ಧರ್ಮಶಾಲಾ: ‘‘ಪ್ರಜಾಪ್ರಭುತ್ವದಲ್ಲಿಸಾಂವಿಧಾನಿಕ ಸಂಸ್ಥೆಗಳ ನಿರ್ಧಾರಗಳನ್ನು ಟೀಕಿಸುವ ಹಕ್ಕು ನಾಗರಿಕರಿಗೆ ಇದ್ದರೂ, ಆ ಸಂಸ್ಥೆಗಳನ್ನೇ ಗುರಿಯಾಗಿಸಿ ದಾಳಿ ನಡೆಸುವುದನ್ನು ತಪ್ಪಿಸಬೇಕು,’’ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಪ್ರತಿಪಾದಿಸಿದ್ದಾರೆ.
ಭಾನುವಾರ ನಡೆದ ಹಿಮಾಚಲ ಪ್ರದೇಶ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಎಚ್ ಪಿ) ಘಟಿಕೋತ್ಸವದಲ್ಲಿಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ‘‘ ನಿರ್ಧಾರ ಹಾಗೂ ಅದರ ಹಿಂದಿರುವ ಸಂಸ್ಥೆಯ ನಡುವಿನ ವ್ಯತ್ಯಾಸವನ್ನು ಜನರು ಹಲವು ಬಾರಿ ಗುರುತಿಸಲು ವಿಫಲರಾಗುತ್ತಾರೆ. ಇಂತಹ ಪ್ರವೃತ್ತಿ ಪ್ರಜಾಪ್ರಭುತ್ವಕ್ಕೆ ಆಧಾರವಾಗಿರುವ ಸಂಸ್ಥೆಗಳ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಕುಗ್ಗಿಸುವ ಅಪಾಯವಿದೆ,’’ ಎಂದು ಸಿಜೆಐ ಅಭಿಪ್ರಾಯಪಟ್ಟರು.ಸಿಜೆಐ ವಿರುದ್ಧದ ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ವಕೀಲರೊಬ್ಬರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿದ ಕೆಲವೇ ದಿನಗಳಲ್ಲಿನ್ಯಾ. ಸೂರ್ಯಕಾಂತ್ ಅವರ ಈ ಹೇಳಿಕೆಯು ಮಹತ್ವ ಪಡೆದುಕೊಂಡಿದೆ. ಘಟಿಕೋತ್ಸವ ಭಾಷಣದಲ್ಲಿಹಿಮಾಲಯ ಪರ್ವತ ಶ್ರೇಣಿಯನ್ನು ಉದಾಹರಿಸಿದ ಸಿಜೆಐ, ಗುರಿ ತಲುಪುವ ಹಾದಿ ಯಾವಾಗಲೂ ನೇರವಾಗಿರುವುದಿಲ್ಲ, ತಾಳ್ಮೆ ಮತ್ತು ಸಹಕಾರದಿಂದ ಮುನ್ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.