ವಿಜಯ ಸಹಕಾರಿ ಸಂಘದ ಶಾಖೆ ಉದ್ಘಾಟನೆ

Contributed by: harishdivigihalli1@gmail.com|Vijaya Karnataka•
Vijay Karnataka
ಹಿರೇಕೆರೂರು: ಪಟ್ಟಣದ ನಂದಿ ಪ್ಲಾಜಾದ ಕುಸುಮಾ ಬ್ಯಾಂಕ್ವೆಟ್ ಹಾಲ್ ನಲ್ಲಿವಿಜಯ (ಎಂಆರ್ ಎನ್ ) ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ 77ನೇ ಶಾಖೆಯನ್ನು ಸಂಘದ ಸಂಸ್ಥಾಪಕ, ಮಾಜಿ ಸಚಿವ ಡಾ. ಮುರುಗೇಶ ನಿರಾಣಿ ಶನಿವಾರ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘‘20 ವರ್ಷಗಳ ಹಿಂದೆ ಆರಂಭವಾದ ವಿಜಯ ಸೌಹಾರ್ದ ಸಹಕಾರಿ ಸಂಘ ಇಂದು ರಾಜ್ಯಾದ್ಯಂತ ಬೆಳವಣಿಗೆ ಹೊಂದಿದ್ದು, ರಾಷ್ಟಿ್ರೕಯ ಬ್ಯಾಂಕ್ ಗಳಲ್ಲಿದೊರೆಯುವ ಬಹುತೇಕ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ. ಠೇವಣಿದಾರರಿಗೆ ವಾರ್ಷಿಕ ಶೇ.11ರಷ್ಟು ಬಡ್ಡಿ ನೀಡಲಾಗುತ್ತಿದ್ದು, ಶೇ.2ರ ಬಡ್ಡಿದರದಲ್ಲಿಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ಸಂಘದಲ್ಲಿಸಾಲದ ಕಟ್ಟುಬಾಕಿ ಪ್ರಮಾಣ ಶೇ.1ಕ್ಕಿಂತ ಕಡಿಮೆ ಇರುವುದು ಸಂಘದ ಆರ್ಥಿಕ ಶಿಸ್ತು ಮತ್ತು ಗ್ರಾಹಕರ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ತುರ್ತು ಸಂದರ್ಭಗಳಲ್ಲಿಠೇವಣಿದಾರರು ತಮ್ಮ ಹಣ ಮರಳಿ ಪಡೆಯಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿರಾಜ್ಯದ ಎಲ್ಲವಿಧಾನಸಭಾ ಕ್ಷೇತ್ರಗಳಲ್ಲಿಯೂ ಶಾಖೆಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ’’ ಎಂದರು.
ಮಾಜಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ‘‘ಹಿರೇಕೆರೂರು ಭಾಗದ ಜನರ ಆರ್ಥಿಕ ಅಭಿವೃದ್ಧಿಗೆ ಇಂತಹ ಸಹಕಾರಿ ಸಂಸ್ಥೆಗಳು ಅಗತ್ಯವಾಗಿವೆ. ಸ್ಥಳೀಯರಿಗೆ ಠೇವಣಿ, ಸಾಲ ಸೇರಿದಂತೆ ಎಲ್ಲಬ್ಯಾಂಕಿಂಗ್ ಸೌಲಭ್ಯಗಳು ದೊರೆಯಲಿವೆ’’ ಎಂದರು. ಎಂಆರ್ ಎನ್ ಬ್ಯಾಂಕ್ ನ ಜನರಲ್ ಮ್ಯಾನೇಜರ್ ಎಂ.ಎಚ್ .ಪತ್ತೇಣ್ಣನವರ, ವ್ಯವಸ್ಥಾಪಕ ಆನಂದ ಕುಲಕರ್ಣಿ, ಆರ್ .ಎಸ್ .ಹುಲ್ಮನಿ, ವಿರೂಪಾಕ್ಷಪ್ಪ ಹಂಪಾಳಿ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್ .ಎಸ್ .ಪಾಟೀಲ, ಮುಖಂಡರಾದ ಚಂದ್ರಪ್ಪ ಚಳಗೇರಿ, ಹುಚ್ಚಪ್ಪ ಚೌಟಗಿ, ಬಸಮ್ಮ ಅಬಲೂರು, ಲತಾ ಬಣಕಾರ, ಕುಸುಮಾ ಬಣಕಾರ, ಗುರುಶಾಂತಪ್ಪ ಯತ್ತಿನಹಳ್ಳಿ, ಬಸವರಾಜ ಚಿಂದಿ, ಜಗದೀಶ ದೊಡ್ಡಗೌಡ್ರ, ಹರೀಶ ಕಲಾಲ್ , ವೆಂಕಟೇಶ ಜನ್ನು ಹಲವರು ಉಪಸ್ಥಿತರಿದ್ದರು.

21ಹೆಚ್ ಕೆಆರ್ 2

ಹಿರೇಕೆರೂರಿನಲ್ಲಿವಿಜಯ (ಎಂಆರ್ ಎನ್ ) ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ ಶಾಖೆಯನ್ನು ಮಾಜಿ ಸಚಿವರಾದ ಬಿ.ಸಿ. ಪಾಟೀಲ, ಡಾ.ಮುರುಗೇಶ ನಿರಾಣಿ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್ .ಎಸ್ . ಪಾಟೀಲ ಹಾಗೂ ವಿರೂಪಾಕ್ಷಪ್ಪ ಹಂಪಾಳಿ ಉದ್ಘಾಟಿಸಿದರು.