ವಿಕ ಸುದ್ದಿಲೋಕ ಚನ್ನರಾಯಪಟ್ಟಣಪಟ್ಟಣದ ಕರ್ನಾಟಕ ಸಂಘದ ಆಶ್ರಯದಲ್ಲಿಕನ್ನಡ ರಾಜ್ಯೋತ್ಸವ ಸಮಾರಂಭದ ಅಂಗವಾಗಿ ಮಕ್ಕಳಿಗೆ ಉಕ್ತಲೇಖನ ಸ್ಪರ್ಧೆ ಆಯೋಜಿಸಲಾಗಿತ್ತು. ಎರಡು ವಿಭಾಗಗಳಲ್ಲಿನಡೆದ ಸ್ಪರ್ಧೆಯಲ್ಲಿನೂರಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡರು.
ಕರ್ನಾಟಕ ಸಂಘದ ಅಧ್ಯಕ್ಷ ಸಿ.ಎಸ್ . ಆದಿಶೇಷಕುಮಾರ್ , ಕಾರ್ಯದರ್ಶಿ ಎ.ಎಲ್ .ನಾಗೇಶ್ , ಖಜಾಂಚಿ ಎ.ಎಂ. ಜಯರಾಂ, ಹಿರಿಯ ಸದಸ್ಯರಾದ ಡಾ.ಸಿ.ಎಸ್ . ಶೇಷಶಯನ, ಸಿ.ಎನ್ . ಲಕ್ಷ್ಮೀನರಸಿಂಹ ಕಾರ ್ಯಕ್ರಮದಲ್ಲಿದ್ದು ಮಕ್ಕಳಿಗೆ ಶುಭಕೋರಿದರು. ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ85ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದು, 13 ಮಕ್ಕಳು ಒಂದೂ ತಪ್ಪಿಲ್ಲದ ಬರವಣಿಗೆ ಮಾಡುವ ಮೂಲಕ ಮೊದಲಿಗರಾದರು.
ಪಾಲ್ಗೊಂಡ ಎಲ್ಲಮಕ್ಕಳಿಗೂ ಲೇಖನಿ ಹಾಗೂ ನೋಟ್ ಪುಸ್ತಕಗಳನ್ನು ನೀಡಲಾಯಿತು. ಬಹುಮಾನ ವಿಜೇತರಿಗೆ ಪ್ರಶಸ್ತಿಪತ್ರ ಹಾಗೂ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು.
ಬಹುಮಾನ ವಿಜೇತರು:
4ರಿಂದ 7ನೇ ತರಗತಿ ವಿಭಾಗದಲ್ಲಿ: ಏಂಜಲ್ ಲಾರೆನ್ಸ್ $(ಜ್ಞಾನಸಾಗರ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ), ಎಸ್ .ಆರ್ . ಇಂದ್ರಜಿತ್ , ಎಸ್ .ಪಿ.ಪ್ರಣವಿ ಮತ್ತು ಎಸ್ .ಹರ್ಷವರ್ಧನ (ಸಾಗತವಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ). ತನುಶ್ರೀ (ಶಾಲಿನಿ ವಿದ್ಯಾಶಾಲೆ), ಟಿ.ಹರ್ಷಿಣಿ ಮತ್ತು ಪೂಜಿತ್ (ಕೆಪಿಎಸ್ ಶಾಲೆ), ಜೆ.ಎನ್ .ಚನ್ಮಿತಾ ಮತ್ತು ತ್ರಿವೇಣಿ (ಅಂಬಿಕಾಶಾಲೆ), ಪೂರ್ವಿಕಾ (ಪಿಎಂಶ್ರೀ ಶಾಲೆ), ಪಿ.ಗಗನ್ ಗೌಡ, ಬಿ.ಸಿ. ಧನ್ಯಶ್ರೀ.
8 ರಿಂದ 10ನೇ ತರಗತಿ:
ಬಿ. ಜನ್ಯ, ಎಸ್ . ಸಮಥ್ ರ್ , ಬಿ. ಸಾನ್ವಿಕಾ ಮತ್ತು ಕೆ.ಎಸ್ . ಕೀರ್ತಿಶ್ರೀ (ಎಲ್ಲರೂ ಜ್ಞಾನಸಾಗರ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆ), ಬಿ.ವಿ. ಯಶ್ವಂತ್ ಮತ್ತು ಯಮುನ.
ಚಿತ್ರ: ಎಚ್ ಎಸ್ ಎನ್ 22ಸಿಆರ್ ಪಿ1
ಚನ್ನರಾಯಪಟ್ಟಣದ ಕರ್ನಾಟಕ ಸಂಘದ ಸಭಾಂಗಣದಲ್ಲಿಕನ್ನಡ ರಾಜ್ಯೋತ್ಸವ ಸಮಾರಂಭದ ಅಂಗವಾಗಿ ಮಕ್ಕಳಿಗೆ ಏರ್ಪಡಿಸಿದ್ದ ಉಕ್ತಲೇಖನ ಸ್ಪರ್ಧೆಯಲ್ಲಿವಿವಿಧ ಶಾಲೆಗಳ ಮಕ್ಕಳು ಪಾಲ್ಗೊಂಡರು.