ವಿಕ ಸುದ್ದಿಲೋಕ ನೆಲ್ಯಾಡಿಪಿ.ಎಂ. ಶ್ರೀ ಶಾಲೆಯಲ್ಲಿನಡೆದ ನೆಲ್ಯಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಗಳಿಸಿದ್ದು, ಕಿರಿಯರ ವಿಭಾಗದಲ್ಲಿಸಮಗ್ರ ಪ್ರಶಸ್ತಿ ಪಡೆದಿದ್ದಾರೆ.
ಕಿರಿಯರ ವಿಭಾಗದ ಭಕ್ತಿಗೀತೆ ಸ್ಪರ್ಧೆಯಲ್ಲಿಆದ್ಯ ಕೆ., ಅಭಿನಯ ಗೀತೆಯಲ್ಲಿಅನ್ವಿ ಸನೋಜ್ ಹಾಗೂ ಇಂಗ್ಲಿಷ್ ಕಂಠಪಾಠದಲ್ಲಿಅವಿಷಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಕಥೆ ಹೇಳುವ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿಪ್ರಸ್ತುತಿ, ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿಆದ್ಯ ಕೆ. ದ್ವಿತೀಯ ಸ್ಥಾನ ಪಡೆದಿದ್ದಾರೆ.
ಹಿರಿಯರ ವಿಭಾಗದ ಕಥೆ ಹೇಳುವ ಸ್ಪರ್ಧೆಯಲ್ಲಿನತಾಶ ಜಿನ್ಸ್ ಪ್ರಥಮ ಹಾಗೂ ಅಭಿನಯ ಗೀತೆ ಸ್ಪರ್ಧೆಯಲ್ಲಿಶ್ರೀಶ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಶಾಲೆಯ ಸಂಚಾಲಕ ರೆ. ಫಾ. ಹನಿ ಜೇಕಬ್ , ಆಡಳಿತಾಧಿಕಾರಿ ಮ್ಯಾಥ್ಯೂ ಟಿ.ಜೆ., ಮುಖ್ಯಶಿಕ್ಷಕ ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.