ಶರಣರ ಆಚಾರ--ವಿಚಾರಗಳಿಂದ ಶಾಂತಿಯುತ ಬದುಕು ಸಾಧ್ಯ

Contributed by: shivumoktedar@gmail.com|Vijaya Karnataka•
Vijay Karnataka
ಚಿತ್ರ : 22ಎಡಿ3

ಔರಾದ್ ಪಟ್ಟಣದ ಅನುಭವ ಮಂಟಪದಲ್ಲಿಇತ್ತೀಚಿಗೆ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮ ನಡೆಯಿತು.
ಔರಾದನಲ್ಲಿಮನೆಗೊಂದು ಅನುಭವ ಮಂಟಪ ಕಾರ್ಯಕ್ರಮ

ಶರಣರ ಆಚಾರ-ವಿಚಾರಗಳಿಂದ ಶಾಂತಿಯುತ ಬದುಕು ಸಾಧ್ಯ

ವಿಕಸುದ್ದಿಲೋಕ ಔರಾದ್

ಅನುಭವ ಮಂಟಪದ ಮೂಲಕ ಸಮಾಜದಲ್ಲಿನ್ಯಾಯ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳನ್ನು ಸಾರಿದ ಬಸವಣ್ಣನವರು ಜಗತ್ತಿಗೆ ಮಹತ್ವದ ಸಂದೇಶ ನೀಡಿದ್ದಾರೆ. 12ನೇ ಶತಮಾನದಲ್ಲಿಯೇ ಸಮಾನತೆಯ ಕ್ರಾಂತಿ ಮಾಡಿದ ಬಸವಣ್ಣನವರ ವಚನಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.

ಪಟ್ಟಣದ ಅನುಭವ ಮಂಟಪದಲ್ಲಿಇತ್ತೀಚಿಗೆ ನಡೆದ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮದಲ್ಲಿದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಅವರು, ಬಸವಣ್ಣ ಹಾಗೂ ಅಲ್ಲಮಪ್ರಭು ಅವರ ವಿಚಾರಧಾರೆಗಳನ್ನು ಅರಿಯುವುದು ಮತ್ತು ಅವರ ತತ್ವಗಳನ್ನು ಜೀವನದಲ್ಲಿಅಳವಡಿಸಿಕೊಳ್ಳುವುದು ಅಗತ್ಯ. ಶರಣರ ಆಚಾರ-ವಿಚಾರಗಳಿಂದ ಸಮಾಜದಲ್ಲಿಶಾಂತಿ, ಸೌಹಾರ್ದ ಹಾಗೂ ಸಮಾನತೆಯ ಬದುಕು ಸಾಧ್ಯ ಎಂದರು.

ಚಂದ್ರಕಾಂತ ನಿರ್ಮಳೆ ವಿಶೇಷ ಉಪನ್ಯಾಸಕರಾಗಿ ಮಾತನಾಡಿ,ವಚನಗಳ ಮೂಲಕ ಮನುಷ್ಯನ ಬದುಕಿಗೆ ಅಗತ್ಯವಾದ ನೀತಿ, ನಿಷ್ಠೆ, ಕಾಯಕ ಹಾಗೂ ದಾಸೋಹದ ತತ್ವಗಳನ್ನು ಸಾರಿದರು. ಬಸವಣ್ಣನವರ ವಿಚಾರಧಾರೆಗಳು ಇಂದಿನ ಸಮಾಜಕ್ಕೂ ಪ್ರಸ್ತುತವಾಗಿದ್ದು, ಅವುಗಳನ್ನು ಜೀವನದಲ್ಲಿಅಳವಡಿಸಿಕೊಳ್ಳಬೇಕು ಎಂದರು. ಗಂಗಮ್ಮ ಶರಣಪ್ಪ ನಾಗಲಗಿದ್ದೆ ಭಕ್ತಿಸೇವೆ ಮಾಡಿದರು. ಕಾರ್ಯಕ್ರಮದಲ್ಲಿತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಡಾ. ಸಂಜೀವಕುಮಾರ ಜುಮ್ಮಾ, ಶರಣಪ್ಪ ನಾಗಲಗಿದ್ದೆ ಇದ್ದರು. ಅಂಬಾದಾಸ ನಳಗೆ ಸ್ವಾಗತಿಸಿದರು. ಮಹಾನಂದ ಎಂಡೆ ನಿರೂಪಿಸಿದರು.ಮಲ್ಲಿಕಾರ್ಜುನ ಟಂಕಸಾಲೆ ವಂದಿಸಿದರು.