ನಗರದ ಬಿಎಂ ರಸ್ತೆ, ಕೃಷ್ಣ ಹೋಟೆಲ್ ಪಕ್ಕದ ತೆರೆದ ಮೈದಾನದಲ್ಲಿ‘ನ್ಯೂ ಇಂಡಿಯನ್ ಕ್ರಾಫ್ಟ್ ಶಾಪಿಂಗ್ ಎಕ್ಸ್ ಪೋ’ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿದೇಶದ ವಿವಿಧ ಭಾಗಗಳ 50 ಸಾವಿರಕ್ಕೂ ಹೆಚ್ಚು ಕರಕುಶಲ ಕಲಾವಿದರ ಉತ್ಪನ್ನಗಳು ಪ್ರದರ್ಶನ ಹಾಗೂ ಮಾರಾಟಕ್ಕೆ ಲಭ್ಯವಿರಲಿವೆ.
ಪ್ರದರ್ಶನಲ್ಲಿಲಕ್ನೋ ಚಿಕನ್ ಕಾರಿ ಹ್ಯಾಂಡ್ ವರ್ಕ್ಸ್ , ಎಂಬ್ರಾಯ್ಡರಿ ಟಾಫ್ಸ್ , ಕುರ್ತಿ, ಮರಾಠ ಶರ್ಟ್ , ಕುರ್ತಿ ಪೈಜಾಮ, ಬ್ಲೇಜರ್ , ಜೈಪುರ ಬೆಡ್ ಶೀಟ್ , ಹರಿಯಾಣ ಬೆಡ್ ಶೀಟ್ , ಹೈದರಬಾದ್ ಪಲ್ ರ್ , ಹೈದರಬಾದ್ ಸ್ಟೋನ್ಸ್ , ಬದೋಲ ಫೇಮಸ್ ಕಾರ್ಪೆಟ್ , ಸಹರಾನ್ ಪುರ್ ಪೀಠೋಪಕರಣಗಳು, ಪಿಂಗಾಣಿಗಳು, ಹೆಣ್ಣು ಮಕ್ಕಳಿಗೆ ಮುಂಬೈ ಫ್ಯಾನ್ಸಿ ಟಾಪ್ ಗಳು, ಜ್ಯುವೆಲ್ಲರಿ, ಸ್ಲಿಪ್ಪರ್ ಗಳು, 1 ಗ್ರಾಂ ಗೋಲ್ಡ್ ಜ್ಯುವೆಲ್ಲರಿ, ಕಾಶ್ಮೀರ್ ಸೂಟ್ಸ್ , ಕೊಲ್ಕತ್ತ ಕಾಟನ್ ಮೆಟಿರಿಯಲ್ ಹಾಗೂ ಪುಸ್ತಕ ಪ್ರಿಯರಿಗೆ 99 ರೂ.ಗಳಿಂದ ಪುಸ್ತಕಗಳು ದೊರೆಯುತ್ತವೆ. ಅಲ್ಲದೇ ಹ್ಯಾಂಡ್ ಲೂಮ್ ಸೀರೆಗಳು, ಉಡುಪುಗಳು, ಹ್ಯಾಂಡಿಕ್ರಾಫ್ಟ್ ವಸ್ತುಗಳು, ಅಲಂಕಾರಿಕ ಸಾಮಗ್ರಿಗಳು, ಮಣ್ಣಿನ ಹಾಗೂ ಮರದ ಕಲಾಕೃತಿಗಳು ಸೇರಿದಂತೆ ವೈವಿಧ್ಯಮಯ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯಲಿವೆ.
ಪ್ರತಿದಿನ ಬೆಳಿಗ್ಗೆ 10.30ರಿಂದ ರಾತ್ರಿ 9ರವರೆಗೆ ಮೇಳ ನಡೆಯಲಿದ್ದು, ಪ್ರವೇಶ ಹಾಗೂ ಪಾಕಿಂರ್ ಗ್ ಉಚಿತವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಈ ಬಾರಿ ಹೊಸ ಸಂಗ್ರಹಗಳನ್ನು ಪರಿಚುಸುತ್ತಿದ್ದು, ವಿಶೇಷ ರಿಯಾುತಿಗಳೊಂದಿಗೆ ಗ್ರಾಹಕರನ್ನು ಆಕರ್ಷಿಸಲು ಸಿದ್ಧತೆ ನಡೆಸಿದ್ದಾರೆ. ಹಾಸನ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಈ ಬೃಹತ್ ‘ನ್ಯೂ ಇಂಡಿಯನ್ ಕ್ರಾಫ್ಟ್ ಶಾಪಿಂಗ್ ಎಕ್ಸ್ ಪೋ’ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಭೇಟಿ ನೀಡಿ ಭಾರತೀಯ ಕರಕುಶಲ ವಸ್ತುಗಳನ್ನು ಖರೀದಿಸಬಹುದಾಗಿದೆ.