ರಂಭಾಪುರಿ ಶ್ರೀಗಳಿಗೆ ಭವ್ಯ ಸ್ವಾಗತ

Contributed by: raviraj.galagali@timesgroup.com|Vijaya Karnataka•
dharma program in bhadravati grand welcome to rambhapuri shri
ಜಮಖಂಡಿಯಲ್ಲಿಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ

ರಂಭಾಪುರಿ ಶ್ರೀಗಳಿಗೆ ಭವ್ಯ ಸ್ವಾಗತ
ವಿಕ ಸುದ್ದಿಲೋಕ ಜಮಖಂಡಿ

ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನಕ್ಕಾಗಿ ಶನಿವಾರ ನಗರಕ್ಕೆ ಆಗಮಿಸಿದ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಜಗದ್ಗುರುಗಳನ್ನು ಭವ್ಯವಾಗಿ ಸ್ವಾಗತಿಸಲಾಯಿತು.

ನಗರಕ್ಕೆ ಆಗಮಿಸಿದ ಶ್ರೀಗಳಿಗೆ ಮಾಲಾರ್ಪಣೆ ಮಾಡಿದ ಗಣ್ಯರು ಸಾರೋಟಿನಲ್ಲಿಕೂಡಿಸಿ ಮೆರವಣಿಗೆ ಮೂಲಕ ಬರಮಾಡಿಕೊಂಡರು. ವೀರಗಾಸೆ, ಭಜನಾ ಮಂಡಳಿ ತಂಡಗಳು, ಕುಂಭ ಹೊತ್ತು ಆರತಿಯೊಂದಿಗೆ ಮಹಿಳೆಯರು ಮೆರವಣಿಗೆಯಲ್ಲಿಸಾಗಿದರು.

ನಂತರ ಸ್ವಾಗತ ಸಮಾರಂಭದಲ್ಲಿಆಶೀರ್ವಚನ ನೀಡಿದ ಶ್ರೀಗಳು ‘‘ಭಾರತೀಯ ಸಂಸ್ಕೃತಿ, ಧಾರ್ಮಿಕ ಪರಂಪರೆಯಲ್ಲಿಶಕ್ತಿಯ ಆರಾಧನೆಗೆ ಅತ್ಯಂತ ಪವಿತ್ರ ಸ್ಥಾನವಿದೆ. ಧರ್ಮದ ರಕ್ಷಣೆ ಮತ್ತು ಅಧರ್ಮದ ವಿನಾಶ ದಸರಾ ಧರ್ಮ ಸಮ್ಮೇಳನದ ಮೂಲ ಗುರಿಯಾಗಿದೆ. ಜಗತ್ತಿನ ಸೃಷ್ಟಿ, ಸ್ಥಿತಿ ಮತ್ತು ಲಯಕ್ಕೆ ಮೂಲವಾಗಿರುವ ಪರಾಶಕ್ತಿಯು ಜಗನ್ಮಾತೆಯಾಗಿ ಆದಿಶಕ್ತಿಯಾಗಿ ನಾನಾ ರೂಪಗಳಲ್ಲಿಪೂಜೆಗೊಳ್ಳುತ್ತಾಳೆ. ಈ ಶಕ್ತಿಯೇ ಸಕಲ ಜೀವಿಗಳ ಬದುಕಿನ ಆಧಾರ ಹಾಗೂ ಧರ್ಮ ರಕ್ಷಣೆಯ ಮಹಾನ್ ಸಂಕೇತವಾಗಿದೆ’’ ಎಂದು ತಿಳಿಸಿದರು.

‘‘ಜಮಖಂಡಿಯಲ್ಲಿನಡೆಯಲಿರುವ ದಸರಾ ಧರ್ಮ ಸಮ್ಮೇಳನವು ಭಕ್ತಿ, ಸಂಸ್ಕೃತಿ, ಧರ್ಮನಿಷ್ಠೆ ಹಾಗೂ ಜನ ಸಾಮರಸ್ಯದ ಮಹಾಪರ್ವವಾಗಿ ಕಂಗೊಳಿಸಲಿದೆ. ದಸರಾ ನಾಡಹಬ್ಬ ಕೇವಲ ಸಂಭ್ರಮ, ಸಡಗರದ ಆಚರಣೆಯಲ್ಲ. ನಮ್ಮೊಳಗಿನ ದುರ್ಗುಣಗಳನ್ನು ಜಯಿಸುವ ಸಂಕಲ್ಪದ ದಿನಗಳಾಗಲಿ. ಕ್ರೋಧದ ಮೇಲೆ ಶಾಂತಿ, ದ್ವೇಷದ ಮೇಲೆ ಪ್ರೀತಿ, ಸ್ವಾರ್ಥದ ಮೇಲೆ ಸೇವೆಯ ಜಯವಾಗಲಿ’’ ಎಂದು ಹೇಳಿದರು.

ಯಡಿಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು, ಜಮಖಂಡಿ ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯರು, ಮುತ್ತಿನಕಂತಿ ಮಠದ ಶಿವಲಿಂಗ ಶಿವಾಚಾರ್ಯರು, ಮಳಲಿ ಮಠದ ಡಾ. ನಾಗಭೂಷಣ ಶಿವಾಚಾರ್ಯರು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಹೆಡಗಾಪುರ, ಕಮಡೊಳ್ಳಿ, ಕರ್ಜಗಿ, ಅಂಬಾಜೋಗಾಯಿ ಸೇರಿದಂತೆ ಹಲವಾರು ಮಠಾಧೀಶರು, ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಜಗದೀಶ ಗುಡಗುಂಟಿ, ಮುಖಂಡರು ಇದ್ದರು.

----

ರಂಭಾಪುರಿ ಸ್ವಾಮೀಜಿ-ಬಿಜಿಕೆ-10

ಜಮಖಂಡಿಗೆ ಶನಿವಾರ ಆಗಮಿಸಿದ ರಂಭಾಪುರಿ ಶ್ರೀಗಳ ಮೆರವಣಿಗೆ ಸಂಭ್ರಮದಿಂದ ನೆರವೇರಿತು.