ಕುಂದಾಪುರ: ಗಂಗೊಳ್ಳಿ ಕೊಸೆಸಾಂವ್ ಮಾತೆ ಚರ್ಚ್ನಲ್ಲಿಇಂಡಿಯನ್ ಕ್ಯಾನ್ಸರ್ ಸೊಸೈಟಿ ಕರ್ನಾಟಕ, ಸಮುದಾಯ ವೈದ್ಯಕೀಯ ವಿಭಾಗ ಕೆಎಂಸಿ ಮಣಿಪಾಲ ಹಾಗೂ ಆರೋಗ್ಯ ಆಯೋಗ, ಸ್ತಿ್ರೕ ಆಯೋಗ ಮತ್ತು ಸ್ಪರ್ಶ ಸಂಪದ ಉಡುಪಿ ಆಶ್ರಯದಲ್ಲಿಉಚಿತ ಕ್ಯಾನ್ಸರ್ , ಕಣ್ಣಿನ ಹಾಗೂ ಆರೋಗ್ಯ ತಪಾಸಣಾ ಶಿಬಿರ ಜರುಗಿತು.
ಸಂಪದ ನಿರ್ದೇಶಕ, ಧರ್ಮಗುರು ರೀಕ್ಸನ್ ಮೊಂತೆರೊ ಶಿಬಿರ ಉದ್ಘಾಟಿಸಿದರು. ಚರ್ಚ್ನ ಧರ್ಮಗುರು ಥೋಮಸ್ ರೋಶನ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು.ಡಾ. ತನ್ಮಯ್ , ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಗ್ಲೋರಿಯಾ ಡಿಸೋಜ, 20 ಆಯೋಗಗಳ ಸಂಯೋಜಕಿ ಜೆಸಿಂತಾ ಡಿಸೋಜ, ಸಚೇತಕಿಯಾದ ಧರ್ಮಭಗಿನಿ ಗ್ರೇಸಿ ಲೋಬೊ, ಸ್ವಸಹಾಯ ಸಂಘದ ಮಾರ್ಗದರ್ಶಕಿ ಸಿಂಥಿಯಾ ರೊಡ್ರಿಗಸ್ , ಸ್ತ್ರೀ ಸಂಘಟನೆಯ ಅಧ್ಯಕ್ಷೆ ಅನಿತಾ ಫೆರ್ನಾಂಡೀಸ್ , ಸ್ಟಾತ್ರ್ಯನ್ಲಿಫರ್ನಾಂಡಿಸ್ ಉಪಸ್ಥಿತರಿದ್ದರು.
ಗ್ಲೋರಿಯಾ ಡಿಸೋಜ ಸ್ವಾಗತಿಸಿದರು. ಐರಿನ್ ನಜರೆತ್ ವಂದಿಸಿದರು. ರೀಟಾ ಡಾಯಸ್ ಕಾರ್ಯಕ್ರಮ ನಿರ್ವಹಿಸಿದರು. ಸುಮಾರು 70ಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನ ಪಡೆದರು.