‘ಶಿಕ್ಷಣದ ಜತೆಗೆ ತಂತ್ರಜ್ಞಾನ ಅರಿವು ಅತ್ಯಗತ್ಯ’

Contributed by: nandagudinagaraja77@gmail.com|Vijaya Karnataka•
Vijay Karnataka
‘ಶಿಕ್ಷಣದ ಜತೆಗೆ ತಂತ್ರಜ್ಞಾನ ಅರಿವು ಅತ್ಯಗತ್ಯ’

ವಿಕ ಸುದ್ದಿಲೋಕ ನಂದಗುಡಿ
ಗ್ರಾಮೀಣ ಭಾಗದ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ತಂತ್ರಜ್ಞಾನದ ಅರಿವು ಅತ್ಯಗತ್ಯ. ಈ ನಿಟ್ಟಿನಲ್ಲಿಖಾಸಗಿ ಕಂಪನಿಗಳು ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ನೆರವಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಎಸ್ ಡಿಎಂಸಿ ನಿಕಟ ಪೂರ್ವ ಅಧ್ಯಕ್ಷ ಎಸ್ .ಎಂ. ನಾರಾಯಣಸ್ವಾಮಿ ಹೇಳಿದರು.

ನಂದಗುಡಿ ಹೋಬಳಿ ಶಿವನಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಎಟಿ ಅಂಡ್ ಟಿ ಕಂಪನಿಯ ಅನುದಾನದಡಿ 5 ಲ್ಯಾಪ್ ಟಾಪ್ ಹಾಗೂ ಕೀ ಬೋರ್ಡ್ ಗಳ ವಿತರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸರಕಾರಿ ಶಾಲೆಗಳಲ್ಲಿಓದುತ್ತಿರುವ ವಿದ್ಯಾರ್ಥಿಗಳಲ್ಲಿಯೂ ಅಪಾರ ಪ್ರತಿಭೆ ಮತ್ತು ಕಲಿಕಾ ಸಾಮರ್ಥ್ಯವಿದೆ. ಅವರಿಗೆ ಸೂಕ್ತ ಅವಕಾಶ ಹಾಗೂ ಅಗತ್ಯ ಸೌಲಭ್ಯ ಒದಗಿಸಿದರೆ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಮಾನವಾಗಿ ಸ್ಪರ್ಧಿಸಲು ಸಾಧ್ಯವಾಗುತ್ತದೆ ಎಂದರು.

ಮುಖ್ಯ ಶಿಕ್ಷಕ ಕೆ.ವಿ. ಶಂಕರಪ್ಪ ಮಾತನಾಡಿ, ಶಾಲಾ ಶಿಕ್ಷಣದಲ್ಲಿತಂತ್ರಜ್ಞಾನದ ಬಳಕೆ ಹೆಚ್ಚುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಡಿಜಿಟಲ್ ಕಲಿಕೆಯ ಅವಕಾಶ ಕಲ್ಪಿಸಬೇಕಿದೆ. ಎಟಿ ಅಂಡ್ ಟಿ ಕಂಪನಿಯ ನೆರವಿನಿಂದ ಶಾಲೆಗೆ ದೊರೆತಿರುವ ಲ್ಯಾಪ್ ಟಾಪ್ ಗಳನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು. ಖಾಸಗಿ ಕಂಪನಿಗಳು ಸಾಮಾಜಿಕ ಹೊಣೆಗಾರಿಕೆಯಡಿ ಶಿಕ್ಷಣ ಕ್ಷೇತ್ರಕ್ಕೆ ನೀಡುವ ಕೊಡುಗೆ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿಮಹತ್ವದ ಪಾತ್ರ ವಹಿಸುತ್ತದೆ. ಕಂಪನಿಗಳ ಇಂತಹ ನೆರವು ಸರಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ ಎಂದು ತಿಳಿಸಿದರು.

ಎಟಿ ಅಂಡ್ ಟಿ ಕಂಪನಿಯ ಮಂಜುನಾಥ್ ಕೆ.ಡಿ. ಹಾಗೂ ಯಶಸ್ವಿನಿ ಅವರನ್ನು ಎಸ್ ಡಿಎಂಸಿ ಪದಾಧಿಕಾರಿಗಳು ಸನ್ಮಾನಿಸಿದರು. ಎಸ್ ಡಿಎಂಸಿ ಅಧ್ಯಕ್ಷ ರಮೇಶ್ , ಗ್ರಾಮಸ್ಥರಾದ ಅಮ್ಜದ್ , ಕಾಜಾವುಲ್ಲಾ, ಚಂದ್ರಶೇಖರ್ , ಎಟಿ ಅಂಡ್ ಟಿ ಕಂಪನಿಯ ಸಿಬ್ಬಂದಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

22 ನಂದಗುಡಿ 1. ನಂದಗುಡಿ ಹೋಬಳಿಯ ಶಿವನಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಎಟಿ ಅಂಡ್ ಟಿ ಕಂಪನಿಯ ವತಿಯಿಂದ 5 ಲ್ಯಾಪ್ ಟಾಪ್ ಹಾಗೂ ಕೀ ಬೋರ್ಡ್ ಗಳ ವಿತರಣೆ ಕಾರ್ಯಕ್ರಮ ನಡೆಯಿತು.

------------------

2. ಎಟಿ ಅಂಡ್ ಟಿ ಕಂಪನಿಯ ಮಂಜುನಾಥ್ ಕೆ.ಡಿ. ಹಾಗೂ ಯಶಸ್ವಿನಿ ರವರನ್ನು ಶಾಲೆಯ ಎಸ್ ಡಿಎಂಸಿ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.