*11 ಪ್ರಮುಖ ವೇದಿಕೆಗಳಲ್ಲಿನಾನಾ ಕಾರ ್ಯಕ್ರಮ | ಕಲಾ ರಸಿಕರಿಗೆ ಸಾಂಸ್ಕೃತಿಕ ರಸದೌತಣ | ವಿದ್ಯುತ್ ದೀಪಾಲಂಕಾರಗಳಿಂದ ನಗರ ಸಿಂಗಾರವಿಕ ಸುದ್ದಿಲೋಕ ಮೈಸೂರು
ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ನವರಾತ್ರಿಯ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಉತ್ಸುಕರಾಗಿದ್ದು, ‘ಅರಮನೆ ನಗರಿ’ ಮೈಸೂರು ವಿದ್ಯುತ್ ದೀಪಾಲಂಕಾರಗಳಿಂದ ಸಿಂಗಾರಗೊಂಡಿದೆ.
ದಸರಾ ಮಹೋತ್ಸವದ ಪ್ರಯುಕ್ತ ಅ.11ರಿಂದ 11 ದಿನಗಳ ಕಾಲ ನಾನಾ ಕಾರ್ಯಕ್ರಮಗಳು 21 ವೇದಿಕೆಗಳಲ್ಲಿನಡೆಯಲಿದ್ದು, ಅದರಲ್ಲಿ11 ವೇದಿಕೆಗಳಲ್ಲಿಸಾಂಸ್ಕೃತಿಕ ಕಾರ್ಯಕ್ರಮಗಳೇ ನಡೆಯಲಿವೆ. 500ಕ್ಕೂ ಹೆಚ್ಚು ಕಲಾತಂಡಗಳಿಂದ ಸಾವಿರಕ್ಕೂ ಹೆಚ್ಚು ಮಂದಿ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವ ಮೂಲಕ ಕಲಾ ರಸಿಕರಿಗೆ ಸಾಂಸ್ಕೃತಿಕ ರಸದೌತಣ ನೀಡಲಿದ್ದಾರೆ. ಕಾನೂನು ಸುವ್ಯವಸ್ಥೆಗೆ ಆರು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಜನಪ್ರತಿನಿಧಿಗಳ ದಂಡೇ ಮೈಸೂರಿನಲ್ಲಿಬೀಡುಬಿಡಲಿದೆ.
ದಸರಾ ಸಿರಿಯನ್ನು ಕಣ್ತುಂಬಿಕೊಳ್ಳಲು ಈಗಾಗಲೇ ದೇಶ-ವಿದೇಶಗಳಿಂದ ಪ್ರವಾಸಿಗರು ಸಾಂಸ್ಕೃತಿಕ ನಗರಿಗೆ ಆಗಮಿಸುತ್ತಿದ್ದು, ದಸರಾ ಕಾರ್ಯಕ್ರಮಗಳಲ್ಲಿಸಕ್ರಿಯವಾಗಿ ಪಾಲ್ಗೊಳ್ಳಲು ಕಾತರರಾಗಿದ್ದಾರೆ. ಈಗಾಗಲೇ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಯುವ ಜನತೆ ಮಾನಸ ಗಂಗೋತ್ರಿಯ ಬಯಲುರಂಗ ಮಂದಿರದಲ್ಲಿಆಯೋಜಿಸಿದ್ದ ‘ಯುವ ಸಂಭ್ರಮ’ ಸಾಂಸ್ಕೃತಿಕ ಉತ್ಸವದಲ್ಲಿಸಂಭ್ರಮಿಸಿದ್ದರು. ಇದೀಗ ಯುವ ದಸರಾದ ಸಡಗರದಲ್ಲಿಪಾಲ್ಗೊಳ್ಳಲು ಉತ್ಸುಕತೆಯಿಂದ ಕಾಯುತ್ತಿದ್ದಾರೆ.
ಕಲಾವಿದರ ದಂಡು: ಅಂಬಾ ವಿಲಾಸ ಅರಮನೆ ವೇದಿಕೆ, ನಗರದ ಹೊರವಲಯದಲ್ಲಿನಡೆಯುವ ಯುವ ದಸರಾ ವೇದಿಕೆಗಳಲ್ಲಿಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲು ರಾಷ್ಟ್ರ, ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರ ದಂಡೇ ಮೈಸೂರು ನಗರಕ್ಕೆ ಆಗಮಿಸಲಿದೆ. ನೃತ್ಯ, ಸಂಗೀತ, ನಾಟಕ, ಗಾಯನದ ಮೂಲಕ ಮೋಡಿ ಮಾಡಲಿದ್ದಾರೆ. ಮಹಾರಾಜ ಕಾಲೇಜು ಮೈದಾನದಲ್ಲಿಆಹಾರ ಮೇಳ, ಕುಪ್ಪಣ್ಣ ಪಾರ್ಕ್ನಲ್ಲಿಫಲಪುಷ್ಪ ಪ್ರದರ್ಶನ, ಡಿ.ದೇವರಾಜ ಅರಸ್ ವಿವಿಧೋದ್ದೇಶ ಕ್ರೀಡಾಂಗಣದಲ್ಲಿದಸರಾ ಕುಸ್ತಿ ಪಂದ್ಯಾವಳಿ, ಚಾಮರಾಜೇಂದ್ರ ಸರಕಾರಿ ದೃಶ್ಯಕಲಾ ಕಾಲೇಜಿನಲ್ಲಿಚಿತ್ರಕಲಾ ಶಿಬಿರ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿಪುಸ್ತಕ ಮೇಳ ನಡೆಯಲಿದೆ. ಅದೇ ರೀತಿ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟ, ಸಯ್ಯಾಜಿರಾವ್ ರಸ್ತೆ ಬಳಿ ದೀಪಾಲಂಕಾರ ಹಾಗೂ ವಸ್ತು ಪ್ರದರ್ಶನ ಮೈದಾನದಲ್ಲಿವಸ್ತು ಪ್ರದರ್ಶನಕ್ಕೆ ಚಾಲನೆ ಸಿಗಲಿದೆ.
ಆಕರ್ಷಕ ದೀಪಾಲಂಕಾರ: ದಸರೆ ಎಂದರೆ ಬೆಳಕಿನ ಹಬ್ಬ ಎಂದೇ ಕರೆಯಲಾಗುತ್ತದೆ. 21 ದಿನ ಮೈಸೂರು ನಗರದ ರಸ್ತೆ, ವೃತ್ತಗಳು ದೀಪಗಳಿಂದ ಬೆಳಗುತ್ತವೆ. ಈ ಬಾರಿ ನಗರದ 146 ಕಿ.ಮೀ., 123 ವೃತ್ತಗಳಿಗೆ ದೀಪಾಲಂಕಾರ ಮಾಡಲಾಗಿದೆ. 80 ಪ್ರತಿಕೃತಿಗಳಿಗೆ ಬೆಳಕಿನ ಸಿಂಗಾರ ತೊಡಿಸಲಾಗಿದೆ.
-----ಬಾಕ್ಸ್ -------
ಬೆಟ್ಟದಲ್ಲಿಬೃಹತ್ ವೇದಿಕೆ ನಿರ್ಮಾಣ
ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು ಈ ಹಿನ್ನೆಲೆಯಲ್ಲಿಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿದೆ. ಚಾಮುಂಡೇಶ್ವರಿ ದೇವಾಲಯದಲ್ಲಿಮುಂಭಾಗ ಶುಚಿ ಕಾರ್ಯ ನಡೆಸಲಾಗಿದೆ. ದೇವಾಲಯದ ಹೊರಗಡೆ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ವೇದಿಕೆ ಮುಂಭಾಗ 2 ಸಾವಿರಕ್ಕೂ ಹೆಚ್ಚಿನ ಆಸನದ ವ್ಯವಸ್ಥೆ ಮಾಡಲಾಗಿದ್ದು, ರಾಜ್ಯದ ಅನೇಕ ಮಠದ ಸುಮಾರು 200ಕ್ಕೂ ಹೆಚ್ಚು ಮಠಾಧೀಶರು ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿಭಾಗವಹಿಸಲಿದ್ದಾರೆ.
ಮೊದಲ ದಿನ ಏನೆಲ್ಲಾಕಾರ ್ಯಕ್ರಮವಿದೆ?
1. ಬೆಟ್ಟದಲ್ಲಿನಾಡದೇವತೆ ಚಾಮುಂಡೇಶ್ವರಿ ದೇವಿಯ ಅಗ್ರಪೂಜೆಯೊಂದಿಗೆ 2026ರ ದಸರಾ ಮಹೋತ್ಸವಕ್ಕೆ ಚಾಲನೆ (ಬೆಳಗ್ಗೆ 11.50ರಿಂದ 12.13ರೊಳಗೆ)
2. ಅರಮನೆ ಮುಂಭಾಗ ದಸರಾ ಸಾಂಸ್ಕೃತಿಕ ಕಾರ ್ಯಕ್ರಮಗಳ ಉದ್ಘಾಟನೆ ಮತ್ತು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ (ಸಂಜೆ 5 ಗಂಟೆ)
3. ಕುಪ್ಪಣ್ಣ ಪಾರ್ಕ್ನಲ್ಲಿಫಲಪುಷ್ಟ ಪ್ರದರ್ಶನಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಚಾಲನೆ (ಬೆಳಗ್ಗೆ 11.30)
4. ಲಿಂಗಾಂಬುಧಿ ಸಸ್ಯಶಾಸ್ತ್ರೀಯ ತೋಟದಲ್ಲಿಪುಷ್ಪ ಮೇಳ ಮತ್ತು ಸಸ್ಯ ತೋಟಕ್ಕೆ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯರಿಂದ ಉದ್ಘಾಟನೆ (ಮ.12.30)
5. ಮಹಾರಾಜ ಕಾಲೇಜು ಮೈದಾನದಲ್ಲಿಆಹಾರಮೇಳಕ್ಕೆ ಸಚಿವ ರಿಜ್ವಾನ್ ಅರ್ಷದ್ ಚಾಲನೆ. (ಸಂ.5)
6. ಡಿ.ದೇವರಾಜ ಅರಸ್ ವಿವಿಧೋದ್ದೇಶ ಕ್ರೀಡಾಂಗಣದಲ್ಲಿದಸರಾ ಕುಸ್ತಿ ಪಂದ್ಯಾವಳಿಗೆ ಸಿಎಂ ಡಿ.ಕೆ.ಶಿವಕುಮಾರ್ ಚಾಲನೆ (ಸಂ.4)
7. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿಕನ್ನಡ ಪುಸ್ತಕ ಮಾರಾಟ ಮೇಳಕ್ಕೆ ಸಚಿವ ಶಿವರಾಜ್ ಎಸ್ .ತಂಗಡಗಿ ಚಾಲನೆ (ಸಂ.5)
8. ಕಾವಾದಲ್ಲಿಲಲಿತಕಲೆ ಮತ್ತು ಕರಕುಶಲ ಶಿಬಿರಕ್ಕೆ ಸಚಿವ ಶಿವರಾಜ್ ಎಸ್ .ತಂಗಡಗಿ ಚಾಲನೆ. (ಸಂ.4.30)
9. ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಚಾಲನೆ (ಸಂ.4.30)
10. ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಕೆ.ಜೆ.ಜಾಜ್ ರ್ ಚಾಲನೆ