ಸದನದಲ್ಲಿಮಹಿಳೆ ಇಲ್ಲದಿರುವುದು ಹೆಣ್ಣು ಕುಲಕ್ಕೆ ಅಗೌರವ: ಡಾ.ನಾಗಲಕ್ಷಿತ್ರ್ಮೕ ಚೌಧರಿ

Contributed by: pramod.harikant@timesofindia.com|Vijaya Karnataka•
Vijay Karnataka
ಮಹಿಳೆಗೆ ಸಚಿವ ಸ್ಥಾನ ನೀಡಲು ಆಗ್ರಹ

ವಿಕ ಸುದ್ದಿಲೋಕ ಕಾರವಾರ
ಮಹಿಳೆಯರು ಇಲ್ಲದೇ ಸದನ ನಡೆಸಬಾರದು. ಅದೊಂದು ರೀತಿ ಹೆಣ್ಣು ಕುಲಕ್ಕೆ ಅಗೌರವ. ಸಂಪುಟದಲ್ಲಿಮಹಿಳೆಗೆ ಸ್ಥಾನ ನೀಡದೇ ಇರುವುದನ್ನು ಖಂಡಿಸುತ್ತೇನೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷಿತ್ರ್ಮೕ ಚೌಧರಿ ಹೇಳಿದರು.

ಭಾನುವಾರ ನಗರದಲ್ಲಿಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘‘ಸಂಪುಟದಲ್ಲಿಮಹಿಳೆಯರಿಗೆ ಸ್ಥಾನ ನೀಡುವಂತೆ ಸರಕಾರಕ್ಕೆ ಪತ್ರ ಬರೆದಿದ್ದೇನೆ. ಆದಷ್ಟು ಬೇಗ ಮಹಿಳೆಯರಿಗೆ ಸಚಿವ ಸ್ಥಾನ ಕೊಟ್ಟು ಅವರನ್ನು ಗೌರವಿಸಬೇಕು. ಮಹಿಳಾ ಸಚಿವರು ಇಲ್ಲದೇ ಐದು ತಿಂಗಳು ಆಗುತ್ತಿದೆ,’’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯದಲ್ಲಿಗದ್ದಲ ಎಬ್ಬಿಸಿದ್ದ ಸ್ಟಿಂಗ್ ಆಪರೇಷನ್ ಕುರಿತು ಪ್ರತಿಕ್ರಿಯಿಸಿದ ಅವರು, ‘‘ಮಹಿಳಾ ಆಯೋಗಕ್ಕೆ ಸ್ವತಂತ್ರವಾಗಿ ತನಿಖೆ ನಡೆಸುವ ಅಧಿಕಾರ ಇಲ್ಲ. ಅಲ್ಲದೆ, ವಿಷಯ ದೊಡ್ಡದಾಗುತ್ತಿದ್ದಂತೆಯೇ ಕೋರ್ಟ್ ಗೆ ಹೋದರು. ಹಾಗಾಗಿ ಆಯೋಗದಿಂದ ಪ್ರತ್ಯೇಕವಾಗಿ ತನಿಖೆಗೆ ಶಿಫಾರಸು ಮಾಡುವ ಪ್ರಸಂಗ ಎದುರಾಗಲಿಲ್ಲ. ದೂರು ಕೊಟ್ಟಿದ್ದರೆ ತನಿಖೆಗೆ ಬರೆಯಬಹುದಿತ್ತು,’’ ಎಂದರು.

‘‘ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗಿ ದಾಖಲಾಗುತ್ತಿದೆ. ಬಡವರು ಮತ್ತು ದಲಿತರ ಮೇಲೆ ಇಂಥ ದೌರ್ಜನ್ಯ ಹೆಚ್ಚು. ಉತ್ತರ ಕರ್ನಾಟಕದಲ್ಲಿಜನ ಗುಳೆ ಹೋಗುತ್ತಾರೆ. ಮಕ್ಕಳನ್ನು ಮನೆಯಲ್ಲಿಬಿಟ್ಟು ಕೆಲಸಕ್ಕೆ ಹೋಗುತ್ತಾರೆ. ದೌರ್ಜನ್ಯಗಳು ಹೆಚ್ಚಾಗಿ ಪರಿಚಯಸ್ಥರಿಂದಲೇ ಆಗಿರುತ್ತದೆ. ಅಪರಿಚಿತರು ಬಹಳ ಕಡಿಮೆ. ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರಿಗೆ ಆರ್ಥಿಕ ಪರಿಹಾರ ಮತ್ತು ಪುನರ್ವಸತಿ ಕೊಡಬೇಕಾಗುತ್ತದೆ,’’ ಎಂದರು.

‘‘ಉತ್ತರ ಕನ್ನಡ ಜಿಲ್ಲೆಯಲ್ಲಿಭ್ರೂಣ ಲಿಂಗ ಪತ್ತೆ, ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಪ್ರಮಾಣ ಕಡಿಮೆ ಇದೆ. ಆದರೆ, ಹೆಣ್ಣು ಮಕ್ಕಳು ಕಾಣೆಯಾಗುವ ಪ್ರಕರಣ ಹೆಚ್ಚಾಗಿದೆ. ಅದರ ಬಗ್ಗೆ ವರದಿ ಪಡೆಯುತ್ತೇನೆ,’’ ಎಂದರು.

-------