***ಆನ್ ಲೈನ್ ನಲ್ಲೇ ರಸಗೊಬ್ಬರ ಬುಕ್ಕಿಂಗ್ ; ಡಿ.15ರಿಂದ ಜಾರಿ
ವಿಕ ಸುದ್ದಿಲೋಕ ಬೀದರ್
ಗೊಬ್ಬರಕ್ಕಾಗಿ ಇನ್ನು ಮುಂದೆ ಸರತಿ ಸಾಲಿನಲ್ಲಿನಿಲ್ಲಬೇಕಿಲ್ಲ. ಡಿ.15ರಿಂದ ಡಿಜಿಟಲ್ ವೇದಿಕೆಯಲ್ಲೇ ಖರೀದಿಸಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ದೇವಿಕಾ.ಆರ್ ತಿಳಿಸಿದ್ದಾರೆ.
ಬಿತ್ತನೆ ಸಮಯ ಬಂತೆಂದರೆ ರಸಗೊಬ್ಬರದ ಅಂಗಡಿಗಳ ಮುಂದೆ ಬೆಳ್ಳಂಬೆಳಗ್ಗೆಯೇ ಕಿಲೋಮೀಟರ್ ಗಟ್ಟಲೆ ಸರತಿ ಸಾಲಿನಲ್ಲಿನಿಲ್ಲುವ ರೈತರ ಬವಣೆಗೆ ಇನ್ನು ಮುಕ್ತಿ ಸಿಗಲಿದೆ. ಡಿ.15ರಿಂದ ರಸಗೊಬ್ಬರ ಖರೀದಿ ಪ್ರಕ್ರಿಯೆಯಲ್ಲಿಮಹತ್ವದ ಬದಲಾವಣೆಯಾಗುತ್ತಿದ್ದು, ರೈತರು ಮನೆಯಲ್ಲೇ ಕುಳಿತು ಮೊಬೈಲ್ ಆ್ಯಪ್ ಮೂಲಕ ಬುಕಿಂಗ್ ಮಾಡಬಹುದಾಗಿದೆ. ರಸಗೊಬ್ಬರ ವಿತರಣೆಯಲ್ಲಿಪಾರದರ್ಶಕತೆ ತರಲು ಹಾಗೂ ನಿಜವಾದ ರೈತರಿಗೆ ಸಬ್ಸಿಡಿ ದರದಲ್ಲಿಗೊಬ್ಬರ ತಲುಪಿಸುವ ಉದ್ದೇಶದಿಂದ ’ಫರ್ಟಿಲೈಸರ್ ಸೇಲ್ ಅಪ್ಲಿಕೇಶನ್ ಸಿಸ್ಟಮ್ ’ ಅಭಿವೃದ್ಧಿಪಡಿಸಲಾಗಿದೆ. ಮನೆಯಲ್ಲೇ ಕೂತು ಆ್ಯಪ್ ಮೂಲಕ ತಮಗೆ ಬೇಕಾದ ಗೊಬ್ಬರವನ್ನು ಮುಂಗಡವಾಗಿ ಬುಕಿಂಗ್ ಮಾಡಿಕೊಳ್ಳುವ ಹೊಸ ಡಿಜಿಟಲ್ ವ್ಯವಸ್ಥೆ ಜಾರಿಗೆ ಬರುತ್ತಿದೆ.
ಈ ವ್ಯವಸ್ಥೆಯಲ್ಲಿರೈತರ ಆಧಾರ್ ಸಂಖ್ಯೆ, ಜಮೀನಿನ ವಿವರ ಹಾಗೂ ರೈತರ ಗುರುತಿನ ಮಾಹಿತಿ ಸಂಯೋಜಿಸಲಾಗುತ್ತದೆ. ಇದರಿಂದ ರಸಗೊಬ್ಬರ ಮಾರಾಟದಲ್ಲಿನಿಖರತೆ ಕಾಪಾಡುವ ಜತೆಗೆ ಅನಧಿಕೃತ ಮಾರಾಟ ಮತ್ತು ದುರುಪಯೋಗ ತಡೆಯಲು ಸಾಧ್ಯವಾಗುತ್ತದೆ. ರಸಗೊಬ್ಬರ ಮಾರಾಟ ಕೇಂದ್ರಗಳಲ್ಲಿಕಸ್ಟಮರ್ ಸರ್ವಿಸ್ ಸೆಂಟರ್ , ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಸಹಕಾರ ಸೊಸೈಟಿಗಳು ಹಾಗೂ ರಸಗೊಬ್ಬರ ಅಂಗಡಿಗಳ ಮೂಲಕ ರೈತರಿಗೆ ಸಹಾಯ ಮಾಡಲಾಗುತ್ತದೆ. ಅಲ್ಲದೆ, ಇಂಟಿಗ್ರೇಟೆಡ್ ಫರ್ಟಿಲೈಸರ್ ಮ್ಯಾನೇಜ್ ಮೆಂಟ್ ಸಿಸ್ಟಮ್ ಮೂಲಕ ರಸಗೊಬ್ಬರ ದಾಸ್ತಾನು, ವಿತರಣೆ, ಸಾಗಣೆ ಹಾಗೂ ಸರಬರಾಜಿನ ಸಂಪೂರ್ಣ ನಿರ್ವಹಣೆ ಮತ್ತು ಪರಿಶೀಲನೆ ನಡೆಸಲಾಗುತ್ತದೆ. ಆಧಾರ್ -ಮೊಬೈಲ್ ರಸಗೊಬ್ಬರ ಟ್ರ್ಯಾಕ್ ವ್ಯವಸ್ಥೆ ಮೂಲಕ ವಿತರಿಸಲಾದ ರಸಗೊಬ್ಬರದ ಪ್ರಮಾಣ ಮತ್ತು ವಿವರ ನಿಖರವಾಗಿ ದಾಖಲಿಸಲಾಗುತ್ತದೆ. ಸಬ್ಸಿಡಿ ದರದಲ್ಲಿದೊರೆಯುವ ರಸಗೊಬ್ಬರವನ್ನು ನಮೂದಿಸಿ ಅಗತ್ಯ ಪರಿಶೀಲನೆ ಪೂರ್ಣಗೊಳಿಸಿದ ನಂತರ ರೈತರ ಗುರುತಿನ ವಿವರಗಳು ಲಭ್ಯವಾಗುತ್ತವೆ. ಆ್ಯಪ್ ನಲ್ಲಿಲಭ್ಯವಿರುವ ಬೆಳೆ ಮತ್ತು ಜಮೀನಿನ ವಿವರಗಳ ಆಧಾರದ ಮೇಲೆ 2ರಿಂದ 3 ದಿನಗಳ ಅವಧಿಯಲ್ಲಿಅಗತ್ಯವಿರುವ ಗೊಬ್ಬರ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಬುಕಿಂಗ್ ಮಾಡಿದ ನಂತರ ದೊರೆಯುವ ಕ್ಯೂಆರ್ ಕೋಡ್ ಅನ್ನು ಗೊಬ್ಬರದ ಅಂಗಡಿಯಲ್ಲಿಸ್ಕಾ್ಯನ್ ಮಾಡಿಸಿ ಗೊಬ್ಬರ ಪಡೆಯಬಹುದು. ರೈತರು ಮೊಬೈಲ್ ಬಳಕೆಯಲ್ಲಿತೊಂದರೆ ಅನುಭವಿಸಿದಲ್ಲಿಸಮೀಪದ ಅಧಿಕೃತ ಗೊಬ್ಬರ ಮಾರಾಟ ಕೇಂದ್ರ, ಕಸ್ಟಮರ್ ಸರ್ವಿಸ್ ಸೆಂಟರ್ ಅಥವಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಹಾಯ ಪಡೆಯಬಹುದು.
****ಕೋಟ್ ...
ಈ ಡಿಜಿಟಲ್ ವ್ಯವಸ್ಥೆಯ ಮೂಲಕ ರಸಗೊಬ್ಬರ ವಿತರಣೆಯಲ್ಲಿಪಾರದರ್ಶಕತೆ ಹೆಚ್ಚುವುದರ ಜತೆಗೆ ರೈತರಿಗೆ ಸಕಾಲದಲ್ಲಿಗೊಬ್ಬರ ದೊರೆಯಲು ಹಾಗೂ ಸಬ್ಸಿಡಿ ದುರುಪಯೋಗ ತಡೆಗಟ್ಟಲು ಸಹಕಾರಿಯಾಗಲಿದೆ.
- ದೇವಿಕಾ ಆರ್ ., ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಬೀದರ್ (ಚಿತ್ರವಿದೆಬಳಸಿ)