ದಾನಮ್ಮದೇವಿ ಕಾಲೇಜ್ ಪ್ರಥಮ

Contributed by: mudholvk@gmail.com|Vijaya Karnataka•
Vijay Karnataka
ದಾನಮ್ಮದೇವಿ ಕಾಲೇಜ್ ಪ್ರಥಮ

ವಿಕ ಸುದ್ದಿಲೋಕ ಮುಧೋಳ
‘‘ಯುವತಿಯರು ಯುವಕರಕ್ಕಿಂತ ಹೆಚ್ಚು ಕ್ರೀಡೆಯಲ್ಲಿಉತ್ಸಾಹ ತೋರುತ್ತಿದ್ದಾರೆ,’’ಎಂದು ಅಕ್ಕಮಹಾದೇವಿ ಮಹಿಳಾ ವಿವಿಯ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶಕಿ ಜ್ಯೋತಿ ಉಪಾಧ್ಯೆ ಹೇಳಿದರು.

ನಗರದ ಬವಿವ ಸಂಘದ ದಾನಮ್ಮದೇವಿ ಮಹಿಳಾ ಕಾಲೇಜ್ ದಲ್ಲಿಅಕ್ಕಮಹಾದೇವಿ ಮಹಿಳಾ ವಿವಿ ಆಯೋಜಿಸಿದ ಅಂತರ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಿಗೆ ಕುಸ್ತಿ ಹಾಗೂ ವುಶು ಪಂದ್ಯಾವಳಿ ಮುಕ್ತಾಯ ಸಮಾರಂಭದಲ್ಲಿಅವರು ಮಾತನಾಡಿದರು.

‘‘ವಿದ್ಯಾರ್ಥಿನಿಯರು ಎಲ್ಲಕ್ಷೇತ್ರದಲ್ಲಿಮುನ್ನಡೆ ಸಾಧಿಸುತ್ತಿದ್ದಾರೆ. ಸಾಧನೆಗೆ ಇನ್ನಷ್ಟು ಪ್ರೇರಣೆ ನೀಡುವ ಕೆಲಸ ಮಾಡಬೇಕು,’’ಎಂದರು.

ಪ್ರಾಚಾರ್ಯ ಎಂ.ಎಂ.ಹಿರೇಮಠ ಮಾತನಾಡಿ, ‘‘ಸದೃಢವಾದ ಶರೀರದಲ್ಲಿಸ್ಪರ್ಧೆಗಳನ್ನಾಡಲು ಆತ್ಮವಿಶ್ವಾಸ ಬರುತ್ತದೆ,’’ಎಂದರು.

ಪಂದ್ಯಾವಳಿಯಲ್ಲಿಕುಸ್ತಿ ಆಯ್ಕೆ ಸಮಿತಿ ಸದಸ್ಯರು, ಪ್ರೊ.ಜ್ಯೋತಿ ಉಪಾಧ್ಯೆ, ಡಾ.ವಿಶ್ವನಾಥ ನಡಕಟ್ಟಿ, ನಿಂಗಪ್ಪಾ ಪೂಜಾರಿ, ಸಲ್ಲಾವುದ್ದಿನ್ , ಅಶೋಕ ಮೊಕಾಶಿ, ಸಂಗಮೇಶ ಲಾಯದಗುಂದಿ, ದೈಹಿಕ ನಿರ್ದೇಶಕ ಪ್ರೊ. ಎಲ್ .ಬಿ.ಹನಮರ ಇದ್ದರು.

ಕುಸ್ತಿ ಮತ್ತು ವುಶು ಪಂದ್ಯಾವಳಿಯಲ್ಲಿದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯ ಪ್ರಥಮ ಸ್ಥಾನ ಪಡೆದುಕೊಂಡಿತು. ಎಸ್ .ಜಿ.ಎಮ್ .ವ್ಹಿ.ಎಸ್ ಮಹಿಳಾ ಮಹಾವಿದ್ಯಾಲಯ, ಹುಬ್ಬಳ್ಳಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡವು.

ಕುಸ್ತಿಯಲ್ಲಿರೋಹಿಣಿ ದಾವಣಗೇರಿ 62ಕೆ.ಜಿಯಲ್ಲಿ(ಪ್ರಥಮ) ಕಾವ್ಯಾ ಕಳ್ಳಿಮನಿ 65 ಕೆ.ಜಿ. (ಪ್ರಥಮ), ರಮ್ಯಾ ರಂಗಾಪುರ 55 ಕೆ.ಜಿ. (ಪ್ರಥಮ), ಸಹನಾ ಬರದೇಲಿ 68 ಕೆ.ಜಿ. (ಪ್ರಥಮ), ಹಾಗೂ ವುಶುನಲ್ಲಿವಿದ್ಯಾಶ್ರೀ ಬೆಳ್ಳಿಕೊಪ್ಪಿ 45 ಕೆ.ಜಿ. (ಪ್ರಥಮ), ಸೈದಾಬಿ ನದಾಫ್ 52 ಕೆಜಿ.(ಪ್ರಥಮ) ಸ್ಥಾನ, ರಮ್ಯಾ ರಂಗಾಪುರ 56ಕೆ.ಜಿ. (ಪ್ರಥಮ) ಸ್ಥಾನ ಪಡೆದುಕೊಂಡು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿರುತ್ತಾರೆ.

ವಿದ್ಯಾರ್ಥಿನಿಯರ ಸಾಧನೆಗೆ ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿಮಹೇಶ ಅಥಣಿ, ಗುರುಬಸವ ಸೂಳಿಭಾವಿ ಸಂತಸ ವ್ಯಕ್ತಪಡಿಸಿದ್ದಾರೆ.

ಫೋಟೊ 21 ಎಂಡಿಎಲ್ 6

ಅಕ್ಕಮಹಾದೇವಿ ವಿವಿ ಆಯೋಜಿಸಿದ ಕುಸ್ತಿ ಹಾಗೂ ವುಶು ಸ್ಪರ್ಧೆಯಲ್ಲಿಮುಧೋಳದ ದಾನಮ್ಮದೇವಿ ಕಾಲೇಜ್ ವಿದ್ಯಾರ್ಥಿನಿಯರು ಸಾಧನೆ ಮಾಡಿರುವುದು.