ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮದ ಜಿಲ್ಲಾಮಟ್ಟದ ಉದ್ಘಾಟನೆಯನ್ನು ಉದುಮ ಕ್ಷೇತ್ರದ ಶಾಸಕ ಕೆ. ನೀಲಕಂಠನ್ ನೆರವೇರಿಸಿದರು.ಉದುಮ ಗ್ರಾ.ಪಂ. ಅಧ್ಯಕ್ಷ ಚಂದ್ರನ್ ನಾಲಾಂವಾದುಕ್ಕಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾವೈದ್ಯಾಧಿಕಾರಿ (ಆರೋಗ್ಯ) ಡಾ. ರೇಖಾ ಕೆ.ಟಿ ಆಶಯ ಭಾಷಣ ಮಾಡಿದರು. ಕಾಞಂಗಾಡು ಬ್ಲಾಕ್ ಪಂಚಾಯಿತಿ ಸದಸ್ಯೆ ಸುಹ್ರಾಬಿ, ಉದುಮ ಗ್ರಾಮ ಪಂಚಾಯಿತಿ ಸದಸ್ಯೆ ಕೆ. ಪ್ರಮೀಳಾ, ರಾಷ್ಟ್ರೀಯ ಆರೋಗ್ಯ ಮಿಷನ್ ಜಿಲ್ಲಾಕಾರ್ಯಕ್ರಮ ವ್ಯವಸ್ಥಾಪಕ ಡಾ. ಆರೋಗ್ಯ ಇಲಾಖೆಯ ನಿರ್ದೇಶನಾಲಯದ ರಾಜ್ಯ ಮಟ್ಟದ ವೀಕ್ಷಕಿ ಧನ್ಯಾ ದಯಾನಂದ್ , ತರಬೇತಿ ಸಂಯೋಜಕಿ ಕೆ.ಎನ್ . ಅಜಯ್ , ಐಎಪಿ ಕಾಸರಗೋಡು ಕಾರ್ಯದರ್ಶಿ ಡಾ. ಉದಯ್ ಶ್ರೀನಿವಾಸ್ , ರೋಟರಿ ಜಿಲ್ಲಾಪಲ್ಸ್ ಪೋಲಿಯೊ ಅಧ್ಯಕ್ಷ ಡಾ. ಸಿ.ಎಚ್ . ಜನಾರ್ದನ ನಾಯಕ್ , ಉದುಮ ಕುಟುಂಬ ಆರೋಗ್ಯ ಕೇಂದ್ರದ ವೈದ್ಯಕೀಯ ಅಧಿಕಾರಿ ಡಾ. ಅನಿಲ್ ಕುಮಾರ್ , ಜಿಲ್ಲಾಎಂಸಿಎಚ್ ಅಧಿಕಾರಿ ಸ್ಟೆಲ್ಲಾಜೋಸೆಫ್ ಮತ್ತು ಐಸಿಡಿಎಸ್ ಮೇಲ್ವಿಚಾರಕ ಟಿ. ರಾಮ ಮಾತನಾಡಿದರು.
ಜಿಲ್ಲಾಆರ್ ಸಿಎಚ್ ಅಧಿಕಾರಿ ಡಾ. ದಿವ್ಯಾ ವಿ.ಎಸ್ . ಸ್ವಾಗತಿಸಿದರು. ಜಿಲ್ಲಾಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಅಬ್ದುಲ್ ಲತೀಫ್ ಮಠಥಿಲ್ ವಂದಿಸಿದರು. ಜಿಲ್ಲಾವೈದ್ಯಕೀಯ ಕಚೇರಿ (ಆರೋಗ್ಯ) ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ಆಶ್ರಯದಲ್ಲಿಐಎಪಿ ಮತ್ತು ರೋಟರಿ ಸಹಯೋಗದೊಂದಿಗೆ ಜಿಲ್ಲಾಮಟ್ಟದ ಉದ್ಘಾಟನಾ ಕಾರ್ಯಕ್ರಮವನ್ನು ಉದುಮ ಕುಟುಂಬ ಆರೋಗ್ಯ ಕೇಂದ್ರದಲ್ಲಿಆಯೋಜಿಸಲಾಯಿತು. 5 ವರ್ಷದೊಳಗಿನ ಎಲ್ಲಮಕ್ಕಳಿಗೆ ರೋಗನಿರೋಧಕ ಶಕ್ತಿಯನ್ನು ಖಚಿತಪಡಿಸಿಕೊಳ್ಳಲು ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮವನ್ನು ಮುಂದುವರಿಸಲಾಗುತ್ತಿದೆ. ಅಂಗನವಾಡಿಗಳು, ಶಾಲೆಗಳು, ಆರೋಗ್ಯ ಕೇಂದ್ರಗಳು, ಬಸ್ ನಿಲ್ದಾಣಗಳು ಮತ್ತು ರೈಲ್ವೆ ನಿಲ್ದಾಣಗಳು ಸೇರಿದಂತೆ ಜಿಲ್ಲೆಯ ನಾನಾ ಸ್ಥಳಗಳಲ್ಲಿಬೂತ್ ಗಳನ್ನು ಸ್ಥಾಪಿಸಲಾಯಿತು. ತಲುಪಲು ಕಷ್ಟವಾದ ಪ್ರದೇಶಗಳಲ್ಲಿಮತ್ತು ವಲಸೆ ಕಾರ್ಮಿಕ ಶಿಬಿರಗಳಲ್ಲಿರುವ ಮಕ್ಕಳಿಗೆ ಹನಿಗಳನ್ನು ನೀಡಲು ಮೊಬೈಲ್ ತಂಡಗಳನ್ನು ಸಹ ಸ್ಥಾಪಿಸಲಾಯಿತು.