ನವೋದಯ ವಿದ್ಯಾಲಯ ಪರೀಕ್ಷೆ 28ಕ್ಕೆ

Contributed by: manjunathrd59@gmail.com|Vijaya Karnataka•
28
ಏಳು ತಾಲೂಕುಗಳಲ್ಲಿ37 ಪರೀಕ್ಷಾ ಕೇಂದ್ರ

ವಿಕ ಸುದ್ದಿಲೋಕ ಹಾವೇರಿ
ಜವಾಹರ ನವೋದಯ ವಿದ್ಯಾಲಯದ 2027-28ನೇ ಸಾಲಿನ 6ನೇ ತರಗತಿ ಆಯ್ಕೆ ಪರೀಕ್ಷೆ ಜಿಲ್ಲೆಯ ಏಳು ತಾಲೂಕುಗಳ 37 ಪರೀಕ್ಷಾ ಕೇಂದ್ರಗಳಲ್ಲಿನ.28 ರಂದು ಜರುಗಲಿದ್ದು, ಈ ಪರೀಕ್ಷಾ ಕೇಂದ್ರ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿರ್ಬಂಧಿತ ಪ್ರದೇಶವನ್ನು ಘೋಷಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಆದೇಶ ಹೊರಡಿಸಿದ್ದಾರೆ.

ಈ ನಿರ್ಬಂಧಿತ ಪ್ರದೇಶದಲ್ಲಿಅನಧಿಕೃತ ವ್ಯಕ್ತಿ ಹಾಗೂ ವ್ಯಕ್ತಿಗಳ ಗುಂಪುಗಳ ಪ್ರವೇಶ ನಿಷೇಧಿಸಲಾಗಿದೆ. ಈ ಪ್ರದೇಶದಲ್ಲಿಬರುವ ಝರಾಕ್ಸ್ ಹಾಗೂ ಟೈಪಿಂಗ್ ಸೆಂಟರ್ ಗಳನ್ನು ಮುಚ್ಚಲು ಆದೇಶಿಸಲಾಗಿದೆ. ಮೊಬೈಲ್ ಫೋನ್ ನಿಷೇಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಪರೀಕ್ಷಾ ಕೇಂದ್ರಗಳು:

ಬ್ಯಾಡಗಿ ಪಟ್ಟಣದ ಎಸ್ ಜೆಜೆಎಂ ಕೆಪಿಎಸ್ ಶಾಲೆ, ಆದರ್ಶ ಸೆಂಟ್ರಲ್ ಸ್ಕೂಲ್ , ನೂತನ ಪ್ರೈಮರಿ ಮತ್ತು ಹೈಸ್ಕೂಲ್ , ಡಾ. ಬಿ.ಆರ್ . ಅಂಬೇಡ್ಕರ್ ಹೈಯರ್ ಪೈ್ರಮರಿ ಸ್ಕೂಲ್ , ಹಾನಗಲ್ ಪಟ್ಟಣದ ಪಿಎಂಶ್ರೀ ಕೆಪಿಎಸ್ ಶಾಲೆ, ಆಕ್ಸ್ ಫರ್ಡ್ ಸ್ಕೂಲ್ , ಎನ್ ಸಿಜೆಸಿ ಶಾಲೆ, ಅಂಜುಮಾನ್ ಉರ್ದು ಹೈಸ್ಕೂಲ್ , ಕೆಎಲ್ ಇ ಇಂಡಿಪೆಂಡೆಂಟ್ ಪಿಯು ಕಾಲೇಜು, ಶ್ರೀ ಕುಮಾರೇಶ್ವರ ಹೈಸ್ಕೂಲ್ , ಶ್ರೀ ಕುಮಾರೇಶ್ವರ ಪಿಯು ಕಾಲೇಜು, ನವೀನ್ ಹೈಯರ್ ಪ್ರೈಮರಿ ಸ್ಕೂಲ್ ನಲ್ಲಿಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಹಾವೇರಿ ಶಹರದ ಹುಕ್ಕೇರಿಮಠ ಹೈಸ್ಕೂಲ್ , ಮುನ್ಸಿಪಲ್ ಹೈಸ್ಕೂಲ್ , ಸರ್ .ಎಂ. ವಿಶ್ವೇಶ್ವರಯ್ಯ ಇಂಗ್ಲೀಷ್ ಮೀಡಿಯಂ ಸ್ಕೂಲ್ , ಜೆ.ಪಿ. ರೋಟರಿ ಕನ್ನಡ ಸ್ಕೂಲ್ , ಚನ್ನಬಸಪ್ಪ ಮಾಗವಿ ಕನ್ನಡ ಮೀಡಿಯಂ ಹೈಸ್ಕೂಲ್ , ಲಯನ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಾಗೂ ಹಿರೇಕೆರೂರು ಪಟ್ಟಣದ ಡಿ.ಆರ್ .ಟಿ. ಬಾಯ್ ್ಸ ಹೈಸ್ಕೂಲ್ , ಶ್ರೀ ಸಂಗಮೇಶ್ವರ ಹೈಸ್ಕೂಲ್ , ಸಿಇಎಸ್ ಬಾಲಕಿಯರ ಹೈಸ್ಕೂಲ್ , ಕರ್ನಾಟಕ ಪಬ್ಲಿಕ್ ಸ್ಕೂಲ್ , ಶ್ರೀತರಳಬಾಳು ಸ್ಕೂಲ್ ನಲ್ಲಿಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ರಾಣೆಬೆನ್ನೂರು ಪಟ್ಟಣದ ಶ್ರೀಸಿದ್ದೇಶ್ವರ ರೂರಲ್ ರೆಸಿಡೆನ್ಸಿಯಲ್ ಹೈಸ್ಕೂಲ್ , ಆಂಗ್ಲೋ ಉರ್ದು ಹೈಸ್ಕೂಲ್ , ದೇವಿಕಾ ಹೈಸ್ಕೂಲ್ , ಲಯನ್ಸ್ ಕನ್ನಡ ಮೀಡಿಯಂ ಹೈಸ್ಕೂಲ್ , ಬಿ.ಕೆ. ಗುಪ್ತಾ ಕಾಲೇಜು, ಕೆಎಲ್ ಇ ರಾಜರಾಜೇಶ್ವರಿ ಹೈಸ್ಕೂಲ್ , ಸವಣೂರು ನಗರದ ಸರಕಾರಿ ಕೆಪಿಎಸ್ ಮಜಿದ್ ಹೈಸ್ಕೂಲ್ , ಅಂಜುಮಾನ್ -ಎ-ಇಸ್ಲಾಂ ಇಂಗ್ಲಿಷ ಮೀಡಿಯಂ ಹೈಸ್ಕೂಲ್ , ವಿದ್ಯಾಭಾರತಿ ಇಂಗ್ಲಿಷ್ ಮೀಡಿಯಂ ಸ್ಕೂಲ್ , ಎಸ್ ಎಫ್ ಎಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಾಗೂ ಶಿಗ್ಗಾವಿ ನಗರದ ಜೆ.ಎಂ.ಜೆ. ಸ್ಕೂಲ್ , ಎಸ್ ಬಿಬಿಎಂಡಿ ಪಿಯು ಕಾಂಪೋಸಿಟ್ ಪಿಯು ಕಾಲೇಜು, ಶ್ರೀ ಚನ್ನಪ್ಪ ಕುನ್ನೂರು ಇಂಗ್ಲಿಷ್ ಮೀಡಿಯಂ ಸ್ಕೂಲ್ , ಶ್ರೀ ಚನ್ನಪ್ಪ ಕುನ್ನೂರು ಹೈಸ್ಕೂಲ್ ನಲ್ಲಿಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.