ಶಿವನಾಪುರದಲ್ಲಿಶುದ್ಧ ಕುಡಿವ ನೀರಿನ ಘಟಕ ಉದ್ಘಾಟನೆ

Contributed by: adarshkodi15@gmail.com|Vijaya Karnataka•
Vijay Karnataka
ಶಿವನಾಪುರದಲ್ಲಿಶುದ್ಧ ಕುಡಿವ ನೀರಿನ ಘಟಕ ಉದ್ಘಾಟನೆ

ವಿಕ ಸುದ್ದಿಲೋಕ ಹೊಸಕೋಟೆ ಗ್ರಾಮಾಂತರ
ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಗಣಗಲೂರು ಗ್ರಾಪಂ ವ್ಯಾಪ್ತಿಯ ಶಿವನಾಪುರ ಗ್ರಾಮದಲ್ಲಿಬಮೂಲ್ ಕಲ್ಯಾಣ ಟ್ರಸ್ಟ್ ವತಿಯಿಂದ ನೂತನ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು.

ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಈ ಘಟಕವನ್ನು ಶಾಸಕ ಶರತ್ ಬಚ್ಚೇಗೌಡರೊಂದಿಗೆ ಗಣ್ಯರು ಉದ್ಘಾಟಿಸಿದರು.

ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದರ ಜತೆಗೆ ನೀರು ಸಂಗ್ರಹಿಸಿ ಮನೆಗಳಿಗೆ ಕೊಂಡೊಯ್ಯಲು ಅನುಕೂಲವಾಗುವಂತೆ ಕ್ಯಾನ್ ಗಳನ್ನು ವಿತರಿಸಿರುವುದು ಗ್ರಾಮಸ್ಥರಲ್ಲಿಸಂತಸ ಮೂಡಿಸಿತು.

ಫೋಟೋ:2211ವಿಕೆ14: ಹೊಸಕೋಟೆಯ ಶಿವನಾಪುರದಲ್ಲಿಶಾಸಕ ಶರತ್ ಬಚ್ಚೇಗೌಡ ಗ್ರಾಮಸ್ಥರಿಗೆ 20 ಲೀಟರ್ ಸಾಮರ್ಥ್ಯದ ವಾಟರ್ ಕ್ಯಾನ್ ಗಳನ್ನು ವಿತರಿಸಿದರು.