ಅನುಸಂಧಾನ ಸಮಸ್ಯೆ ತಡೆಯುವ ಪ್ರಕ್ರಿಯೆ

Contributed by: gururaja.jd@gmail.com|Vijaya Karnataka•
Vijay Karnataka
ರಾಜ್ಯಮಟ್ಟದ ದ್ವಿತೀಯ ಅನುಸಂಧಾನ ಸ್ಪರ್ಧೆ-2026ರ ಸಮಾರೋಪ

ಅನುಸಂಧಾನ ಸಮಸ್ಯೆ ತಡೆಯುವ ಪ್ರಕ್ರಿಯೆ
ವಿಕ ಸುದ್ದಿಲೋಕ ಶಿವಮೊಗ್ಗ

ಅನುಸಂಧಾನ ಎಂದರೆ ಕೇವಲ ವಿವಾದವೊಂದನ್ನು ಅಂತ್ಯಗೊಳಿಸುವುದಲ್ಲ, ಭವಿಷ್ಯದಲ್ಲಿಎದುರಾಗಬಹುದಾದ ಸಮಸ್ಯೆಗಳನ್ನು ತಡೆಯುವ ಪ್ರಕ್ರಿಯೆಯೂ ಆಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ರವಿ ವಿ. ಹೊಸಮನಿ ಹೇಳಿದರು.

ನಗರದ ಎನ್ ಇಎಸ್ ಸಿ.ಭೀಮಸೇನರಾವ್ ಕಾನೂನು ಮಹಾವಿದ್ಯಾಲಯದಲ್ಲಿಸ್ನಾತಕೋತ್ತರ ಕಾನೂನು ಅಧ್ಯಯನ ಕೇಂದ್ರ ಹಾಗೂ ಯುವ ರೆಡ್ ಕ್ರಾಸ್ ಘಟಕದ ಸಂಯುಕ್ತ ಆಶ್ರಯದಲ್ಲಿಶನಿವಾರ ಆಯೋಜಿಸಿದ್ದ ಮೂರು ದಿನಗಳ ರಾಜ್ಯಮಟ್ಟದ ದ್ವಿತೀಯ ಅನುಸಂಧಾನ ಸ್ಪರ್ಧೆ-2026ರ ಸಮಾರೋಪ ಸಮಾರಂಭದಲ್ಲಿಅವರು ಮಾತನಾಡಿದರು.

ವಕೀಲರು ತಮ್ಮ ಕಕ್ಷಿದಾರರ ಉದ್ದೇಶಗಳನ್ನು ಸ್ಪಷ್ಟವಾಗಿ ಅರಿತು, ಅನುಸಂಧಾನಕ್ಕೆ ಮೊದಲು ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು. ಸಮಸ್ಯೆಯ ಪರಿಹಾರಕ್ಕೆ ಇರುವ ಉತ್ತಮ ಹಾಗೂ ಪರ್ಯಾಯ ಮಾರ್ಗಗಳನ್ನು ವಿಶ್ಲೇಷಿಸಬೇಕು. ಪರಸ್ಪರ ಸ್ವತಂತ್ರ ಒಪ್ಪಿಗೆ ಅನುಸಂಧಾನದ ಪ್ರಮುಖ ಅಂಶವಾಗಿದೆ. ಆತುರಕ್ಕಿಂತ ತಾಳ್ಮೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ನ್ಯಾಯಾಲಯದ ಹೊರಗೆ ಕಡಿಮೆ ವೆಚ್ಚ ಮತ್ತು ಸಮಯದಲ್ಲಿಪರಸ್ಪರ ಒಪ್ಪಿಗೆಯ ಪರಿಹಾರ ಕಂಡುಕೊಳ್ಳಲು ಅನುಸಂಧಾನ ಪ್ರಕ್ರಿಯೆ ನೆರವಾಗುತ್ತದೆ. ಇದು ಸಂಘರ್ಷಕ್ಕಿಂತ ಸಮನ್ವಯಕ್ಕೆ ಆದ್ಯತೆ ನೀಡುತ್ತದೆ. ಇಂದು ಎಲ್ಲಕ್ಷೇತ್ರದಲ್ಲಿಯೂ ಅನುಸಂಧಾನದ ಅಗತ್ಯವಿದೆ. ಇದಕ್ಕೆ ತಾಳ್ಮೆ ಮತ್ತು ಪರಿಣಾಮಕಾರಿ ಸಂವಹನ ಕೌಶಲ ಅಗತ್ಯ ಎಂದು ತಿಳಿಸಿದರು.

ವಕೀಲ ವೃತ್ತಿಯಲ್ಲಿಹಣ ಗಳಿಕೆಯಷ್ಟೆ ಮುಖ್ಯವಲ್ಲ. ನೈತಿಕವಾಗಿ ಕಾರ್ಯನಿರ್ವಹಿಸುವುದರಿಂದ ದೊರೆಯುವ ವೃತ್ತಿ ತೃಪ್ತಿಯೂ ಮಹತ್ವದ್ದಾಗಿದೆ. ವಕೀಲರು ಸಮಾಜದ ಸಮಸ್ಯೆಗಳಿಗೆ ಪರಿಹಾರ ನೀಡುವವರಾಗಿ ರೂಪುಗೊಳ್ಳಬೇಕು. ಅನುಸಂಧಾನದ ಮಹತ್ವವನ್ನು ಕಕ್ಷಿದಾರರಿಗೆ ಮನವರಿಕೆ ಮಾಡಿಕೊಟ್ಟು, ನ್ಯಾಯಯುತ ಪರಿಹಾರ ಕಲ್ಪಿಸುವ ಮೂಲಕ ವೃತ್ತಿಯ ಘನತೆ ಉಳಿಸಬೇಕು ಎಂದರು.

ಎನ್ ಇಎಸ್ ಕಾರ್ಯದರ್ಶಿ ಎಸ್ .ಎನ್ . ನಾಗರಾಜ ಮಾತನಾಡಿ, ನ್ಯಾಯಾಲಯ ಎಂದಾಕ್ಷಣ ವಾದ-ಪ್ರತಿವಾದಗಳು ನೆನಪಾಗುತ್ತವೆ. ಆದರೆ ಬದಲಾಗುತ್ತಿರುವ ಜಾಗತಿಕ ವ್ಯವಹಾರಿಕ ಪರಿಸರದಲ್ಲಿಯಾರೂ ಸಂಪೂರ್ಣ ಸೋಲಿನೊಂದಿಗೆ ಹೊರಬರಲು ಬಯಸುವುದಿಲ್ಲಎಂದು ತಿಳಿಸಿದರು.

ಕಾನೂನು ಪ್ರಕ್ರಿಯೆಯಲ್ಲಿಕಾರ್ಯವಿಧಾನದ ಹಕ್ಕುಗಳು ಅಗತ್ಯವಾದರೂ, ಅದೇ ಪ್ರಕ್ರಿಯೆ ಶಿಕ್ಷೆಯಾಗಿ ಪರಿಣಮಿಸಿದಾಗ ಅವುಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಸೇತುವೆಯಾಗಿ ಅನುಸಂಧಾನ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ನೈತಿಕತೆ, ಸಹಾನುಭೂತಿ ಮತ್ತು ಪೂರ್ವಸಿದ್ಧತೆಯ ಅರಿವು ಅಗತ್ಯ. ಸಮಸ್ಯೆಯನ್ನು ಬೆಳೆಸುವುದಕ್ಕಿಂತ ಪರಿಹಾರದತ್ತ ಕೊಂಡೊಯ್ಯುವ ಮನೋಭಾವ ಕಾನೂನು ಪದವೀಧರರಲ್ಲಿಬೆಳೆಯಬೇಕು ಎಂದರು.

ಪ್ರಾಂಶುಪಾಲರಾದ ಡಾ.ಎ.ಅನಲ ಅಧ್ಯಕ್ಷತೆ ವಹಿಸಿದ್ದರು. ಎನ್ ಇಎಸ್ ನಿರ್ದೇಶಕ ಎಂ.ಎಸ್ .ಅನಂತದತ್ತ, ಗೋವಾದ ವಿ.ಎಂ.ಸಲಗಾಂವ್ಕರ್ ಕಾನೂನು ಕಾಲೇಜಿನ ಉಪಪ್ರಾಂಶುಪಾಲ ಡಾ.ಬಿ.ಎಸ್ . ಪಾಟೀಲ್ , ಪ್ರಮುಖರಾದ ಭರತ್ ಕುಮಾರ್ ಮೆಹ್ತಾ, ಜಿ.ಮಧುಸೂದನ್ , ಡಾ.ಕಾಂತರಾಜ್ , ಎಚ್ .ಸೌಮ್ಯ, ಮೇಘ ವಿಜಯ್ ಮತ್ತಿತರರಿದ್ದರು.

=====

ಬೆಳಗಾವಿಯ ಬಿ.ವಿ.ಬೆಲ್ಲದ್ ಕಾನೂನು ಕಾಲೇಜು ಪ್ರಥಮ

ರಾಜ್ಯಮಟ್ಟದ ದ್ವಿತೀಯ ಅನುಸಂಧಾನ ಸ್ಪರ್ಧೆಯಲ್ಲಿಬೆಳಗಾವಿಯ ಬಿ.ವಿ.ಬೆಲ್ಲದ್ ಕಾನೂನು ಮಹಾವಿದ್ಯಾಲಯದ ತಂಡ ಪ್ರಥಮ, ಮೈಸೂರು ವಿದ್ಯಾ ವಿಕಾಸ ಕಾನೂನು ಕಾಲೇಜಿನ ತಂಡ ದ್ವಿತೀಯ ಬಹುಮಾನ ಪಡೆಯಿತು. ಬೆಂಗಳೂರು ರಾಮಯ್ಯ ಇನ್ ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ತಂಡ ವಿಶೇಷ ಪ್ರಶಂಸನಾ ಬಹುಮಾನ ಪಡೆಯಿತು. ರಾಜ್ಯದ ವಿವಿಧ ಕಾನೂನು ಕಾಲೇಜುಗಳ 20 ತಂಡಗಳು ಸ್ಪರ್ಧೆಯಲ್ಲಿಭಾಗವಹಿಸಿ ತಮ್ಮ ಅನುಸಂಧಾನ ಕೌಶಲ ಪ್ರಸ್ತುತ ಪಡಿಸಿದವು.

=====

21ಎಸ್ ಎಂಜಿ16

ಶಿವಮೊಗ್ಗದ ಎನ್ ಇಎಸ್ ಸಿಬಿಆರ್ ಕಾನೂನು ಮಹಾವಿದ್ಯಾಲಯದಲ್ಲಿಆಯೋಜಿಸಿದ್ದ ಅನುಸಂಧಾನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.