ಸ್ವರ್ಣವಲ್ಲೀ

Contributed by: keregaddemurthy@gmail.com|Vijaya Karnataka•
23rd november
ಸರ್ವದಂಪತಿ ಶಿಬಿರದ ಸಮಾರೋಪದಲ್ಲಿಸ್ವರ್ಣವಲ್ಲೀ ಶ್ರೀ ಸಲಹೆ

ಭ್ರೂಣಹತ್ಯೆ ತಡೆಯಿರಿ, ವಿಚ್ಛೇದನ ದೂರವಿಡಿ
ಕ್ವೋಟ್

ವಿವಾಹ ಸಂಬಂಧವನ್ನು ಗೌರವಿಸಿ, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಗೆ ವಿಚ್ಛೇದನದ ಮೂಲಕ ಪರಿಹಾರ ಕಂಡುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬಾರದು. ಪರಸ್ಪರ ಹೊಂದಾಣಿಕೆ, ತಾಳ್ಮೆ ಮತ್ತು ಪ್ರೀತಿಯಿಂದ ಸಂಸಾರವನ್ನು ಮುನ್ನಡೆಸಬೇಕು.

-ಸ್ವರ್ಣವಲ್ಲೀ ಶ್ರೀ

ವಿಕ ಸುದ್ದಿಲೋಕ ಶಿರಸಿ

ಕುಟುಂಬದಲ್ಲಿಧಾರ್ಮಿಕ ಸಂಸ್ಕಾರ, ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಜವಾಬ್ದಾರಿಯ ಅರಿವು ಮೂಡಿಸುವ ಮೂಲಕ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಗೆ ದಂಪತಿ ಮಹತ್ವದ ಪಾತ್ರ ವಹಿಸಬೇಕು ಎಂದು ಸೊಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ನಗರದ ಮಾರಿಕಾಂಬಾ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸರ್ವದಂಪತಿಗಳ ಶಿಬಿರದ ಸಮಾರೋಪದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನುಡಿದರು.

‘‘ದಂಪತಿಗಳಲ್ಲಿಧರ್ಮದ ಕುರಿತ ಅರಿವು ಮತ್ತು ಕುಟುಂಬದ ಜವಾಬ್ದಾರಿಯ ಪ್ರಜ್ಞೆ ಬೆಳೆದಾಗ ಮಾತ್ರ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ. ಧರ್ಮ ರಕ್ಷಣೆಯ ಉದ್ದೇಶದಿಂದ ಇಂತಹ ದಂಪತಿ ಶಿಬಿರಆಯೋಜನೆ ಅತ್ಯಂತ ಮಹತ್ವದ್ದಾಗಿದೆ. ಭ್ರೂಣಹತ್ಯೆಯಂತಹ ಪಾಪಕೃತ್ಯಗಳಿಗೆ ಯಾರೂ ಮುಂದಾಗಬಾರದು. ಮಕ್ಕಳು ಜನಿಸಿದ ಬಳಿಕ ಅವರಿಗೆ ಉತ್ತಮ ಶಿಕ್ಷಣದ ಜತೆಗೆ ಧಾರ್ಮಿಕ, ನೈತಿಕ ಹಾಗೂ ಸಾಂಸ್ಕೃತಿಕ ಸಂಸ್ಕಾರ ನೀಡುವುದು ಪಾಲಕರ ಕರ್ತವ್ಯ. ಮಕ್ಕಳಿಗೆ ನಮ್ಮ ಧರ್ಮಗ್ರಂಥಗಳ ಪರಿಚಯ ಮಾಡಿಸಬೇಕು. ಅವುಗಳಲ್ಲಿನ ಮೌಲ್ಯಗಳನ್ನು ಬದುಕಿನಲ್ಲಿಅಳವಡಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ಮುಂದಿನ ಪೀಳಿಗೆಗೆ ಧರ್ಮ ಮತ್ತು ಸಂಸ್ಕೃತಿಯ ಪರಂಪರೆಯನ್ನು ತಲುಪಿಸುವ ಹೊಣೆಗಾರಿಕೆ ಪ್ರತಿಯೊಂದು ಕುಟುಂಬದ ಮೇಲಿದೆ’’ ಎಂದು ತಿಳಿಸಿದರು.

ಶಿಬಿರದಲ್ಲಿವಿವಿಧ ಗೋಷ್ಠಿಗಳು ನಡೆದವು. ಡಾ. ವಸಂತ ಶಾಸ್ತ್ರಿ, ಸೀತಾರಾಮ ಭಟ್ಟ, ಮತ್ತಿಗಾರ ವಿನಾಯಕ ಹೆಬ್ಬಾರ ಹಾಗೂ ಹುಬ್ಬಳ್ಳಿಯ ಕೃಷ್ಣ ದೇಶಪಾಂಡೆ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ದಾಂಪತ್ಯ ಜೀವನ, ಕುಟುಂಬ ವ್ಯವಸ್ಥೆ, ಧಾರ್ಮಿಕ ಮೌಲ್ಯಗಳು ಹಾಗೂ ಸಾಮಾಜಿಕ ಜವಾಬ್ದಾರಿಗಳ ಕುರಿತು ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು.

ಸಮಾರೋಪದಲ್ಲಿಮಾರಿಕಾಂಬಾ ದೇವಸ್ಥಾನದ ಉಪಾಧ್ಯಕ್ಷ ಅಶೋಕ ಪವಾರ, ಧರ್ಮದರ್ಶಿಗಳಾದ ಕೇಶವ ಹೆಗಡೆ, ವಿನಾಯಕ ಶೇಟ್ , ಗ್ರಾಮಾಭ್ಯುದಯದ ಅಧ್ಯಕ್ಷ ರಾಮಚಂದ್ರ ಹೆಗಡೆ, ಕಾರ್ಯದರ್ಶಿ ಸಂತೋಷ ಭಟ್ಟ, ಪ್ರಮುಖರಾದ ಮಂಜುನಾಥ ಹೆಗಡೆ, ಹೇಮಂತ ಹೆಗಡೆ, ಜಯಂತ ಹೆಗಡೆ, ಗುರುಪಾದ ಹೆಗಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಗ್ರಾಮಾಭ್ಯುದಯ ಸಂಸ್ಥೆಯ ನೇತೃತ್ವದಲ್ಲಿಹಾಗೂ ಮಾರಿಕಾಂಬಾ ದೇವಸ್ಥಾನದ ಸಹಕಾರದಲ್ಲಿಶಿಬಿರ ಆಯೋಜಿಸಲಾಗಿತ್ತು.

22ಎಸ್ಸಾರೆಸ್ 5

ಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿನಡೆದ ಸರ್ವದಂಪತಿಗಳ ಶಿಬಿರದ ಸಮಾರೋಪದಲ್ಲಿಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ ನುಡಿದರು.