಾರಪೇಟೆ ತಾಲೂಕಿನ ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ, ಆಲೂರು ಸಿದ್ದಾಪುರ, ಶಾಂತಳ್ಳಿ, ಗ್ರಾಹಕರ ಸೇವಾ ಕೇಂದ್ರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿನಯ ಕುಮಾರ್ 9449598612, ಸಹಾಯಕ/ಜೂನಿಯರ್ ಎಂಜಿನಿಯರ್ ಗಳು ಸೋಮವಾರಪೇಟೆ ಶಾಖೆಗೆ ಶಿವಪ್ರಸಾದ್ 9449598614, ಶನಿವಾರಸಂತೆ ಸುದೀಪ್ ಕುಮಾರ್ 9449598616, ಕೊಡ್ಲಿಪೇಟೆ ಶಾಖೆಗೆ ಪ್ರಕಾಶ್ 9449598617, ಆಲೂರು ಸಿದ್ದಾಪುರ ಮನುಕುಮಾರ್ 9449598622, ಶಾಂತಳ್ಳಿ ಎಚ್ .ಡಿ.ಲೋಕೇಶ್ (ಪ್ರಭಾರ) 9480837509, ಗ್ರಾಹಕರ ಸೇವಾ ಕೇಂದ್ರ ಸೋಮವಾರಪೇಟೆ ಉಪ ವಿಭಾಗ 9448283394.

ವಿರಾಜಪೇಟೆ ತಾಲೂಕಿನ ವಿರಾಜಪೇಟೆ, ಅಮ್ಮತ್ತಿ, ಸಿದ್ದಾಪುರ, ಪಾಲಿಬೆಟ್ಟ, ಗ್ರಾಹಕರ ಸೇವಾ ಕೇಂದ್ರಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನೀತಾ(ಪ್ರಭಾರ) 9480837545, ಸಹಾಯಕ/ಜೂನಿಯರ್ ಎಂಜಿನಿಯರ್ ಗಳು ವಿರಾಜಪೇಟೆಗೆ ಸೋಮೇಶ್ 9449598610, ಅಮ್ಮತ್ತಿ ಮನೋಜ್ 9448994344, ಸಿದ್ದಾಪುರ ಶಾಖೆಗೆ ಸ್ವರಾಗ್ 9449598611, ಪಾಲಿಬೆಟ್ಟ ಶಿವರಾಜ 9448994341, ಗ್ರಾಹಕರ ಸೇವಾ ಕೇಂದ್ರ ವಿರಾಜಪೇಟೆ ಉಪ ವಿಭಾಗ 9448289409.

ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪಲು, ಶ್ರೀಮಂಗಲ, ಬಾಳೆಲೆ ಹಾಗೂ ಗ್ರಾಹಕರ ಸೇವಾ ಕೇಂದ್ರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸತೀಶ್ 9449598607, ಸಹಾಯಕ/ಜೂನಿಯರ್ ಎಂಜಿನಿಯರ್ ಗಳು ಗೋಣಿಕೊಪ್ಪ ಶಾಖೆಗೆ ಹೇಮಂತ್ ಕುಮಾರ್ 9449598608, ಶ್ರೀಮಂಗಲ ನಾಗೇಂದ್ರ ಪ್ರಸಾದ್ 9449598609, ಬಾಳೆಲೆ ಶಾಖೆಗೆ ರಂಗಸ್ವಾಮಿ 9449597484, ಗ್ರಾಹಕರ ಸೇವಾ ಕೇಂದ್ರ ಗೋಣಿಕೊಪ್ಪಲು ಉಪ ವಿಭಾಗ 9449878072 ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್ (ವಿ), ಮಡಿಕೇರಿ ವಿಭಾಗ ಎಂ.ರಾಮಚಂದ್ರ ದೂ.ಸಂ.9449598601 ಅನ್ನು ಸಂಪರ್ಕಿಸಬಹುದು ಎಂದು ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ರಾಮಚಂದ್ರ ತಿಳಿಸಿದ್ದಾರೆ.

ಮಡಿಕೇರಿ:

ಕುಶಾಲನಗರ ಪಟ್ಟಣದಲ್ಲಿಈಗಾಗಲೇ ಗೃಹ ಮತ್ತು ವಾಣಿಜ್ಯ ಕಟ್ಟಡಗಳಿಗೆ ಒಳಚರಂಡಿ ಸಂಪರ್ಕ ಒದಗಿಸಲಾಗುತ್ತಿದ್ದು, ಮನೆಯ ಮತ್ತು ವಾಣಿಜ್ಯ ಕಟ್ಟಡಗಳ ಮಾಲೀಕರು ಈ ಒಳಚರಂಡಿ ಜಾಲಕ್ಕೆ ಸಂಪರ್ಕ ಕಲ್ಪಿಸಿಕೊಳ್ಳಬೇಕಿದೆ.

ಸಂಪರ್ಕವನ್ನು ಕುಶಾಲನಗರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಪಡೆಯಬೇಕಾಗಿದ್ದು, ಪುರಸಭೆಗೆ ಈ ಕೆಳಕಂಡ ಶುಲ್ಕಗಳನ್ನು ಪಾವತಿಸಿ ಸಂಪರ್ಕ ನೀಡುವ ಬಗ್ಗೆ ಆಕ್ಷೇಪಣಾ ರಹಿತ ದೃಢೀಕರಣ ಪತ್ರ ಪಡೆಯಬೇಕಿದೆ, ಆದ್ದರಿಂದ ಸಾರ್ವಜನಿಕರು ಈ ಯೋಜನೆಯ ಸದುಪಯೋಗವನ್ನು ಪಡಿಸಿಕೊಂಡು ಯೋಜನೆ ಯಶಸ್ವಿಗೊಳಿಸಲು ಪುರಸಭೆಯೊಂದಿಗೆ ಸಹಕರಿಸಬೇಕಾಗಿ ಕೋರಲಾಗಿದೆ.

ಕುಶಾಲನಗರ ಪುರಸಭಾ ವ್ಯಾಪ್ತಿಯಲ್ಲಿಒಳಚರಂಡಿ ಯೋಜನೆಯ ವಾಣಿಜ್ಯ ಮತ್ತು ವಸತಿ ಸಂಪರ್ಕ ಶುಲ್ಕ ಒಂದು ಬಾರಿ ಮತ್ತು ನಿರ್ವಹಣಾ ಶುಲ್ಕ (ವಾರ್ಷಿಕ) ದರ ನಿಗಧಿಪಡಿಸಿದ ವಿವರ ಇಂತಿದೆ.

ಉದ್ದಿಮೆಗಳ ವಿವರ: ಗ್ರೇಡ್ -1 ಕಲ್ಯಾಣ ಮಂಟಪ/ ಹೋಟೆಲ್ ಮತ್ತು ವಸತಿ ಗೃಹಗಳು 10 ಕೊಠಡಿಗಳ ಮೇಲ್ಪಟ್ಟು ಸಂಪರ್ಕ ಶುಲ್ಕ(ಒಂದು ಬಾರಿ) ರೂ.10 ಸಾವಿರ, ವಾರ್ಷಿಕ ನಿರ್ವಹಣಾ ಶುಲ್ಕ ರೂ.10 ಸಾವಿರ,

ಗ್ರೇಡ್ -2 ಹೋಟೇಲ್ ಮತ್ತು ವಸತಿ ಗೃಹ 1 ರಿಂದ 10 ಕೊಠಡಿಗಳ ಒಳಗೊಂಡಿರುವುದು. ಸಂಪರ್ಕ ಶುಲ್ಕ(ಒಂದು ಬಾರಿ) 5 ಸಾವಿರ ರೂ. ವಾರ್ಷಿಕ ನಿರ್ವಹಣಾ ಶುಲ್ಕ ರೂ.5 ಸಾವಿರ,

ಗ್ರೇಡ್ -3 ಇತರೆ ಎಲ್ಲಾಸಣ್ಣ ಉದ್ದಿಮೆಗಳು ಸಂಪರ್ಕ ಶುಲ್ಕ(ಒಂದುಬಾರಿ) 3 ಸಾವಿರ ರೂ, ವಾರ್ಷಿಕ ನಿರ್ವಹಣಾ ಶುಲ್ಕ 3 ಸಾವಿರ ರೂ. 2400 ಚದರಡಿ ಮೇಲ್ಪಟ್ಟಿರುವ ವಾಸದ ಮನೆಗಳಿಗೆ ಗೃಹ ಬಳಕೆ ಸಂಪರ್ಕ ಶುಲ್ಕ(ಒಂದು ಬಾರಿ) 3 ಸಾವಿರ ರೂ., ವಾರ್ಷಿಕ ನಿರ್ವಹಣಾ ಶುಲ್ಕ 3 ಸಾವಿರ ರೂ.

2400 ಚದರಡಿ ಕೆಳಗಿರುವ ವಾಸದ ಮನೆಗಳಿಗೆ ಗೃಹಬಳಕೆ ಸಂಪರ್ಕ ಶುಲ್ಕ 2 ರೂ. ಸಾವಿರ, ವಾರ್ಷಿಕ ನಿರ್ವಹಣಾ ಶುಲ್ಕ 2 ರೂ. ಸಾವಿರ ಆಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಸತಿ ಸಂಪರ್ಕಗಳಿಗೆ ಸಂಪರ್ಕ ಶುಲ್ಕವನ್ನು ಕುಶಾಲನಗರ ಪುರಸಭೆ ಎಸ್ .ಸಿ.ಎಸ್ .ಪಿ/ಟಿ.ಎಸ್ .ಪಿ. ನಿಧಿಯಿಂದ ಭರಿಸಲಾಗುವುದು (ಕಟ್ಟಡವನ್ನು ಬಾಡಿಗೆಗೆ ನೀಡಿದ್ದಲ್ಲಿಅನ್ವಯಸುವುದಿಲ್ಲ) ನಿರ್ವಹಣಾ ಶುಲ್ಕ 1000 (ವಾರ್ಷಿಕ ಪಾವತಿಸಬೇಕಾಗಿರುತ್ತದೆ) ಸ್ವಂತ ವಾಸವಿರುವ ಮನೆ (2400 ಚದರಡಿ ಕಡಿಮೆ ಇರುವ ವಾಸದ ಮನೆಗಳಿಗೆ) ಆಗಿದೆ ಎಂದು ಕುಶಾಲನಗರ ಪುರಸಭೆ ಮುಖ್ಯಾಧಿ ಕಾರಿ ಟಿ.ಎಸ್ .ಗಿರೀಶ್ ತಿಳಿಸಿದ್ದಾರೆ.

ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ

ಮಡಿಕೇರಿ:

ಮಡಿಕೇರಿ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ ಕಾರ್ಯನಿರ್ವಹಿಸುತ್ತಿರವ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶಕ್ಕಾಗಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪ.ಜಾ/ಪ.ವರ್ಗ ಮತ್ತು ಇತರೆ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ 2026-27ನೇ ಸಾಲಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಥಿಯ ಪೋಷಕರ ವಾರ್ಷಿಕಆದಾಯ ಮಿತಿ ಪ್ರವರ್ಗ-1, ಪ.ಜಾ/ಪ.ವರ್ಗ 2.50 ಲಕ್ಷ ರೂ. ಪ್ರವರ್ಗ-2ಎ,2ಬಿ,3ಎ,3ಬಿ, ಇತರೆ ಹಿಂದುಳಿದ ವರ್ಗ ಮತ್ತು ಇತರೆ 1 ಲಕ್ಷ ರೂ., ಅರ್ಜಿಯನ್ನು ಣಣಠಿ://ಠಿ.ಞಚಿಡಿಟಿಚಿಣಚಿಞಚಿ..ಟಿ/ಛಿತಿಜ ನಲ್ಲಿಸಲ್ಲಿಸುವುದು. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂ.8 ಕೊನೆಯ ದಿನವಾಗಿದೆ. ತಾಲೂಕುವಾರು ವಿದ್ಯಾರ್ಥಿನಿಲಯಗಳ ವಿವರ ಹಾಗೂ ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳ ವಿವರ ಮತ್ತು ಸರಕಾರದ ಆದೇಶಕ್ಕಾಗಿ ಇಲಾಖೆಯ ವೆಬ್ ಸೈಟ್ ಣಣಠಿ://ಠಿ.ಡಿಣ../ ನ್ನು ನೋಡಬಹುದು. ಹೆಚ್ಚಿನ ಮಾಹಿತಿಗೆ ಮೊ.ಸಂ.9632225847 ನ್ನು ಸಂಪರ್ಕಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿ ಕಾರಿ ತಿಳಿಸಿದ್ದಾರೆ.

ಮಡಿಕೇರಿ: ಕೊಡಗು ಜಿಲ್ಲೆಯ 2026-27 ನೇ ಸಾಲಿಗೆ ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಸಲು ಆಸಕ್ತಿಯುಳ್ಳ ಅನುಭವುಳ್ಳ ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಗೆ (ಎನ್ ಜಿಒ) ಆಸಕ್ತ ಅಭಿವ್ಯಕ್ತಿ ಸ್ವ-ಇಚ್ಛೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಂದ ಇಠಿಡಿಟಿ ಜಿ ಟಿಣಡಿಣ’’ ಅನ್ನು ಮೇ 30ರವರೆಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಣಣಠಿ://ಞಠಿಠಿಠಿ.ಞಚಿಡಿಟಿಚಿಣಚಿಞಚಿ..ಟಿ/ ಅಲ್ಲಿನೋಡಬಹುದಾಗಿದೆ ಹಾಗೂ ಜಿಲ್ಲಾಅಂಧತ್ವ ನಿಯಂತ್ರಣಾಧಿ ಕಾರಿ ಕಚೇರಿ ಮತ್ತು ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಕಚೇರಿ, ಮಡಿಕೇರಿ ಕೊಡಗು ಜಿಲ್ಲೆವಿಳಾಸ: ಜಛಿಞಜಚಿಚಿಟ.ಛಿ ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಅಂಧತ್ವ ನಿಯಂತ್ರಣಾಧಿ ಕಾರಿ ತಿಳಿಸಿದ್ದಾರೆ.

ಮಡಿಕೇರಿ: ನಗರ ವ್ಯಾಪ್ತಿಯಲ್ಲಿರುವ ವಾಣಿಜ್ಯ ಬಳಕೆದಾರರು, ಬಸ್ ನಿಲ್ದಾಣ, ಡಿಪೋಗಳು, ಕೈಗಾರಿಕಾ ಘಟಕಗಳು, ಕೈಗಾರಿಕಾ ವಲಯಗಳು, ಹೋಟೆಲ್ ಗಳು, ಆಸ್ಪತ್ರೆಗಳು, ನರ್ಸಿಂಗ್ ಹೋಮ್ ಗಳು, ಹಾಸ್ಟೆಲ್ ಗಳು, ಕ್ರೀಡಾಂಗಣಗಳು, ಕ್ರೀಡಾ ಸಂಕೀರ್ಣಗಳು, ಸಮುದಾಯ ಸಭಾಂಗಣಗಳು, ಸಮಾವೇಶ ಸಭಾಂಗಣಗಳು, ಮದುವೆ ಹಾಗೂ ಔತಣ ಕೂಟದ ಸಭಾಂಗಣಗಳು, ಪ್ರವಾಸಿ ತಾಣಗಳು, ವಸತಿ ಸಂಘಗಳು ಹಾಗೂ ಇತರೆ ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರು ತಮ್ಮ ಸಂಸ್ಥೆಗಳಲ್ಲಿಉತ್ಪತ್ತಿಯಾಗುವ ಘನ ತ್ಯಾಜ್ಯವನ್ನು ನಾಲ್ಕು ವಿಧಗಳಲ್ಲಿವಿಂಗಡಿಸಿ ಕಡ್ಡಾಯವಾಗಿ ಪ್ರತ್ಯೇಕಿಸಿ ನಗರಸಭೆಯ ತ್ಯಾಜ್ಯ ಸಂಗ್ರಹ ವಾಹನಗಳಿಗೆ ಹಸ್ತಾಂತರಿಸಬೇಕು.

ಹಸಿತ್ಯಾಜ್ಯ: ಅಡುಗೆ ಮನೆ ಕಸ ತ್ಯಾಜ್ಯ ಆಹಾರ ತ್ಯಾಜ್ಯ ತರಕಾರಿಯ ತ್ಯಾಜ್ಯ ಹಣ್ಣಿನ ತ್ಯಾಜ್ಯ ಹೂವಿನ ತ್ಯಾಜ್ಯ ಗಾರ್ಡನ್ ವೇಸ್ಟ್ ಮತ್ತು ಇತರೆ ಕರಗುವ ತ್ಯಾಜ್ಯ ವಸ್ತುಗಳು.

ಒಣ ತ್ಯಾಜ್ಯ: ಎಲ್ಲರೀತಿಯ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳು ಬಟ್ಟೆ ತ್ಯಾಜ್ಯ ವಸ್ತುಗಳು ಕಬ್ಬಿಣ, ರಬ್ಬರ್ ಮರದ ತ್ಯಾಜ್ಯ ಮತ್ತಿತರ. ಸ್ಯಾನಿಟರಿ ತ್ಯಾಜ್ಯ: ಡೈಪರ್ಸ್ ಸ್ಯಾನಿಟರಿ ನ್ಯಾಪ್ಕಿನ್ಸ್ ಕಾಂಡಮ್ ಇತ್ಯಾದಿ.

ಸ್ಪೆಷಲ್ ಕೇರ್ ವೇಸ್ಟ್ : ಪೇಯಿಂಟ್ ಡ್ರಮ್ಸ್ /ಕಂಟೇನರ್ ಔಷಧಿ ಕ್ಯಾನ್ ಗಳು/ ಡ್ರಮ್ ಗಳು/ ಬಾಟಲ್ಸ್ ಗಳು, ಬಲ್ಟು/ ಟ್ಯೂಬ್ ಲೈಟ್ , ಅವಧಿ ಮೀರಿದ ಔಷಧಿ ಗಳು ಒಡೆದ ಥರ್ಮೋಮೀಟರ್ ಹಳೆಯ ಬ್ಯಾಟರಿಗಳು ಬಳಸಿದ ನೀಡಲ್ಸ್ / ಸಿರಿಜ್ ಮತ್ತು ಬ್ಯಾಂಡೇಜ್ ಮತ್ತಿತರ.

ಅದರಂತೆ ನಗರಸಭಾ ವ್ಯಾಪ್ತಿಯಲ್ಲಿಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳ ಕಸ ವಿಂಗಡಣೆ ಮಾಡದೆ ಇರುವವರ ವಿರುದ್ಧ ಘನತ್ಯಾಜ್ಯ ವಸ್ತುಗಳ (ವ್ಯವಸ್ಥಾಪನೆ ಮತ್ತು ನಿರ್ವಹಣೆ)ನಿಯಮಗಳು 2026ರಂತೆ ದಂಡ ವಿಧಿಸುವುದಲ್ಲದೆ ಮೂಲಭೂತ ಸೌಕರ್ಯಗಳಾದ ನೀರು ಮತ್ತು ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಕ್ರಮವಹಿಸಲಾಗುವುದು.ಆದ್ದರಿಂದ ಮಡಿಕೇರಿ ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಘನ ತ್ಯಾಜ್ಯ ವಸ್ತುಗಳ ವ್ಯವಸ್ಥಾಪನೆ ಮತ್ತು ನಿರ್ವಹಣೆ ನಿಯಮಗಳು 2026ನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಹಕಾರ ನೀಡುವಂತೆ ನಗರಸಭೆ ಪೌರಾಯುಕ್ತರಾದ ಎಚ್ .ಆರ್ .ರಮೇಶ್ ಕೋರಿದ್ದಾರೆ.