ನಾಳೆ ಹುದಿಕೇರಿಯಲ್ಲಿಸಿಎನ್ ಸಿ ಮಾನವ ಸರಪಳಿ

Contributed by: prasinkrprasi069@gmail.com|Vijaya Karnataka•
Vijay Karnataka
ನಾಳೆ ಹುದಿಕೇರಿಯಲ್ಲಿಸಿಎನ್ ಸಿ ಮಾನವ ಸರಪಳಿ

ಮಡಿಕೇರಿ: ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್ ಸಿ) ವತಿಯಿಂದ ಕೊಡವ ಪ್ರದೇಶದಾದ್ಯಂತ ಹಮ್ಮಿಕೊಂಡಿರುವ ಶಾಂತಿಯುತ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮದ 11ನೇ ಸರಣಿ ನ. 23ರಂದು ಬೆಳಗ್ಗೆ 10.30ಕ್ಕೆ ಅಂಜಿಗೇರಿನಾಡಿನ ಹುದಿಕೇರಿಯಲ್ಲಿನಡೆಯಲಿದೆ ಎಂದು ಸಿಎನ್ ಸಿ ಅಧ್ಯಕ್ಷ ಎನ್ .ಯು.ನಾಚಪ್ಪ ತಿಳಿಸಿದ್ದಾರೆ.
ಕೊಡವಲ್ಯಾಂಡ್ ಗೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಕಲ್ಪಿಸಿ, ಸಂವಿಧಾನದ 244 ಮತ್ತು 371ನೇ ವಿಧಿಗಳು ಹಾಗೂ ಐದನೇ ಮತ್ತು ಆರನೇ ಶೆಡ್ಯೂಲ್ ಅಡಿಯಲ್ಲಿಸ್ವಯಂ ಆಡಳಿತದ ಅವಕಾಶ ನೀಡಬೇಕು ಎಂಬುದು ಸಿಎನ್ ಸಿಯ ಪ್ರಮುಖ ಬೇಡಿಕೆಯಾಗಿದೆ. ಅಲ್ಲದೆ, ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಭಾರತೀಯ ಸಂವಿಧಾನದ ಅಡಿಯಲ್ಲಿಕೊಡವ ಜನಾಂಗಕ್ಕೆ ಆದಿಮಸಂಜಾತ ಸಮುದಾಯವಾಗಿ ವಿಶೇಷ ಸಂವಿಧಾನಬದ್ಧ ಮಾನ್ಯತೆ ನೀಡಬೇಕೆಂದು ಒತ್ತಾಯಿಸಲಾಗುವುದು ಎಂದು ತಿಳಿಸಿದ್ದಾರೆ.

ಫೋಟೋ :: ನಾಚಪ್ಪ