ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಿಸುವ ಕರಡು ಪಟ್ಟಿ ಪ್ರಕಟ

Contributed by: ajitha.m@timesofindia.com|Vijaya Karnataka•
Vijay Karnataka
ಉಡುಪಿ: ಕುಂದಾಪುರ ತಾಲೂಕು ಶಂಕರನಾರಾಯಣ ಉಪ ನೋಂದಣಿ ಕಚೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳನ್ನು ಪ್ರಸಕ್ತ ಸಾಲಿನಲ್ಲಿಪರಿಷ್ಕರಿಸಲಾಗಿದ್ದು, ಪರಿಷ್ಕೃತ ಮಾರ್ಗಸೂಚಿ ದರಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಕುಂದಾಪುರ ತಾಲೂಕು ಕಚೇರಿ ಮತ್ತು ಶಂಕರನಾರಾಯಣ ಉಪನೋಂದಣಿ ಕಚೇರಿ ಸೂಚನಾ ಫಲಕಗಳಲ್ಲಿಪ್ರಕಟಿಸಲಾಗಿದೆ. ಪರಿಷ್ಕೃತ ದರಪಟ್ಟಿಯ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿಡಿ.3ರೊಳಗಾಗಿ ಉಪನೋಂದಣಿ ಕಚೇರಿ, ಶಂಕರನಾರಾಯಣ ಇಲ್ಲಿಗೆ ಸಲ್ಲಿಸಬಹುದಾಗಿದೆ ಎಂದು ಶಂಕರನಾರಾಯಣ ಉಪನೋಂದಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.