ನೆಲ್ಯಾಡಿಬೈಲು ಸೇತುವೆಗೆ ಎರಡು ಬಾರಿ ಗುದ್ದಲಿಪೂಜೆ!

Contributed by: prashantha.n17@gmail.com|Vijaya Karnataka•
Vijay Karnataka
ಸುಳ್ಯ ಕ್ಷೇತ್ರವನ್ನು ದತ್ತು ಸ್ವೀಕರಿಸಿ ಅಭಿವೃದ್ಧಿಗೆ ವಿಶೇಷ ಆದ್ಯತೆ: ಪಿ.ವಿ.ಮೋಹನ್

ವಿಕ ಸುದ್ದಿಲೋಕ ನೆಲ್ಯಾಡಿ
ನೆಲ್ಯಾಡಿ ಪೇಟೆಯಿಂದ ಪಡುಬೆಟ್ಟು ಭಾಗಕ್ಕೆ ಸಂಪರ್ಕ ಕಲ್ಪಿಸುವ ನೆಲ್ಯಾಡಿಬೈಲು ಎಂಬಲ್ಲಿ60 ಲಕ್ಷ ರೂ. ಅನುದಾನದಲ್ಲಿನಿರ್ಮಾಣಗೊಳ್ಳಲಿರುವ ನೂತನ ಸೇತುವೆಗೆ ವಿಧಾನಪರಿಷತ್ ಸದಸ್ಯ ಪಿ.ವಿ.ಮೋಹನ್ ಶನಿವಾರ ಗುದ್ದಲಿಪೂಜೆ ನೆರವೇರಿಸಿದರು.

ವಿಪರ್ಯಾಸವೆಂದರೆ ಇದೇ ಸೇತುವೆಗೆ ಕೇಂದ್ರದ ಎನ್ ಡಿಆರ್ ಎಫ್ ನಿಂದ 40 ಲಕ್ಷ ರೂ. ಹಾಗೂ ರಾಜ್ಯದ ಎಸ್ ಡಿಆರ್ ಎಫ್ ನಿಂದ 20 ಲಕ್ಷ ರೂ. ಬಿಡುಗಡೆಯಾಗಿದೆ ಎಂದು ಹೇಳಿ ನ.16ರಂದು ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ನೆರವೇರಿಸಿದ್ದರು. ಇದೀಗ ರಾಜ್ಯ ಸರಕಾರದ ಮಳೆಹಾನಿ ಅನುದಾನದಡಿ 60 ಲಕ್ಷ ರೂ. ಬಿಡುಗಡೆಯಾಗಿರುವುದು ತಮ್ಮ ಪ್ರಯತ್ನದ ಫಲವೆಂದು ಹೇಳಿ ನ.21ರಂದು ಪಿ.ವಿ.ಮೋಹನ್ ಗುದ್ದಲಿಪೂಜೆ ನೆರವೇರಿಸಿದ್ದಾರೆ. ಎರಡೂ ಪಕ್ಷಗಳ ಫ್ಲೆಕ್ಸ್ ಗಳು ಸ್ಥಳದಲ್ಲಿರಾರಾಜಿಸುತ್ತಿದ್ದು, ಒಂದೇ ಸೇತುವೆಗೆ ಎರಡು ಬಾರಿ ಗುದ್ದಲಿಪೂಜೆ ನಡೆದಿರುವುದು ಸಾರ್ವಜನಿಕ ವಲಯದಲ್ಲಿನಗೆಪಾಟಲಿಗೀಡಾಗಿದೆ.

ಶನಿವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಪಿ.ವಿ.ಮೋಹನ್ , ಸುಮಾರು 35 ವರ್ಷಗಳ ಹಿಂದೆ ವಿನಯಕುಮಾರ್ ಸೊರಕೆ ಶಾಸಕರಾಗಿದ್ದ ಅವಧಿಯಲ್ಲಿನಿರ್ಮಾಣಗೊಂಡಿದ್ದ ಹಳೆಯ ಸೇತುವೆ ಬದಲಿಗೆ ಹೊಸ ಸೇತುವೆ ನಿರ್ಮಿಸಬೇಕೆಂಬುದು ಈ ಭಾಗದ ಜನರ ಬಹುವರ್ಷಗಳ ಬೇಡಿಕೆಯಾಗಿತ್ತು. ಅವರ ಮನವಿಗೆ ಸ್ಪಂದಿಸಿದ ಸಚಿವ ಸತೀಶ್ ಜಾರಕಿಹೊಳಿ 60 ಲಕ್ಷ ರೂ. ಅನುದಾನ ಒದಗಿಸಿದ್ದಾರೆ ಎಂದರು.

ಸುಳ್ಯ ವಿಧಾನಸಭಾ ಕ್ಷೇತ್ರವನ್ನು ದತ್ತು ಸ್ವೀಕರಿಸಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸುವುದಾಗಿ ಘೋಷಿಸಿದ ಅವರು, 35 ವರ್ಷಗಳಿಂದ ಬಿಜೆಪಿ ಶಾಸಕರಿದ್ದರೂ ಕ್ಷೇತ್ರದಲ್ಲಿನಿರೀಕ್ಷಿತ ಅಭಿವೃದ್ಧಿಯಾಗಿಲ್ಲಎಂದರು.

ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ. ಮಾತನಾಡಿ, ಸೇತುವೆ ಕಾಮಗಾರಿ ಆರಂಭವಾದ ಬಳಿಕ ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆಯಾಗಬಹುದು. ಜನರು ಸಹಕರಿಸಿ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲು ಕೈಜೋಡಿಸಬೇಕು ಎಂದರು.

ಈ ಸಂದರ್ಭ ಪಿ.ವಿ.ಮೋಹನ್ ಅವರನ್ನು ಸಾರ್ವಜನಿಕರ ಪರವಾಗಿ ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ನಿರ್ದೇಶಕ ಸರ್ವೋತ್ತಮ ಗೌಡ, ದ.ಕ. ಜಿಲ್ಲಾಗ್ರಾಮೀಣ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚನ್ , ಸುಳ್ಯ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಫೈಝಲ್ , ಕಾಂಗ್ರೆಸ್ ನೆಲ್ಯಾಡಿ ಗ್ರಾಮ ಸಮಿತಿ ಅಧ್ಯಕ್ಷ ಜೋಸ್ ಕೆ.ಜೆ., ಶಿರಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಕಾರ್ತಿಕೇಯನ್ , ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಸಲಾಂ ಬಿಲಾಲ್ , ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಸುಬ್ರಹ್ಮಣ್ಯ ಶಬರಾಯ ಉಪಸ್ಥಿತರಿದ್ದರು. ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಸ್ವಾಗತಿಸಿದರು. ಭೂ ನ್ಯಾಯ ಮಂಡಳಿ ಸದಸ್ಯ ಇಸ್ಮಾಯಿಲ್ ನೆಲ್ಯಾಡಿ ವಂದಿಸಿದರು.

ಧಿಬಾಕ್ಸ್

ಅಪಾಯಕಾರಿ ಸ್ಥಿತಿಯಲ್ಲಿಹಳೆಯ ಸೇತುವೆ

ನೆಲ್ಯಾಡಿ-ಪಡುಬೆಟ್ಟು ಸಂಪರ್ಕದ ಹಳೆಯ ಕಿರು ಸೇತುವೆಯಲ್ಲಿಲಘು ವಾಹನಗಳ ಸಂಚಾರಕ್ಕಷ್ಟೇ ಅವಕಾಶವಿದೆ. ಕಾಂಕ್ರೀಟ್ ಕಿತ್ತುಹೋಗಿ ಕಬ್ಬಿಣದ ಸರಳುಗಳು ಕಾಣಿಸುತ್ತಿರುವುದರಿಂದ ಸೇತುವೆ ಅಪಾಯಕಾರಿ ಸ್ಥಿತಿಯಲ್ಲಿದೆ. ಈ ಕುರಿತು ವಿಜಯ ಕರ್ನಾಟಕ ಪತ್ರಿಕೆಯಲ್ಲಿಸವಿಸ್ತಾರ ವರದಿ ಪ್ರಕಟವಾಗಿತ್ತು.

ಫೋಟೋ :22ಕೆಎನ್ ಮೋಹನ್

(ನೆಲ್ಯಾಡಿಬೈಲು ಸೇತುವೆಗೆ ವಿಧಾನಪರಿಷತ್ ಸದಸ್ಯ ಪಿ.ವಿ.ಮೋಹನ್ ಅವರಿಂದ ಗುದ್ದಲಿಪೂಜೆ)