ವಿಜಯದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್ ) ವತಿಯಿಂದ ನಗರದಲ್ಲಿಭಾನುವಾರ ನೂರಾರು ಗಣವೇಷಧಾರಿ ಸ್ವಯಂಸೇವಕರಿಂದ ಬೃಹತ್ ಮತ್ತು ಆಕರ್ಷಕ ಪಥಸಂಚಲನ ನಡೆಯಿತು. ನಗರದ ಪ್ರಮುಖ ಬೀದಿಗಳಲ್ಲಿಶಿಸ್ತುಬದ್ಧವಾಗಿ ಸಾಗಿದ ಈ ಪಥಸಂಚಲನವು ಸಾರ್ವಜನಿಕರ ಗಮನ ಸೆಳೆಯಿತು.ಪಥಸಂಚಲನದ ಮಾರ್ಗ: ಮುಖ್ಯ ರಸ್ತೆಯಲ್ಲಿರುವ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಿಂದ ಆರಂಭವಾದ ಪಥಸಂಚಲನವು ಶಿರಡಿ ಸಾಯಿಬಾಬಾ ದೇವಾಲಯ, ಗಾಂಧಿ ವೃತ್ತ, ಆರ್ .ಎಫ್ .ರಸ್ತೆ, ಧರ್ಮರಾಯಸ್ವಾಮಿ ದೇವಾಲಯ ರಸ್ತೆ, ಅಗ್ರಹಾರ ಬೀದಿ, ಕುಂಭೇಶ್ವರ ರಸ್ತೆ ಹಾಗೂ ಮಾರಿಕಾಂಬ ದೇವಾಲಯ ಮಾರ್ಗವಾಗಿ ಮಹಾರಾಜ ವೃತ್ತ ತಲುಪಿತು. ಅಲ್ಲಿಂದ ಬಾಬುರಾವ್ ರಸ್ತೆ, ಮಾರುತಿ ಬಡಾವಣೆ, ಬ್ರಹ್ಮಕುಮಾರಿ ರಸ್ತೆ ಹಾಗೂ ಅರಳೇರಿ ರಸ್ತೆಯ ಮೂಲಕ ಸಾಗಿ ಮರಳಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿಸಮಾರೋಪಗೊಂಡಿತು.
ಪುಷ್ಪವೃಷ್ಟಿ, ರಂಗೋಲಿ ಸ್ವಾಗತ: ಪಥಸಂಚಲನ ಸಾಗುವ ಮಾರ್ಗದುದ್ದಕ್ಕೂ ಮಹಿಳೆಯರು ರಸ್ತೆಗೆ ನೀರು ಹಾಕಿ, ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸಿ ಸಂಭ್ರಮಿಸಿದರು. ಭಗವಾ ಧ್ವಜಗಳೊಂದಿಗೆ ನಿಂತಿದ್ದ ಸಾರ್ವಜನಿಕರು ಹಾಗೂ ಮಹಿಳೆಯರು ಸ್ವಯಂಸೇವಕರ ಮೇಲೆ ಪುಷ್ಪವೃಷ್ಟಿ ಮಾಡುವ ಮೂಲಕ ಭವ್ಯ ಸ್ವಾಗತ ಕೋರಿದರು. ನಗರದ ಮುಖ್ಯ ರಸ್ತೆಗಳಲ್ಲಿಕೇಸರಿ ಬಂಟಿಂಗ್ಸ್ , ಧ್ವಜಗಳು ಹಾಗೂ ರಾಷ್ಟ್ರ ನಾಯಕರ ಘೋಷವಾಕ್ಯಗಳನ್ನೊಳಗೊಂಡ ಫ್ಲೆಕ್ಸ್ ಗಳನ್ನು ಅಳವಡಿಸಲಾಗಿದ್ದು, ಇಡೀ ನಗರವು ಕೇಸರಿಮಯವಾಗಿ ಕಂಗೊಳಿಸುತ್ತಿತ್ತು.
ಗಣ್ಯರ ಭಾಗಿ: ಪಥಸಂಚಲನದಲ್ಲಿಮಾಜಿ ಸಚಿವ ಎಸ್ .ಎನ್ .ಕೃಷ್ಣಯ್ಯ ಶೆಟ್ಟಿ, ಮಾಜಿ ಸಂಸದ ಎಸ್ .ಎಂ. ಮುನಿಸ್ವಾಮಿ ಹಾಗೂ ಮಾಜಿ ಶಾಸಕ ಕೆ.ಎಸ್ . ಮಂಜುನಾಥ್ ಗೌಡ ಅವರು ಗಣವೇಷಧಾರಿಗಳಾಗಿ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದರು.
ಬಿಗಿ ಪೊಲೀಸ್ ಬಂದೋಬಸ್ ್ತ: ಪಥಸಂಚಲನದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ ್ತ ಏರ್ಪಡಿಸಲಾಗಿತ್ತು. ಅಪರ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಇನ್ ಸ್ಪೆಕ್ಟರ್ ರಾಮಪ್ಪ ಗುತ್ತೇದಾರ ನೇತೃತ್ವದಲ್ಲಿಎರಡು ಕೆಎಸ್ ಆರ್ ಪಿ (ಏTಖP) ತುಕಡಿಗಳು ಹಾಗೂ ಜಿಲ್ಲೆಯ ವಿವಿಧ ಠಾಣೆಗಳ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.
ಫೋಟೋ ಶೀರ್ಷಿಕೆ: 22 ಮಾಲೂರು ಫೋಟೋ 2: ಮಾಲೂರು ನಗರದಲ್ಲಿವಿಜಯದಶಮಿ ಪ್ರಯುಕ್ತ ರಾಷ್ಟಿ್ರೕಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್ ) ವತಿಯಿಂದ ಹಮ್ಮಿಕೊಂಡಿದ್ದ ಭವ್ಯ ಪಥಸಂಚಲನದಲ್ಲಿಸಹಸ್ರಾರು ಗಣವೇಷಧಾರಿ ಸ್ವಯಂಸೇವಕರು ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದರು.