ಆಕ್ಷೇಪಣೆ ಸಲ್ಲಿಸಲು ಅವಕಾಶ
ಪಿರಿಯಾಪಟ್ಟಣ: ಫಸಲ್ ಬಿಮಾ ಯೋಜನೆಯ ತಿರಸ್ಕೃತ ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಕುಸುಮಾ ತಿಳಿಸಿದ್ದಾರೆ.
‘‘ತಾಲೂಕಿನ 2024-25ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿನೋಂದಣಿಯಾದ ಪ್ರಸ್ತಾವನೆಗಳನ್ನು ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಬೆಳೆ ಸಮೀಕ್ಷೆಯ ದತ್ತಾಂಶಗಳನ್ನು ಹೋಲಿಕೆ ಮಾಡಿ ತಾಳೆಯಾಗದ ಕಸಬಾ ಹೋಬಳಿಯ 73, ಬೆಟ್ಟದಪುರ ಹೋಬಳಿಯ 47, ರಾವಂದೂರು ಹೋಬಳಿಯ 49 ಹಾರನಹಳ್ಳಿ ಹೋಬಳಿಯ 66 ಪ್ರಕಾರಗಳು ಸೇರಿದಂತೆ ಒಟ್ಟು 235 ಪ್ರಕರಣಗಳನ್ನು ತಿರಸ್ಕರಿಸಲಾಗಿದೆ. ಈ ಅರ್ಜಿಗಳಿಗೆ ರೈತರು ಆಕ್ಷೇಪಣೆ ಸಲ್ಲಿಸಬಹುದಾಗಿದೆ,’’ ಎಂದು ತಿಳಿಸಿದ್ದಾರೆ.
‘‘ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಎಲ್ಲರೈತ ಸಂಪರ್ಕ ಕೇಂದ್ರಗಳಲ್ಲಿಹಾಗೂ ಗ್ರಾಮ ಪಂಚಾಯಿತಿಗಳಲ್ಲಿತಿರಸ್ಕೃತಗೊಂಡ ಪಟ್ಟಿಯನ್ನು ಪ್ರದರ್ಶಿಸಲಾಗಿದ್ದು, ಈ ಕುರಿತು ಆಕ್ಷೇಪಣೆ ಸಲ್ಲಿಸಲು ರೈತರು 2024-25, 2024-25 ನೇ ಸಾಲಿನ ಪಹಣಿಯಲ್ಲಿ, ವಿಮೆಗೆ ನೋಂದಾಯಿಸಿದ, ಬೆಳೆ ನಮೂದಾಗಿರುವ ದಾಖಲೆ, ಬೆಳೆಯ ಉತ್ಪನ್ನವನ್ನು ಮಾರುಕಟ್ಟೆಯಲ್ಲಿಮಾರಾಟ ಮಾಡಿದ ರಶೀದಿಯೊಂದಿಗೆ ರೈತ ಸಂಪರ್ಕ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಜೂ.1ರೊಳಗೆ ಸಲ್ಲಿಸಬಹುದು,’’ ಎಂದು ತಿಳಿಸಿದ್ದಾರೆ.

