ದುಶ್ಚಟಗಳಿಂದ ಆರೋಗ್ಯ, ಆರ್ಥಿಕ ಪರಿಸ್ಥಿತಿ ಹಾಳಾಗುವುದರ ಜತೆಗೆ ಮಾನಸಿಕ ನೆಮ್ಮದಿ ಕೆಡುತ್ತದೆ. ಆರೋಗ್ಯವೇ ನಿಜವಾದ ಭಾಗ್ಯವಾಗಿದೆ ಎಂದು ಜಮಖಂಡಿ ಓಲೆಮಠದ ಶ್ರೀ ಆನಂದ ದೇವರು ಹೇಳಿದರು.ಸಮೀಪದ ಸತ್ತಿ ಗ್ರಾಮದ ಲಿಂ. ಶ್ರೀ ಬಾಳಕೃಷ್ಣ ಮಹಾರಾಜರ 29 ನೇ ಪುಣ್ಯಾರಾಧನೆ ಅಂಗವಾಗಿ ಶನಿವಾರ ಜರುಗಿದ ಅಧ್ಯಾತ್ಮಿಕ ಪ್ರವಚನ ಹಾಗೂ ದುಶ್ಚಟಗಳ ವಿರುದ್ಧ ಜನ ಜಾಗೃತಿ ಯಾತ್ರೆ ಉದ್ಘಾಟನೆ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು. ‘‘ಉಜ್ವಲ ಭವಿಷ್ಯಕ್ಕಾಗಿ ಯುವ ಪೀಳಿಗೆ ದುಶ್ಚಟಗಳಿಂದ ಶಾಶ್ವತ ದೂರವಿರಬೇಕು,’’ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜನವಾಡ ಶ್ರೀ ಅಲ್ಲಮಪ್ರಭು ಆಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ‘‘ಭಕ್ತರು ಸತ್ಕಾರ್ಯಗಳನ್ನು ಮಾಡಲು ಸಮಯಕ್ಕಾಗಿ ಕಾಯಬೇಕಿಲ್ಲ. ಅನುಕೂಲವಿದ್ದಾಗ ಒಳ್ಳೆಯ ಕಾರ್ಯಗಳನ್ನು ಮಾಡಿ ಎಲ್ಲರಿಗೂ ಮಾದರಿಯಾಗಬೇಕು,’’ ಎಂದರು.
ದಾದಾಗೌಡ ಪಾಟೀಲ, ಮಲ್ಲಪ್ಪ ಬ್ಯಾಳಗೌಡರ, ಅಶೋಕ ಶೇಟೆ, ಅಪ್ಪಾಸಾಬ ಬೆಳ್ಳಗಿ, ಪ್ರಭಾಕರ ಜಗದೇವ, ಮಲ್ಲಪ್ಪ ಹಂಚಿನಾಳ, ಮಹಾದೇವಗೌಡ ಪಾಟೀಲ, ಅಶೋಕ ಜಗದೇವ, ಶಂಕರ ಮಟ್ಟೆಪ್ಪನವರ, ಆನಂದಕುಮಾರ ಪಾಟೀಲ, ಬಸಪ್ಪ ದಳವಾಯಿ, ಶಿವಪುತ್ರ ಬಾಡಗಿ, ಅಪ್ಪಾಸಾಬ ಗಂಗಪ್ಪನವರ, ಸುರೇಶ ಬಿರಡಿ, ದಾನಪ್ಪ ಕೋರಿ, ಈಶ್ವರ ಕಾಳಪ್ಪನವರ, ನೀಲಕಂಠ ಹಂಚಿನಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಲಾವಿದರಾದ ಶ್ರೀಶೈಲ ಜಕ್ಕಪ್ಪನವರ ಹಾಗೂ ಈರಣ್ಣ ಮಠಪತಿ ಸಂಗೀತ ಸೇವೆ ಸಲ್ಲಿಸಿದರು.
-22 ಎನ್ ಡಿಆರ್ 1
ಸತ್ತಿ ಗ್ರಾಮದ ಲಿಂ. ಶ್ರೀ ಬಾಳಕೃಷ್ಣ ಮಹಾರಾಜರ ಪುಣ್ಯಾರಾಧನೆ ನಿಮಿತ್ತ ಆಯೋಜಿಸಿದ್ದ ಆಧ್ಯಾತ್ಮಿಕ ಪ್ರವಚನ ಹಾಗೂ ದುಶ್ಚಟಗಳ ವಿರುದ್ಧ ಜನ ಜಾಗೃತಿ ಯಾತ್ರೆಯನ್ನು ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಆನಂದ ದೇವರು ಉದ್ಘಾಟಿಸಿದರು.