ರೈತರ ಭೂ ಸಮಸ್ಯೆಗೆ ಪರಿಹಾರ

Contributed by: kavancariappacoorg@gmail.com|Vijaya Karnataka•
Vijay Karnataka
ಲೀಡ್ )))

ರೈತರ ಭೂ ಸಮಸ್ಯೆಗೆ ಪರಿಹಾರ

*ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿ ಭರವಸೆ*ಸೋಮವಾರಪೇಟೆಯಲ್ಲಿರೈತ ಸಮಾವೇಶ

ವಿ.ಕ.ಸುದ್ದಿಲೋಕ ಸೋಮವಾರಪೇಟೆ

ಕೊಡಗು ಜಿಲ್ಲೆಯ ರೈತರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಪಟ್ಟಣದ ಪಿಎಂಶ್ರೀ ಶಾಲಾ ಮೈದಾನದಲ್ಲಿಹರಪಳ್ಳಿ ರವೀಂದ್ರ ಅಭಿಮಾನಿಗಳ ಬಳಗ ಹಾಗೂ ರೈತ ಹೋರಾಟ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ರವೀಂದ್ರ ಅವರ ಜೀವನಚರಿತ್ರೆ ಕೃತಿ ಲೋಕಾರ್ಪಣೆ ಹಾಗೂ ರೈತ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

‘‘ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಸಿ ಆ್ಯಂಡ್ ಡಿ ಜಾಗದ ಸಮಸ್ಯೆ, ಸೆಕ್ಷನ್ -4 ಸಮಸ್ಯೆಯಿಂದ ಅಸ್ತಿತ್ವ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಆದರೆ ರೈತರು ಆತಂಕಪಡುವ ಅಗತ್ಯವಿಲ್ಲ. ಎಲ್ಲಸಮಸ್ಯೆಗಳಿಗೆ ಪರಿಹಾರ ಇದ್ದೇ ಇರುತ್ತೆ. ರೈತರ ಧ್ವನಿಯಾಗಿ ಕೆಲಸ ಮಾಡಲು ನಾನಿದ್ದೇನೆ. ಕೃಷಿ ಭೂಮಿ ಅರಣ್ಯವಾಗಲು ಅವಕಾಶ ನೀಡುವುದಿಲ್ಲ’’ ಎಂದು ರೈತರಿಗೆ ಧೈರ್ಯ ತುಂಬಿದರು.

ನಿಯೋಗದೊಂದಿಗೆ ಹೊಸದಿಲ್ಲಿಗೆ ಬನ್ನಿ: ‘‘ಜಿಲ್ಲೆಯ ಕೃಷಿ ಭೂಮಿ ಸಮಸ್ಯೆ ಬಗ್ಗೆ ಅಧ್ಯಯನ ಮಾಡಿರುವ ರೈತರು ಮತ್ತು ಜನಪ್ರತಿನಿಧಿಗಳ ನಿಯೋಗ ಲೋಕಾಸಭಾ ಅಧಿವೇಶನದ ಸಂದರ್ಭದಲ್ಲಿಹೊಸದಿಲ್ಲಿಗೆ ಬಂದರೆ, ಕೇಂದ್ರ ಅರಣ್ಯ ಸಚಿವರು ಮತ್ತು ಇಲಾಖೆ ಮೇಲಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬಹುದು’’’ ಎಂದು ಹೇಳಿದರು.

ಅರಣ್ಯ ರಕ್ಷಣೆ ಮಾಡುವವರು ರೈತರು: ‘‘ಅರಣ್ಯ ಸಂಪತ್ತನ್ನು ಬೆಳೆಸಿ ಸಂರಕ್ಷಿಸಿದವರು ರೈತರೇ. ಅರಣ್ಯ ಇಲಾಖೆಯಿಂದಲೇ ಅರಣ್ಯ ರಕ್ಷಣೆಯಾಗುತ್ತದೆ ಎಂಬುದು ಹಾಸ್ಯಾಸ್ಪದ. ಲಕ್ಷಗಟ್ಟಲೆ ಗಿಡ ನೆಟ್ಟಿದ್ದೇವೆ ಎನ್ನುತ್ತಾರೆ, ಆದರೆ ಅರಣ್ಯದಲ್ಲಿಆ ಗಿಡಗಳು ಕಾಣುವುದಿಲ್ಲ. ಪರಿಸರ ಕಾಪಾಡುತ್ತಿರುವ ರೈತರಿಗೆ ಅರಣ್ಯಾಧಿಕಾರಿಗಳು ಕಿರುಕುಳ ನೀಡಬಾರದು’’ ಎಂದು ಸೂಚಿಸಿದರು.

ನಕಲಿ ದಾಖಲೆ ಸೃಷ್ಟಿಸಿದ ಅಧಿಕಾರಿಗಳು: ‘‘ಕೆಲ ದಶಕಗಳ ಹಿಂದೆ ಕೃಷಿ ಭೂಮಿಯನ್ನು ಬರಡು ಭೂಮಿ ಎಂದು ದಾಖಲೆ ಸೃಷ್ಟಿಸಿದ ಅಧಿಕಾರಿಗಳಿಂದಲೇ ಇಂದು ರೈತರು ಭೂಮಿ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ಕೆಲ ಅಧಿಕಾರಿಗಳ ವರದಿಯಿಂದ ನ್ಯಾಯಾಲಯಗಳಲ್ಲೂರೈತರಿಗೆ ಹಿನ್ನಡೆಯಾಗುತ್ತಿದೆ’’ ಎಂದು ಬೇಸರ ವ್ಯಕ್ತಪಡಿಸಿದರು.

ಶ್ಲಾಘನೆ: ಉದ್ಯಮಿ ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಅವರ ಬದುಕನ್ನು ಶ್ಲಾಘಿಘಿಸಿದ ಸಚಿವರು, ‘‘ಹಳ್ಳಿಯಿಂದ ನಗರಕ್ಕೆ ಹೋಗಿ ತಿಂಗಳಿಗೆ 300 ರೂ. ಸಂಬಳಕ್ಕೆ ಕೆಲಸ ಆರಂಭಿಸಿ, ಇಂದು ದೊಡ್ಡ ಉದ್ಯಮಿಯಾಗಿ ಬೆಳೆದು, ಗಳಿಕೆಯ ಒಂದಷ್ಟು ಭಾಗವನ್ನು ಸಮಾಜಸೇವೆ ಮತ್ತು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ವ್ಯಯಿಸುತ್ತಿರುವುದು ಶ್ಲಾಘನೀಯ. ಅವರ ಜೀವನಚರಿತ್ರೆ ಲೋಕಾರ್ಪಣೆ ಮಾಡಿರುವುದು ನನಗೂ ಹೆಮ್ಮೆ’’ ಎಂದರು.

ಹರಪಳ್ಳಿ ರವೀಂದ್ರ ಮಾತನಾಡಿ, ‘‘ಬಡವರಾಗಿ ಹುಟ್ಟುವುದು ತಪ್ಪಲ್ಲ, ಬಡವರಾಗಿಯೇ ಸಾಯುವುದು ತಪ್ಪು. ವಿದ್ಯೆ, ಶಿಸ್ತು, ಸತತ ಪ್ರಯತ್ನ ಮತ್ತು ಗುರಿ ಇದ್ದರೆ ಸಾಧನೆ ಸಾಧ್ಯ. ಸಂಪಾದನೆಯ ಒಂದಷ್ಟು ಭಾಗವನ್ನು ಸಮಾಜಕ್ಕೆ ನೀಡಿದರೆ ಸಮಾಜ ನಮ್ಮನ್ನು ಗೌರವಿಸುತ್ತದೆ’’ ಎಂದರು.

ಸಚಿವರಿಗೆ ಮನವಿ: ಜಿಲ್ಲೆಯ ರೈತ ಹೋರಾಟ ಸಮಿತಿ ಅಧ್ಯಕ್ಷ ಕೆ.ಬಿ.ಸುರೇಶ್ , ಮಾಜಿ ಸಚಿವರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್ ಅವರು ಸಿ ಆ್ಯಂಡ್ ಡಿ ಸಮಸ್ಯೆ, ಕಸ್ತೂರಿ ರಂಗನ್ ವರದಿ ಅನುಷ್ಠಾನದ ಬಾಧಕಗಳ ಬಗ್ಗೆ ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡಿಕೊಟ್ಟರು.

ಶಾಸಕ ಡಾ.ಮಂತರ್ ಗೌಡ, ಮಾಜಿ ಸಚಿವ ಸಾ.ರಾ.ಮಹೇಶ್ , ಮಾಜಿ ಶಾಸಕ ಮಹಾದೇವ್ , ಮಾಜಿ ಎಂಎಲ್ ಸಿ ಎಸ್ .ಜಿ.ಮೇದಪ್ಪ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಘುಗೌಡ, ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಎಚ್ .ಎ.ನಾಗರಾಜ್ , ರೈತ ಸಂಘದ ಜಿಲ್ಲಾಉಪಾಧ್ಯಕ್ಷ ಜಿ.ಎಂ.ಹೂವಯ್ಯ, ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್ , ಜೆಡಿಎಸ್ ತಾಲೂಕು ಅಧ್ಯಕ್ಷ ಸಿ.ಎಸ್ .ನಾಗರಾಜ್ , ಪ್ರಮುಖರಾದ ಸಂಕೇತ್ ಪೂವಯ್ಯ, ಕೆ.ಎಂ.ಲೋಕೇಶ್ , ಎಸ್ .ಎಂ.ಚಂಗಪ್ಪ, ಜಿ.ವಿ.ರವಿಕುಮಾರ್ ಮತ್ತಿತರರು ಇದ್ದರು.

ಈ ದೇಶ ಉಳಿದಿರುವುದು ರೈತರಿಂದಲೇ. ಮುಂದೆಯೂ ಕಾಪಾಡುವವರು ರೈತರೇ. ಹವಾಮಾನ ವೈಪರೀತ್ಯದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಮುಂದೊಂದು ದಿನ ರೈತರಿಗೂ ಒಳ್ಳೆಯ ದಿನಗಳು ಬರುತ್ತವೆ. ಕೃಷಿ ಭೂಮಿಯನ್ನು ಎಲ್ಲರೂ ರಕ್ಷಿಸಿಕೊಳ್ಳಬೇಕು. ಇಂದು ರೈತರ ಮಕ್ಕಳಿಗೆ ಹೆಣ್ಣು ಕೊಡುವುದಿಲ್ಲಎಂಬ ಮಾತಿದೆ. ಮುಂದೊಂದು ದಿನ ನಗರದವರು ರೈತರ ಮಕ್ಕಳಿಗೆ ಹೆಣ್ಣು ಕೊಡಲು ಸರದಿಯಲ್ಲಿನಿಲ್ಲುತ್ತಾರೆ.

-ಎಚ್ .ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ

ರೈತರ ಭೂ ಸಮಸ್ಯೆ ಬಗೆಹರಿಸುವ ಕೆಲಸ ರಾಜಕೀಯ ರಹಿತವಾಗಿರಬೇಕು. ಸೂಕ್ಷ್ಮ ವಿಷಯಗಳನ್ನು ಸ್ವಾರ್ಥಕ್ಕಾಗಿ ರಾಜಕೀಯಕ್ಕೆ ಬಳಸಿದರೆ ರೈತರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಸಿ ಆ್ಯಂಡ್ ಡಿ ಹೋರಾಟ ರಾಜಕೀಯ ರಹಿತವಾಗಿರಬೇಕು. ರಾಜ್ಯ ಸರಕಾರ ರೈತರ ಸಂಕಷ್ಟ ಪರಿಹರಿಸಲು ಎಲ್ಲರೀತಿಯಲ್ಲೂಪ್ರಯತ್ನಿಸುತ್ತಿದೆ. ಭೂಮಿ ಉಳಿಸಿಕೊಳ್ಳಲು ಎಲ್ಲರೂ ಒಗ್ಗಟ್ಟಿನಿಂದ ಹೋರಾಡೋಣ.

-ಡಾ.ಮಂತರ್ ಗೌಡ, ಶಾಸಕ

ಎಂಡಿಕೆ22ಎಸ್ ಪಿಟಿ6-ಸೋಮವಾರಪೇಟೆ ಪಿಎಂಶ್ರೀ ಶಾಲಾ ಮೈದಾನದಲ್ಲಿನಡೆದ ಹರಪಳ್ಳಿ ರವೀಂದ್ರ ಅವರ ಜೀವನಚರಿತ್ರೆ ಕೃತಿ ಲೋಕಾರ್ಪಣೆ ಹಾಗೂ ರೈತ ಸಮಾವೇಶವನ್ನು ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿ ಉದ್ಘಾಟಿಸಿದರು.

ಎಂಡಿಕೆ22ಎಸ್ ಪಿಟಿ7--ಸೋಮವಾರಪೇಟೆ ಪಿಎಂಶ್ರೀ ಶಾಲಾ ಮೈದಾನದಲ್ಲಿನಡೆದ ರವೀಂದ್ರ ಅವರ ಜೀವನ ಚರಿತ್ರೆ ಕೃತಿಯನ್ನು ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿ ಲೋಕಾರ್ಪಣೆ ಮಾಡಿದರು.