ವಿಕ ಸುದ್ದಿಲೋಕ ಹಾಸನವೈದ್ಯಕೀಯ ಕಾಲೇಜುಗಳಲ್ಲಿಕನ್ನಡ ಅನುಷ್ಠಾನಕ್ಕೆ ಹಿಮ್ಸ್ ಉತ್ತಮ ಮಾದರಿಯಾಗಿದೆ ಎಂದು ಹಿಮ್ಸ್ ಡೀನ್ ಡಾ. ರಾಜಣ್ಣ ಬಿ.ಹೇಳಿದರು.
ಹಿಮ್ಸ್ ನಲ್ಲಿಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, , ಕನ್ನಡಕ್ಕೆ ಡಾ. ರಾಜ್ ಕಮಾರ್ ಅವರ ಕನ್ನಡಪರ ಸೇವೆಯನ್ನು ಸ್ಮರಿಸಿದರು. ಕನ್ನಡ ನಾಡು-ನುಡಿಗೆ ಮಹನೀಯರ ಕೊಡುಗೆ ಕುರಿತು ಶ್ಲಾಘಿಸಿದರು.ಕನ್ನಡ ಅನುಷ್ಠಾನ ಸಮಿತಿ ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ರಂಗಭೂಮಿ ಕಲಾವಿದೆ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಪೂಜಾ ರಘುನಂದನ್ ಮಾತನಾಡಿ, ಕನ್ನಡ ಕೇವಲ ಸಂವಹನದ ಭಾಷೆಯಲ್ಲಅದು ನಮ್ಮ ಸಂಸ್ಕತ್ರೃತಿ, ಅಸ್ಮಿತೆ ಹಾಗೂ ಬದುಕಿನ ಅವಿಭಾಜ್ಯ ಅಂಗ ಎಂದರು.
ಕವಿರಾಜಮಾರ್ಗ, ಪಂಪ, ರನ್ನ, ವಚನ-ದಾಸ ಸಾಹಿತ್ಯ, ಎಂಟು ಜ್ಞಾನಪೀಠ ಪ್ರಶಸ್ತಿಗಳು ಹಾಗೂ ಯಕ್ಷಗಾನ, ಡೊಳ್ಳು ಕುಣಿತ, ವೀರಗಾಸೆಯಂತಹ ಕಲಾಪರಂಪರೆ ಕನ್ನಡದ ಶ್ರೀಮಂತಿಕೆಗೆ ಸಾಕ್ಷಿಯಾಗಿವೆ. ವೈದ್ಯಕೀಯ ವಿದ್ಯಾರ್ಥಿಗಳು ಗ್ರಾಮೀಣ ಜನರಿಗೆ ರಕ್ತದೊತ್ತಡ, ಮಧುಮೇಹ, ಹೃದಯ ಕಾಯಿಲೆ ಹಾಗೂ ತಾಯಿ-ಮಗುವಿನ ಆರೋಗ್ಯದ ಕುರಿತು ಸರಳ ಕನ್ನಡದಲ್ಲಿಅರಿವು ಮೂಡಿಸುವುದು ಮಹತ್ವದ ಕನ್ನಡ ಸೇವೆ ಎಂದು ಹೇಳಿದರು.
’’ರೋಗಿಯನ್ನು ಕೇವಲ ಪ್ರಕರಣ ಅಥವಾ ವರದಿಯಾಗಿ ನೋಡದೆ, ಮನುಷ್ಯನಾಗಿ ಕಾಣುವ ಮಾನವೀಯ ದೃಷ್ಟಿಕೋನವನ್ನು ಮಾತೃಭಾಷೆ ಬೆಳೆಸುತ್ತದೆ. ವೈದ್ಯರ ಕೈಯಲ್ಲಿರುವ ಔಷಧ ಕಾಯಿಲೆ ಗುಣಪಡಿಸಲಿ, ಹೃದಯದಲ್ಲಿರುವ ಮಾನವೀಯತೆ ನೋವಿಗೆ ಸ್ಪಂದಿಸಲಿ, ಮಾತಿನಲ್ಲಿರುವ ಕನ್ನಡ ರೋಗಿಗೆ ಧೈರ್ಯ ತುಂಬಲಿ’’ ಎಂದು ಆಶಿಸಿದರು. ಜೀವ ಉಳಿಸುವ ವೈದ್ಯಕೀಯ ಲೋಕದಲ್ಲಿಔಷಧ, ಶಸ್ತ್ರಚಿಕಿತ್ಸೆಗಳಷ್ಟೇ ಮಹತ್ವ ರೋಗಿಯ ಮನಸ್ಸಿಗೆ ಧೈರ್ಯ ತುಂಬುವ ಮಾತೃಭಾಷೆಯ ಆತ್ಮೀಯತೆಗೂ ಇದೆ. ನಾಳಿನ ವೈದ್ಯರಾಗುವ ವಿದ್ಯಾರ್ಥಿಗಳು ನಾಡು-ನುಡಿಯ ಅಸ್ಮಿತೆಯೊಂದಿಗೆ ಬೆಸೆದುಕೊಂಡಾಗ ಚಿಕಿತ್ಸೆಯೂ ಮಾನವೀಯ ಸ್ಪರ್ಶ ಪಡೆಯುತ್ತದೆ ಎಂದರು.
ಪೂಜಾ ರಘುನಂದನ್ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಎನ್ ಎಸ್ ಎಸ್ ಅಧಿಕಾರಿ ನಿಚಿತಾ ಕುಮಾರಿ ಪರಿಚಯಿಸಿದರು. ಕನ್ನಡ ಸಂಘದ ಅಧ್ಯಕ್ಷ ಡಾ. ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲೆ ಕವಿತಾ ಸಿ.ವಿ., ಆರ್ಥಿಕ ಸಲಹೆಗಾರ ಗೋವಿಂದರಾಜು, ಜಿಲ್ಲಾಶಸ್ತ್ರಚಿಕಿತ್ಸಕ ಡಾ. ಶ್ರೀಧರ್ , ಶುಶ್ರೂಷಕ ಅಧೀಕ್ಷಕಿ ಸುಕನ್ಯಾ ಹಾಜರಿದ್ದರು.
ಕಲರವ ಮೂಡಿಸಿದ ಸಾಂಸ್ಕೃತಿಕ ವೈಭವ
ಕಾರ್ಯಕ್ರಮಕ್ಕೂ ಮುನ್ನ ಗಣ್ಯರು ಸಸಿ ನೆಟ್ಟು ಪರಿಸರ ಕಾಳಜಿ ಮೆರೆದರು. ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ವಿದ್ಯಾರ್ಥಿಗಳ ಸಾಂಸ್ಕತ್ರೃತಿಕ ಪ್ರದರ್ಶನಗಳು ರಾಜ್ಯೋತ್ಸವದ ಸಂಭ್ರಮ ಹೆಚ್ಚಿಸಿದವು. ಪೂಜಾ ರಘುನಂದನ್ ಅವರ ’ತಾಯಿಯಾಗುವುದೆಂದರೆ...’ ಏಕವ್ಯಕ್ತಿ ರಂಗಪ್ರಯೋಗ ಪ್ರೇಕ್ಷಕರ ಮನಸೂರೆಗೊಂಡಿತು.
ಫೋಟೊ
ಹಾಸನದ ಹಿಮ್ಸ್ ನಲ್ಲಿಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಪೂಜಾ ರಘುನಂದನ್ ಉದ್ಘಾಟಿಸಿದರು.