ಮುಗಳಖೋಡ: ಪಟ್ಟಣದ ಆದಿ ಶಕ್ತಿ ಶ್ರೀ ರೇಣುಕಾ ದೇವಿಯ 34 ನೇ ಜಾತ್ರಾ ಮಹೋತ್ಸವ ನ.23 ಮತ್ತು 24 ರಂದು ಜರುಗಲಿದೆ.
23 ರಂದು ಮುಗಳಖೋಡ- ಜಿಡಗಾ ಮಠದ ಪೀಠಾಧಿಪತಿ ಡಾ. ಮುರುಘರಾಜೇಂದ್ರ ಶ್ರೀಗಳು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡುವರು. ರಾತ್ರಿ 9 ರಿಂದ ಡೊಳ್ಳಿನ ಹಾಗೂ ಚೌಡಕಿ ಮೇಳಗಳಿಂದ ಗಾಯನ ಕಾರ್ಯಕ್ರಮ ನಡೆಯಲಿದೆ.ನ.24 ರಂದು ಬೆಳಗ್ಗೆ ರುದ್ರಾಭಿಷೇಕ, 9 ಗಂಟೆಗೆ ಪೂರ್ಣಕುಂಭ ಸಹಿತ ದೇವಿ ಮೆರವಣಿಗೆ, ಮಧ್ಯಾಹ್ನ 12 ಗಂಟೆಗೆ ಹಡ್ಲಗಿ ತುಂಬುವುದು, ಅನ್ನಸಂತರ್ಪಣೆ, ರಾತ್ರಿ 10 ಗಂಟೆಗೆ ನಾಟಕ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.