ಬಾಲ ಪ್ರತಿಭೆಗಳಿಗೆ ಪ್ರಮಾ ಪ್ರಶಸ್ತಿ ಪ್ರದಾನ

Contributed by: kukkupalke@gmail.com|Vijaya Karnataka•
Vijay Karnataka
ವಿಕ ಸುದ್ದಿಲೋಕ ಉಡುಪಿ

ಪ್ರತಿಭೆಗಳನ್ನು ಬಾಲ್ಯದಲ್ಲಿಯೇ ಗುರುತಿಸುವುದನ್ನು ಪೋಷಕರು, ಗುರುಗಳು ಮತ್ತು ಸಮಾಜ ನಿರಂತರವಾಗಿ ಮಾಡಬೇಕು. ಮಕ್ಕಳ ಆಸಕ್ತಿಗೆ ಅನುಗುಣವಾಗಿ ವೇದಿಕೆಯನ್ನು ಒದಗಿಸಿ ಪ್ರೋತ್ಸಾಹಿಸಿದಲ್ಲಿಪ್ರತಿಭೆಗಳು ಸಾಧನೆಯ ಹಾದಿಯಲ್ಲಿಸಾಗಲು ಸಾಧ್ಯ ಎಂದು ಭೂಗರ್ಭ ಶಾಸ್ತ್ರಜ್ಞ ಡಾ. ಉದಯಶಂಕರ್ ಎಚ್ .ಎನ್ . ಹೇಳಿದರು.
ಮಣಿಪಾಲದ ಡಾ. ಪಳ್ಳತ್ತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಸಹಯೋಗದೊಂದಿಗೆ ಮಣಿಪಾಲ್ ಡಾಟ್ ನೆಟ್ ಸಭಾಂಗಣದಲ್ಲಿಮಕ್ಕಳ ದಿನಾಚರಣೆಯಂದು ಸಾಧಕ ಮಕ್ಕಳಿಗೆ ನೀಡಲಾದ 2026 ನೇ ಸಾಲಿನ ಪ್ರಮಾ ಮತ್ತು ಶ್ರೇಯಸ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಡಾ. ಪಳ್ಳತ್ತಡ್ಕ ಕೇಶವ ಭಟ್ ಖ್ಯಾತ ಸಸ್ಯ ಶಾಸ್ತ್ರಜ್ಞರಾಗಿದ್ದರು. ಸಸ್ಯಗಳಲ್ಲಿರುವ ಧಾತುಗಳಿಂದ ಮಾರಣಾಂತಿಕ ಕಾಯಿಲೆಯಿಂದ ಬಳಲುವ ಹಲವಾರು ಮಂದಿಗೆ ಮೂಲಿಕಾ ಔಷಧದ ಮೂಲಕ ಗುಣಪಡಿಸಿರುವುದನ್ನು ಅವರು ನೆನಪಿಸಿಕೊಂಡರು.

13ನೇ ವರ್ಷದ ಪ್ರಮಾ ಪ್ರಶಸ್ತಿಯನ್ನು ಬಾಲಪ್ರತಿಭೆಗಳಾದ ಶ್ರಾವಣಿ(ಸಂಸ್ಕೃತ), ಗವಿನ್ ರೇಷಿಮೆ (ವಿಜ್ಞಾನ), ಶ್ರೇಯಾ ಯು. ನಾಯಕ್ (ವಾದ್ಯ ಸಂಗೀತ), ವಿಶ್ರುತ ಸಾಮಗ (ಚಿತ್ರಕಲೆ), ಸೃಷ್ಟಿ ಆರ್ . (ಯಕ್ಷಗಾನ) ಅವರಿಗೆ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿಶ್ರೇಯಸ್ ಪ್ರಶಸ್ತಿಯನ್ನು ಪಾಕಶಾಸ್ತ್ರಜ್ಞ ಪ್ರಸನ್ನ ಭಟ್ ಅವರಿಗೆ ಪ್ರದಾನ ಮಾಡಲಾಯಿತು.

ಟ್ರಸ್ಟ್ ನ ಪದಾಧಿಕಾರಿಗಳಾದ ಡಾ. ಬಾಲಚಂದ್ರ ಆಚಾರ್ , ವಿ. ಪವನ ಬಿ. ಆಚಾರ್ , ಡಾ. ಅನಸೂಯ ದೇವಿ ಉಪಸ್ಥಿತರಿದ್ದರು.

ಶಿಲ್ಪಾ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಡಾಟ್ ನೆಟ್ ನಿರ್ದೇಶಕ ನರಸಿಂಹ ಭಟ್ ಸ್ವಾಗತಿಸಿದರು. ಟ್ರಸ್ಟಿ ಪ್ರೊ.ಸದಾಶಿವ ರಾವ್ ವಂದಿಸಿದರು.

ಬಳಿಕ ಪ್ರಮಾ ಪ್ರಶಸ್ತಿ ಪುರಸ್ಕೃತರಿಂದ ಪ್ರತಿಭಾ ಪ್ರದರ್ಶನ ನಡೆಯಿತು.

ಫೋಟೊ 21ಯುಕೆ ಪ್ರಮಾ : ಪ್ರಮಾ ಪ್ರಶಸ್ತಿಪ್ರದಾನ.