ಕುಂಡಂಗುಳಿ: ಕೇರಳ ರಾಜ್ಯ ಸೇವಾ ಪಿಂಚಣಿದಾರರ ಸಂಘದ ಕಲಾ-ಸಾಂಸ್ಕೃತಿಕ ಸಂಘಟನೆಯಾದ ಸರಣಿಯ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾಸಮಿತಿ ವತಿಯಿಂದ ರಾಜೀವ್ ಗಾಂಧಿ ಸಂಸ್ಮರಣೆ ಮತ್ತು ಕವಿಗೋಷ್ಠಿ ಕಾರ್ಯಕ್ರಮ ಆಯೋಜಿಸಲಾಯಿತು.
ಪೊಯ್ನಾಚಿ ಪರಂಬ ರಾಜೀವ್ ಗ್ರಂಥಾಲಯದಲ್ಲಿನಡೆದ ಕಾರ್ಯಕ್ರಮವನ್ನು ಚೆಮ್ನಾಡು ಗ್ರಾಮ ಪಂ. ಅಧ್ಯಕ್ಷೆ ಆಯೇಷಾ ಅಬೂಬಕರ್ ಉದ್ಘಾಟಿಸಿದರು. ಸರಣಿ ಅಧ್ಯಕ್ಷ ಪಿ. ನಾರಾಯಣನ್ ಅಡಿಯೋಡಿ ಅಧ್ಯಕ್ಷತೆ ವಹಿಸಿದ್ದರು. ಅಡ್ವ. ಬಿ.ಎಂ.ಜಮಾಲ್ ಅವರು ರಾಜೀವ್ ಗಾಂಧಿ ಸಂಸ್ಮರಣಾ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿಕಾವ್ಯ ಮಂಜರಿ ಕಾವ್ಯ ಪ್ರಶಸ್ತಿ ಪಡೆದ ಆಲಿಸ್ ಥಾಮಸ್ ಟೀಚರ್ ಅವರನ್ನು ಸನ್ಮಾನಿಸಲಾಯಿತು. ರಾಘವನ್ ವಲಿಯವೀಡು, ಸಿ.ರತ್ನಾಕರನ್ , ಕೆ.ಸರೋಜಿನಿ, ಎಂ.ಕೆ.ದಿವಾಕರನ್ , ಕೆ.ಪಿ. ಬಾಲಕೃಷ್ಣನ್ , ಕುಂಞಿಕಣ್ಣನ್ ಕರಿಚೇರಿ, ಕೆ,ವಿ ವಿಜಯನ್ , ಜೋಸ್ ಮ್ಯಾಥ್ಯೂ ಮಾತನಾಡಿದರು. ಸರಣಿ ಸಂಚಾಲಕ ಬಾಬುರಾಜ್ ಎನ್ . ಕೆ. ಸ್ವಾಗತಿಸಿದರು. ಖಜಾಂಚಿ ಎ. ದಾಮೋದರನ್ ವಂದಿಸಿದರು. ನಂತರ ನಡೆದ ಕವನ ವಾಚನದಲ್ಲಿಕವಿ ರಾಮಕೃಷ್ಣನ್ ಸ್ವಾಗತಿಸಿದರು. ಆಲಿಸ್ ಥಾಮಸ್ , ಶೋಭನಾ ಶ್ರೀಧರನ್ , ಸರಸ್ವತಿ ಮಾಂಗಾಡ್ , ದಿವಾಕರನ್ ಕೆ., ನಾರಾಯಣನ್ ಅಡಿಯೋಡಿ, ಆನಂದ ಕೃಷ್ಣನ್ ಎಡಚೇರಿ, ಜಾಜ್ ರ್ ಮ್ಯಾಥ್ಯೂ ಕವಿತೆಗಳನ್ನು ವಾಚಿಸಿದರು.
ಚಿತ್ರ.. 23ಎಂಯುಸಂಸ್ಮರಣೆ

