ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜಿನ ಸ್ವಾಮಿ ವಿವೇಕಾನಂದ ಅಧ್ಯಯನ ಮತ್ತು ಯೋಗ ಕೇಂದ್ರದ ವತಿಯಿಂದ ನಿರಂತರ 52ನೇ ವರ್ಷದ ನೈತಿಕ ಮತ್ತು ಆಧ್ಯಾತ್ಮಿಕ ಶಿಬಿರ ಅ.13ರಂದು ಕಾಲೇಜಿನ ಶ್ರೀರಾಮಕೃಷ್ಣ ಸಭಾಂಗಣದಲ್ಲಿನಡೆಯಲಿದೆ.
ಮಂಗಳೂರು ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಯುಗೇಶಾನಂದಜೀ ಶಿಬಿರ ಉದ್ಘಾಟಿಸಿ, ಅನುಗ್ರಹ ಸಂದೇಶ ನೀಡುವರು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸಿಎ ಶಿವಾನಂದ ಪೈ ಅಧ್ಯಕ್ಷತೆ ವಹಿಸುವರು. ವಿದ್ವಾಂಸ, ವಾಗ್ಮಿ, ಯಕ್ಷಗಾನ ಅರ್ಥಧಾರಿ ಪವನ್ ಕಿರಣಕೆರೆ ‘ಆಧುನಿಕ ಜೀವನಶೈಲಿಯಲ್ಲಿಅಧ್ಯಾತ್ಮ’ ವಿಷಯದಲ್ಲಿನೈತಿಕ ಮೌಲ್ಯಗಳ ಕುರಿತು ಹಾಗೂ ಹಿರಿಯ ವಕೀಲ ಎ.ಎಸ್ .ಎನ್ .ಹೆಬ್ಬಾರ್ ‘ಪಾಮರರ ಅಧ್ಯಾತ್ಮ’ ವಿಷಯದ ಕುರಿತು ಮಾತನಾಡುವರು ಎಂದು ಕಾಲೇಜಿನ ಪ್ರಿನ್ಸಿಪಾಲ್ ಡಾ.ಮಂಜುನಾಥ ಎ.ಕೋಟ್ಯಾನ್ ತಿಳಿಸಿದ್ದಾರೆ.