ಟೊಮೇಟೊ ತುಂಬಿದ್ದ ಕ್ಯಾಂಟರ್ ಪಲ್ಟಿ, ಸಂಚಾರ ವ್ಯತ್ಯಯ

Contributed by: manjuvkpresssdl@gmail.com|Vijaya Karnataka•
Vijay Karnataka
ವಿಕ ಸುದ್ದಿಲೋಕ ಶಿಡ್ಲಘಟ್ಟ

ಶಿಡ್ಲಘಟ್ಟ-ಚಿಕ್ಕಬಳ್ಳಾಪುರ ಮಾರ್ಗದ ರಾಷ್ಟ್ರೀಯ ಹೆದ್ದಾರಿ-234ರ ಲಕ್ಕಹಳ್ಳಿ ಗೇಟ್ ನಲ್ಲಿಟೊಮೆಟೊ ಬಾಕ್ಸ್ ಗಳನ್ನು ತುಂಬಿಕೊಂಡು ಸಾಗುತ್ತಿದ್ದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು.
ಆಂಧ್ರದ ಅನಂತಪುರದಿಂದ ಚಿಕ್ಕಬಳ್ಳಾಪುರ-ಶಿಡ್ಲಘಟ್ಟ ಮಾರ್ಗವಾಗಿ ಚಿಂತಾಮಣಿ ಕಡೆಗೆ ತೆರಳುತ್ತಿದ್ದ ಕ್ಯಾಂಟರ್ ಎದುರಿನಿಂದ ಬರುತ್ತಿದ್ದ ಕಾರಿಗೆ ದಾರಿ ನೀಡಲು ಯತ್ನಿಸಿದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿ ಬಿದ್ದಿದೆ. ಇದರಿಂದ ಕ್ಯಾಂಟರ್ ನಲ್ಲಿದ್ದ 300ಕ್ಕೂ ಹೆಚ್ಚು ಟೊಮೇಟೊ ಬಾಕ್ಸ್ ಗಳು ಹಾಗೂ ಟೊಮೇಟೊ ರಸ್ತೆಯಲ್ಲಿಚೆಲ್ಲಾಪಿಲ್ಲಿಯಾಗಿ ಬಿದ್ದವು. ಇದರಿಂದ ರಸ್ತೆಯಲ್ಲಿಬೇರೆ ವಾಹನಗಳು ಸಂಚರಿಸಲು ಸಾಧ್ಯವಾಗಲಿಲ್ಲ. ವಿಷಯ ತಿಳಿದು 112 ತುರ್ತು ವಾಹನ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.

22ಎಸ್ ಡಿಎಲ್ 4

ಶಿಡ್ಲಘಟ್ಟ ತಾಲೂಕು ಲಕ್ಕಹಳ್ಳಿ ಗೇಟ್ ಬಳಿ ಕ್ಯಾಂಟರ್ ಮಗುಚಿ ಬಿದ್ದು ಕ್ಯಾಂಟರ್ ನಲ್ಲಿದ್ದ ಟೊಮೇಟೊ ಬಾಕ್ಸ್ ಗಳು, ಟೊಮೇಟೊ ರಸ್ತೆಯಲ್ಲಿಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು.