ನಾನು ಬೆಂಗಳೂರು ಟೆಕ್ ಸಮ್ಮಿಟ್ ಗೆ ಭೇಟಿ ನೀಡಿದ್ದೆ. ಅಲ್ಲಿನಾನು ಏಜೆಂಟಿಕ್ ಎಐ, ಆರ್ ಎನ್ ಎ ಸೀಕ್ವೆನ್ಸಿಂಗ್ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ನಡುವಿನ ಸಂಬಂಧದ ಬಗ್ಗೆ ಅನೇಕ ವಿಷಯಗಳನ್ನು ಕಲಿತೆ. ಈ ಟೆಕ್ ಸಮ್ಮಿಟ್ ದಾವಣಗೆರೆಯಲ್ಲಿನಡೆದಿದ್ದರೆ ತುಂಬಾ ಉಪಯುಕ್ತವಾಗುತ್ತಿತ್ತು. ಇದು ನಮಗೆ ಇನ್ನೂ ಹೆಚ್ಚಿನ ವಿಷಯಗಳನ್ನು ಅನ್ವೇಷಿಸಲು ಮತ್ತು ನಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಲು ಸಹಾಯ ಮಾಡುತ್ತಿತ್ತು. ವಿವಿಧ ಉದ್ಯಮಗಳು ಮತ್ತು ಪದವೀಧರರಿಂದ ಕಂಪನಿಗಳು ನಿರೀಕ್ಷಿಸುವ ಕೌಶಲಗಳನ್ನು ತಿಳಿದುಕೊಳ್ಳುವ ಮೂಲಕ, ನಮ್ಮ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಹಾಗೂ ಉದ್ಯೋಗಾವಕಾಶಗಳನ್ನು ಕಂಡುಕೊಳ್ಳಲು ಇದು ನೆರವಾಗುತ್ತದೆ.
- ಸಂಜನಾ ಎಸ್ . ಕುಂದಕರ್ , ಮೂರನೇ ವರ್ಷ, ಬಯೋ ಟೆಕ್ನಾಲಜಿ, ಬಿಐಇಟಿ, ದಾವಣಗೆರೆ---
ದಾವಣಗೆರೆಯಲ್ಲಿಐಟಿ ಹಬ್ ಸ್ಥಾಪನೆಯಾಗಿ, ಹೊಸ ಸ್ಟಾರ್ಟ್ ಅಪ್ ಗಳು ಮತ್ತು ಉದ್ಯಮಗಳು ಪ್ರಾರಂಭವಾದರೆ ಮಧ್ಯ ಕರ್ನಾಟಕದ ಯುವಜನತೆಗೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಇದರಿಂದ ಯುವಕ ಯುವತಿಯರು ತಮ್ಮದೇ ಊರಿನಲ್ಲಿಉದ್ಯೋಗ ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು ಹಾಗೂ ತಮ್ಮ ಕುಟುಂಬಗಳಿಗೆ ಉತ್ತಮ ಆರ್ಥಿಕ ಬೆಂಬಲ ನೀಡಬಹುದು. ಅಲ್ಲದೆ, ಉದ್ಯೋಗಕ್ಕಾಗಿ ಬೆಂಗಳೂರಿನಂತಹ ನಗರಗಳಿಗೆ ವಲಸೆ ಹೋಗುವ ಯುವಜನರ ಸಂಖ್ಯೆಯೂ ಕಡಿಮೆಯಾಗಬಹುದು. ದಾವಣಗೆರೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಆರ್ಥಿಕ ಮತ್ತು ಕೈಗಾರಿಕಾ ಅಭಿವೃದ್ಧಿಗೂ ಇದು ದೊಡ್ಡ ಕೊಡುಗೆಯಾಗಲಿದೆ.
- ಸತೀಶ ಮಲ್ಲಿಕಾರ್ಜುನ ಪೋಳ, ಬಿ.ಇ. ಕೆಮಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿ, ಬಿಐಇಟಿ, ದಾವಣಗೆರೆ.