ರಂಗನಾಥನ ಅನುಗ್ರಹದಿಂದಲೇ ಪ್ರಧಾನಿಯಾದೆ

Contributed by: prakashvkhsn@gmail.com|Vijaya Karnataka•
hd devegowda becomes chief minister with the blessings of ranganatha
ರಂಗನಾಥನ ಅನುಗ್ರಹದಿಂದಲೇ ಪ್ರಧಾನಿಯಾದೆ

*ಮಾವಿನಕೆರೆಯಲ್ಲಿಎಚ್ ಡಿಡಿ ಪೂಜೆ*ಕುಮಾರಸ್ವಾಮಿ, ರೇವಣ್ಣ ಸಾಥ್
ವಿಕ ಸುದ್ದಿಲೋಕ ಹಾಸನ

ಬೆಟ್ಟದ ರಂಗನಾಥನ ಅನುಗ್ರಹದಿಂದಲೇ ರಾಜಕೀಯ ಪ್ರವೇಶ ಮಾಡಿದೆ, ದೇಶ ಆಳುವ ಅವಕಾಶವೂ ಸಿಕ್ಕಿತು ಎಂದು ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡ ಹೇಳಿದರು.

ಮಹಾಲಯ ಅಮಾವಾಸ್ಯೆ, ಪಿತೃಪಕ್ಷ ಹಿನ್ನೆಲೆಯಲ್ಲಿಹೊಳೆನರಸೀಪುರ ತಾಲೂಕಿನ ಮಾವಿನಕೆರೆಯ ರಂಗನಾಥಸ್ವಾಮಿ ಹಾಗೂ ಹರದನಹಳ್ಳಿಯ ಈಶ್ವರ ಮನೆದೇವರಿಗೆ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಧಾನಿಯಾಗಿದ್ದಾಗ ಯಾರೂ ನನ್ನ ವಿರುದ್ಧ ಆರೋಪ ಮಾಡಲಿಲ್ಲ. ಹಣ ಹೊಡೆದರು ಎಂದು ಹೇಳಲಿಲ್ಲ. ಇದಕ್ಕೆಲ್ಲರಂಗನಾಥನ ಆಶೀರ್ವಾದವೇ ಕಾರಣ’ ಎಂದರು.

‘‘‘ನನಗೆ ವಯಸ್ಸಾಗಿದೆ. ಆದರೂ ಬೆಳಿಗ್ಗೆ, ಸಂಜೆ ಸ್ನಾನ ಮಾಡಿ ದೇವರ ಪೂಜೆ ಮಾಡುತ್ತೇನೆ. ಸಂಪೂರ್ಣ ರಂಗನಾಥ ಅಷ್ಟೋತ್ತರ ಹೇಳಲು ಆಗಲ್ಲ. ಶ್ಲೋಕದ ಉಚ್ಛಾರಣೆ ಸರಿಯಾಗಿ ಬರಲ್ಲ. ಹಾಗಾಗಿ ಒಂದು ಪ್ರಮುಖ ಶ್ಲೋಕ ಹೇಳಿದರೆ ಇಡೀ ಶ್ಲೋಕ ಹೇಳಿದಂತೆ ಎನ್ನುತ್ತಾರೆ’ ಎಂದರು.

ಪೂಜೆ ಬಳಿಕ ರಂಗನಾಥ ಪೂಜೆಯ ಅಷ್ಟೋತ್ತರ ಮಹತ್ವದ ಬಗ್ಗೆ ಅರ್ಚಕ ಸಂಪತ್ ರಾಜನ್ ಅವರಿಂದ ಶ್ಲೋಕದ ಅರ್ಥ ತಿಳಿದುಕೊಂಡರು. ಪುತ್ರರಾದ ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿ ಹಾಗೂ ಶಾಸಕ ಎಚ್ .ಡಿ.ರೇವಣ್ಣ ಪೂಜೆಯಲ್ಲಿಭಾಗಿಯಾಗಿದ್ದರು.