ಭಾರಿ ಮಳೆಗೆ ಬಾಳೆ, ಮಾವಿನ ಬೆಳೆ ನಷ್ಟ
ವಿಕ ಸುದ್ದಿಲೋಕ ಮುಳಬಾಗಲು
ಇತ್ತೀಚೆಗೆ ತಾಲೂಕಿನಲ್ಲಿಭಾರಿ ಮಳೆ ಹಾಗೂ ಬಿರುಗಾಳಿಗೆ ಬಾಳೆ ತೋಟ ಹಾಗೂ ಮಾವು ಗಿಡಗಳಿಂದ ಉದುರಿದ್ದು, ಇದರಿಂದ ರೈತರು ತೀವ್ರ ನಷ್ಟ ಅನುಭವಿಸಿದ್ದಾರೆ.
ತಾಲೂಕಿನ ಕೀಲಾಗಾಣಿ ಗ್ರಾಮದ ಮುನಿರಾಜು ಮತ್ತು ಎಂ.ಸಿ.ಮುನಿಯಪ್ಪ ಇಬ್ಬರು ರೈತರು ಬೆಳೆಸಿದ್ದ 1.6 ಹೆಕ್ಟರ್ ಬಾಳೆ ಗಿಡಗಳು ಬಿರುಗಾಳಿ ಮತ್ತು ಮಳೆಗೆ ನೆಲಕ್ಕೆ ಉರುಳಿ ಶೇಕಡ 40ರಷ್ಟು ಬೆಳೆ ನಷ್ಟ ಹೊಂದಿದ್ದು ಸುಮಾರು 1 ಲಕ್ಷ 50 ಸಾವಿರ ರೂ. ಬೆಳೆ ನಷ್ಟ ಉಂಟಾಗಿದೆ. ಅದೇ ರೀತಿ ಮೇಲ್ತಾಯಲೂರು ಗ್ರಾಮದಲ್ಲಿ10 ಹೆಕ್ಟೇರ್ ಪ್ರದೇಶದಲ್ಲಿ10 ರಿಂದ 15 ರೈತರು ಬೆಳೆಸಿರುವ ಮಾವಿನ ಗಿಡಗಳಲ್ಲಿಮಾವಿನಕಾಯಿಗಳು ಬಿರುಗಾಳಿ ಮತ್ತು ಮಳೆಗೆ ಉದುರಿ ಬಿದ್ದಿದ್ದರಿಂದ ಸುಮಾರು 6 ಲಕ್ಷ ರೂ ನಷ್ಟ ಉಂಟಾಗಿದೆ.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎಸ್ .ವಿ.ರವಿಕುಮಾರ್ ಅವರ ಸೂಚನೆಯಂತೆ ಸಹಾಯಕ ತೋಟಗಾರಿಕೆ ಅಧಿಕಾರಿ ಮುರುಗೇಶ್ ಮತ್ತು ಗ್ರಾಮ ಲೆಕ್ಕಾಧಿಕಾರಿ ವೀರೇಶ್ ನಷ್ಟ ಹೊಂದಿರುವ ಬಾಳೆ ತೋಟ ಮತ್ತು ಮಾವಿನ ಮರಗಳ ಸ್ಥಳ ಪರಿಶೀಲನೆ ಮಾಡಿ ನಷÜ್ಟ ಪರಿಹಾರಕ್ಕೆ ಜಂಟಿ ಸಮೀಕ್ಷೆ ನಡೆಸಿ ನಷ್ಟದ ಅಂದಾಜು ಮೊತ್ತವನ್ನು ನಮೂದಿಸಿ ತಹಸಿಲ್ದಾರ್ ವಿ.ಗೀತಾ ಅವರಿಗೆ ವರದಿ ಸಲ್ಲಿಸಿದ್ದಾರೆ.
ರೈತರ ನಷ್ಟ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಒತ್ತಾಯಿಸಿದ್ದಾರೆ.
23 ಎಂ.ಬಿ.ಎಲ್ ಪೋಟೋ 1 ಮುಳಬಾಗಲು ಸಹಾಯಕ ತೋಟಗಾರಿಕೆ ಅಧಿಕಾರಿ ಮುರುಗೇಶ್ ಮತ್ತು ಗ್ರಾಮ ಲೆಕ್ಕಾಧಿಕಾರಿ ವೀರೇಶ್ ಬಿರುಗಾಳಿ ಮಳೆಗೆ ನೆಲಕ್ಕೆ ಉರುಳಿರುವ ಬಾಳೆ ತೋಟವನ್ನು ಪರಿಶೀಲಿಸುತ್ತಿರುವುದು.
23 ಎಂ.ಬಿ.ಎಲ್ ಪೋಟೋ 2 ಮುಳಬಾಗಲು ತಾಲೂಕಿನ ಮೇಲ್ತಾಯಲೂರು ಗ್ರಾಮದಲ್ಲಿಮಾವಿನ ಕಾಯಿಗಳು ಉದುರಿ ಬಿದ್ದಿರುವುದು.

