ಸಂಗ್ಯಾ 6

Contributed by: channa mallikarjuna|Vijaya Karnataka•
6
ಸಂಗ್ಯಾ: ಏನು ಮಾಡ್ತಿದ್ದೆ 4 ಗಂಟೆಯಿಂದ 10 ಸಲ ಫೋನ್ ಮಾಡಿದ್ದೆ.

ಸಂಗಿ: ಶಾಪಿಂಗ್ ಹೋಗಿದ್ದೆ.. ಮಾಲ್ ಗೆ.
ಸಂಗ್ಯಾ: ಏನೇನು ತಗೊಂಡೆ?

ಸಂಗಿ: ಒಂದು ಹೇರ್ ಬ್ಯಾಂಡ್ ಮತ್ತೆ 45 ಸೆಲ್ಫಿ.

- - - - - - --

ಯಮ ರಾಜ: ಸಂಗ್ಯಾ ಹೇಳು ನೀನು ನರಕ್ಕೆ ಹೋಗ್ತಿಯಾ ಇಲ್ಲಸ್ವರ್ಗಕ್ಕೊ?

ಸಂಗ್ಯಾ: ಎಲ್ಲಿಗಾದರೂ ಓಕೆ. ಆದರೆ, ನನ್ನ ಜೊತೆ ನನ್ನ ಗೆಳೆಯ ಡುಂಗ್ಯಾನನ್ನೂ ಕರೆಸು!

-----------

ಸಂಗ್ಯಾ: ತಲೆ ಕೂದಲು ಉದುರುತ್ತಾ ಇವೆ. ಚಿಕಿತ್ಸೆಗೆ 2 ಲಕ್ಷ ರೂಪಾಯಿ ಬೇಕಂತೆ.

ಸಂಗಿ: 2 ಲಕ್ಷ ರೂ. ನೆಕ್ಲೇಸ್ ಕೊಡಿಸಿ. ಗುಂಡನ ಜೊತೆ ಬೇಕಾದ್ರೂ ಬಾಳುವೆ ಮಾಡ್ತೇನೆ.

-----------

ಸಂಗ್ಯಾ: ದೇವರೇ ಪ್ರೇಯಸಿಯಾಗಿದ್ದಾಗ ಎಷ್ಟು ಚಂದ ಅನ್ನಿಸಿತ್ತು. ಮಸುವೆ ಆದಮೇಲೆ ಏಕೆ ಹೀಗೆ?

ದೇವರು: ಹುಡುಗಿಯರನ್ನು ನಾನು ಸೃಷ್ಟಿಸಿದೆ. ಹೆಂಡತಿ ಮಾಡಿಕೊಂಡಿದ್ದು ನೀನು. ನಂಗೇನು ಗೊತ್ತು... ಅನುಭವಿಸು.

-- --------

ಸಂಗಿ: ಏನ್ರೀ... ಇವತ್ತು ಅಡುಗೆ ಹೇಗೆ ಇದೆ....

ಸಂಗ್ಯಾ: ಏ... ಸುಮ್ಮನೇ ಇರೆ.. ಜಗಳ ಮಾಡೋಕೆ ಕಾರಣ ಹುಡುಕು ಬೇಡ.

-----------

ಸಂಗಿ: ನೋಡ್ರಿ ನಾನು 2 ಗಂಟೆ ಫ್ರೆಂಡ್ ಮನೆಗೆ ಹೋಗ್ತಿದೀನಿ. ನಿಮಗೆ ಏನಾದ್ರು ತರಬೇಕಾ?

ಸಂಗ್ಯಾ: ಬೇಡ. ನಂಗೆ 2 ಗಂಟೆ ನೆಮ್ಮದಿನೇ ಸಾಕು!

-----------------