‘ಜಾತಿ ಕೇಳದ ಏಕೈಕ ಸಂಘಟನೆ ಆರ್ ಎಸ್ ಎಸ್ ’ ಎಲ್ಲಮಾಹಿತಿ ಪಡೆದರೂ ಜಾತಿಯನ್ನು ಕೇಳದ ಏಕೈಕ ಸ

Contributed by: nagarajmadguni@gmail.com|Vijaya Karnataka•
Vijay Karnataka
ವಿಕ ಸುದ್ದಿಲೋಕ ಯಲ್ಲಾಪುರ

ಸಂಘ ಸಂಘಟನೆ ಸಂಸ್ಥೆ ಎಂದಾಗ ಅನೇಕ ಸಂಘಟನೆ ಕಣ್ಮುಂದೆ ಬರುತ್ತದೆ. ಎಲ್ಲಸಂಘಟನೆಗಳಿಗೆ ತಮ್ಮದೇ ಆದ ಗುರಿಗಳಿವೆ. ತಮ್ಮ ಬೇಡಿಕೆ ಈಡೇರಿಕೆಗೆ ಹೋರಾಟ ನಡೆಸುತ್ತಾರೆ. ಆರ್ ಎಸ್ ಎಸ್ ಯಾವುದೇ ಬೇಡಿಕೆ ಇಟ್ಟುಕೊಂಡ ಹುಟ್ಟಿಕೊಂಡ ಸಂಘಟನೆ ಅಲ್ಲಎಂದು ಉತ್ತರ ಕರ್ನಾಟಕ ಪ್ರಾಂತದ ಸಹ ಬೌದ್ಧಿಕ ಪ್ರಮುಖ ರಾಮಚಂದ್ರ ಎಡಗೆ ಹೇಳಿದರು.
ಪಟ್ಟಣದ ವೈಟಿಎಸ್ ಎಸ್ ಮೈದಾನದಲ್ಲಿಭಾನುವಾರ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥ ಸಂಚಲನದ ನಂತರ ಸಾರ್ವಜನಿಕ ಸಭೆಯಲ್ಲಿಪ್ರಮುಖ ವಕ್ತಾರರಾಗಿ ಅವರು ಮಾತನಾಡಿದರು.

‘‘ಅಂದಿನ 33 ಕೋಟಿ ಜನರನ್ನು ಕೆಲವೇ ಸಾವಿರ ಬ್ರಿಟಿಷರು ಆಳಿದರು. ಅವರಿಗೆ ಸಹಾಯ ನೀಡಿದವರೂ ನಾವೇ. ಮನೆ ಮನೆ ತಿರುಗಿ ತೆರಿಗೆ ಸಂಗ್ರಹಿಸಿ ನೀಡಿದವರು. ಹೋರಾಟಗಾರರ ಸುಳಿವು ನೀಡಿ ಹಿಡಿದುಕಟ್ಟವರೂ ನಮ್ಮವರೇ. ಇದು ನಮ್ಮ ದೇಶದ ದಾರುಣ್ಯ ಇತಿಹಾಸವಾಗಿದೆ. ಹಿಂದೂ ಸಮಾಜದ ಜಾತೀಯತೆ, ಅಸ್ೊ್ರಶ್ಯತೆ ತೊಡೆದು ಹಾಕಲು ಸಂಘ ಜನ್ಮ ತಾಳಿದೆ. ಎಲ್ಲಜಾತಿ, ಸಮುದಾಯದ ಹಿಂದೂಗಳ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಎಲ್ಲಮಾಹಿತಿ ಪಡೆದರೂ ಜಾತಿಯನ್ನು ಕೇಳದ ಏಕೈಕ ಸಂಘಟನೆ ಸಂಘ. ಸಂಘಕ್ಕೆ ಯಾವುದೆ ಆಸ್ತಿಯಿಲ್ಲ, ಕಾರ್ಯಕರ್ತರೇ ಸಂಘದ ಆಸ್ತಿ’’ ಎಂದರು.

ಮಾಜಿ ಸೈನಿಕ ಮೋಹನ ನಾಯಕ ‘‘ಸೇನೆಗೆ ಸೇರಿಯೇ ದೇಶ ಸೇವೆ ಮಾಡಬೇಕೆಂದಿಲ್ಲ. ನಿಸ್ವಾರ್ಥ ಸೇವೆ ನಮ್ಮದಾಗಿರಬೇಕು. ಸಮವಸ್ತ್ರಕ್ಕೆ ಸಿಗುವ ಗೌರವ ಅಪಾರ. ಸಮವಸ್ತ್ರ ಧರಿಸಿದಾಗ ನಮ್ಮಲ್ಲಿ ಸೇವೆಯ ಶ್ರದ್ಧೆ ಉತ್ಸಾಹ ಮೂಡುತ್ತದೆ’’ ಎಂದರು.

ಮಂಜು ಹಿರೇಮಠ ಸ್ವಾಗತಿಸಿದರು. ರಾಜಶೇಖರ ದೂಳಿ ವಂದಿಸಿದರು.

ಸಭಾ ಕಾರ್ಯಕ್ರಮದ ಪೂರ್ವದಲ್ಲಿ ವೈಟಿಎಸ್ ಎಸ್ ಮೈದಾನದಿಂದ ಹೊರಟ ಸ್ವಯಂಸೇವಕರ ಆಕರ್ಷಕ ಪಥಸಂಚಲನ ಪಟ್ಟಣದ ಪ್ರಮುಖ ಬೀದಿಗಳಲ್ಲಿಸಂಚರಿಸಿತು.ಪೊಲೀಸರು ಬಿಗಿ ಬಂದೋಬಸ್ ್ತ ಏರ್ಪಡಿಸಿದ್ದರು.

ಪೋಟೊ :

22ವೈಎಲಪಿ1ಎ

ಯಲ್ಲಾಪುರದಲ್ಲಿಆರ್ ಎಸ್ ಎಸ್ ಪಥ ಸಂಚಲನ ನಡೆಯಿತು.