ಆಟೋಗಳನ್ನು ಸಿಂಗರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿಮೆರವಣಿಗೆ
ಸಾಧಕರಿಗೆ ಸನ್ಮಾನ, ಕನ್ನಡದ ಹಿರಿಮೆ ಸಾರಿದ ಚಾಲಕರುವಿಕ ಸುದ್ದಿಲೋಕ ಕುದೂರು
ಪಟ್ಟಣದ ಶಿವಕುಮಾರಸ್ವಾಮಿ ಬಸ್ ನಿಲ್ದಾಣದಲ್ಲಿರುವ ಬಿ.ಆರ್ . ಅಂಬೇಡ್ಕರ್ ಆಟೊ ನಿಲ್ದಾಣದ ವತಿಯಿಂದ ಆಟೋ ಚಾಲಕರು ಒಗ್ಗೂಡಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು.
ರಾಜ್ಯೋತ್ಸವದ ಅಂಗವಾಗಿ ಆಟೋಗಳನ್ನು ಕನ್ನಡ ಬಾವುಟ ಹಾಗೂ ನಾನಾ ಅಲಂಕಾರಗಳಿಂದ ಸಿಂಗರಿಸಲಾಗಿತ್ತು. ಬಳಿಕ ಸಿಂಗರಿಸಿದ ಆಟೊಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿಮೆರವಣಿಗೆ ನಡೆಸಿದ ಚಾಲಕರು ಕನ್ನಡಾಂಬೆಗೆ ಜಯಘೋಷ ಮೊಳಗಿಸಿ ಭಾಷಾಭಿಮಾನ ಮೆರೆದರು. ಕಾರ್ಯಕ್ರಮದಲ್ಲಿಭಾಗವಹಿಸಿದ್ದವರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಇದೇ ವೇಳೆ ನಾನಾ ಕ್ಷೇತ್ರಗಳಲ್ಲಿಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮುಖಂಡ ತೊರೆರಾಮನಹಳ್ಳಿ ನರಸಿಂಹಮೂರ್ತಿ ಮಾತನಾಡಿ, ಕನ್ನಡ ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ. ಅದು ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಅಸ್ಮಿತೆಯ ಪ್ರತೀಕ. ಕನ್ನಡಿಗರು ಭಾಷೆಯನ್ನು ಪ್ರೀತಿಸುವುದರ ಜತೆಗೆ ದೈನಂದಿನ ಜೀವನದಲ್ಲಿಯೂ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ರಾಜ್ಯೋತ್ಸವವನ್ನು ಒಂದು ದಿನಕ್ಕೆ ಸೀಮಿತಗೊಳಿಸದೆ ವರ್ಷವಿಡೀ ಕನ್ನಡದ ಬಳಕೆ ಮತ್ತು ಬೆಳವಣಿಗೆಗೆ ಶ್ರಮಿಸಬೇಕು ಎಂದರು.
ಡಾ. ರಾಜ್ ಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ನಾಗೇಶ್ ಮಾತನಾಡಿ, ನಿತ್ಯದ ದುಡಿಮೆಯ ನಡುವೆಯೂ ಆಟೋ ಚಾಲಕರು ಒಗ್ಗೂಡಿ ರಾಜ್ಯೋತ್ಸವ ಆಚರಿಸಿರುವುದು ಸಂತಸದ ಸಂಗತಿ. ಇಂತಹ ಕಾರ್ಯಕ್ರಮಗಳು ಕನ್ನಡಿಗರಲ್ಲಿಒಗ್ಗಟ್ಟು ಮತ್ತು ಭಾಷಾಭಿಮಾನ ಹೆಚ್ಚಿಸುವ ಜತೆಗೆ ಮುಂದಿನ ಪೀಳಿಗೆಗೂ ಕನ್ನಡದ ಮಹತ್ವ ತಿಳಿಸಲು ಸಹಕಾರಿಯಾಗುತ್ತವೆ ಎಂದರು.
ಪತ್ರಕರ್ತ ಮಂಜುನಾಥ್ ಮಾತನಾಡಿ, ಕನ್ನಡ ನಾಡು, ನುಡಿ, ನೆಲ, ಜಲದ ವಿಚಾರದಲ್ಲಿಪ್ರತಿಯೊಬ್ಬರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಭಾಷೆಯನ್ನು ಉಳಿಸಿ ಬೆಳೆಸುವ ಹೊಣೆ ಎಲ್ಲಕನ್ನಡಿಗರ ಮೇಲಿದೆ. ಆಟೋ ಚಾಲಕರು ಸಂಘಟಿತರಾಗಿ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಆಟೊ ನಿಲ್ದಾಣದ ಚಾಲಕರು, ಮಾಲೀಕರು ಹಾಗೂ ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು.
ಫೋಟೊ ಶೀರ್ಷಿಕೆಗಳು
22ನವೆಂಬರ್ ಕೆಡಿಆರ್ 6: ಕುದೂರಿನ ಬಿ.ಆರ್ . ಅಂಬೇಡ್ಕರ್ ಆಟೊ ನಿಲ್ದಾಣದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
22ನವೆಂಬರ್ ಕೆಡಿಆರ್ 7,8: ಕನ್ನಡ ರಾಜ್ಯೋತ್ಸವದ ಅಂಗವಾಗಿ ಅಲಂಕೃತಗೊಂಡ ಆಟೊಗಳು.